ಪ್ರಾಗ್ಜೀವಶಾಸ್ತ್ರಜ್ಞರ ತಂಡವು ಧಾರ್ ಜಿಲ್ಲೆಯ ಬಾಗ್ ಮತ್ತು ಕುಕ್ಷಿ ಪ್ರದೇಶಗಳಲ್ಲಿರುವ ಅನೇಕ ಗ್ರಾಮಗಳಲ್ಲಿ 2017 ರಿಂದ 2020 ರವರೆಗೆ ಅಧ್ಯಯನ ನಡೆಸಿತ್ತು. ಜೊತೆಗೆ ಹರ್ಷ ಧೀಮಾನ್, ವಿಶಾಲ್ ವರ್ಮಾ, ಜಿ ವಿ ಆರ್ ಪ್ರಸಾದ್ ಮತ್ತು ಇತರರು ಅವರ ಸಂಶೋಧನೆಯ ಕುರಿತಾದ ಲೇಖನವು ಇತ್ತೀಚೆಗೆ ಪ್ರಕಟಿಸಲಾಯಿತು. ಈ ಧಾರ್ ಜಿಲ್ಲೆಯ ಹಳ್ಳಿಗಳಲ್ಲಿ ನೋಡಬಹುದಾದ ಗೂಡುಗಳು ಹಾಗು ಮೊಟ್ಟೆಗಳು ಸುಮಾರು 66 ಮಿಲಿಯನ್ ವರ್ಷಗಳಷ್ಟು ಹಿಂದಿನವು ಎಂದು ಹೇಳಲಾಗಿದೆ. ಈ ಅಧ್ಯಯನವು ಸುಮಾರು 3 ವರ್ಷಗಳದ್ದು ಎಂಬುದು ಇನ್ನೊಂದು ಆಶ್ಚರ್ಯಕರ ಸಂಗತಿ.