ಮಕ್ಕಳು ಜನಿಸಿದ ನಂತರ ಅವರಿಗೆ ಸೂಕ್ತವಾದ ಹೆಸರಿಡಲು ಪೋಷಕರು ತಡಕಾಡುತ್ತಾರೆ. ಊರಲ್ಲಿ ಇದ್ದ ಪುರೋಹಿತರ ಬಳಿ ಹೋಗಿ ಮಗು ಜನಿದ ಸಮಯ, ರಾಶಿ, ನಕ್ಷತ್ರ ನೋಡಿಕೊಂಡು ಕೊನೆಗೊಂದು ಹೆಸರನ್ನು ಆಯ್ಕೆ ಮಾಡುತ್ತಾರೆ. ಅದರಲ್ಲೂ ತಂದೆಯ ಕುಟುಂಬದವರು ಮಗುವಿಗೆ ಹೆಸರೊಂದನ್ನ ಇಟ್ಟರೆ, ತಾಯಿಯ ಪೋಷಕರು ಮತ್ತೊಂದು ಹೆಸರಿನಲ್ಲಿ ಮಗುವನ್ನು ಕರೆಯುವ ಪ್ರಸಂಗವೂ ಉಂಟು.