ಹಿಮಾಚಲ ಪ್ರದೇಶದ ಮಣಿಕರ್ಣ ಕಣಿವೆಯ ಪಿನಿ ಗ್ರಾಮದಲ್ಲಿ ಶತಮಾನಗಳ ಹಳೆಯ ಸಂಪ್ರದಾಯವನ್ನು ಅನುಸರಿಸಿಕೊಂಡು ಮಹಿಳೆಯರು ಇಂದಿಗೂ ಬಟ್ಟೆ ಧರಿಸುವುದಿಲ್ಲ. ಅದೇ ಸಮಯದಲ್ಲಿ, ಈ ಗ್ರಾಮವು ಪುರುಷರಿಗೆ ಸಹ ಕಟ್ಟುನಿಟ್ಟಾದ ಸಂಪ್ರದಾಯವನ್ನು ಹೊಂದಿದೆ. ಅದನ್ನು ಅವರು ಅನುಸರಿಸಲೇಬೇಕು. ಸಂಪ್ರದಾಯದ ಪ್ರಕಾರ, ವರ್ಷದಲ್ಲಿ 5 ದಿನಗಳು ಮಹಿಳೆಯರು ಯಾವುದೇ ಬಟ್ಟೆಯನ್ನು ಧರಿಸುವುದಿಲ್ಲ. ಹಾಗೇ ಪುರುಷರು ಸಹ ಆಲ್ಕೋಹಾಲ್ ಕುಡಿಯುವಂತಿಲ್ಲ.
ಸಂಪ್ರದಾಯದ ಹಿಂದಿನ ಕಥೆ ಏನು?: ಪಿನಿ ಗ್ರಾಮವು ಒಮ್ಮೆ ರಾಕ್ಷಸರಿಂದ ಭಯಭೀತವಾಗಿತ್ತು ಎಂದು ಹೇಳಲಾಗುತ್ತದೆ. ಇದಾದ ನಂತರ 'ಲಹುವಾ ಘೋಂಡ್' ಎಂಬ ದೇವತೆ ಪಿನಿ ಗ್ರಾಮಕ್ಕೆ ಬಂದಿತು. ದೇವತೆಯು ರಾಕ್ಷಸನನ್ನು ಕೊಂದು ಪಿನಿ ಗ್ರಾಮವನ್ನು ರಾಕ್ಷಸರ ಭಯದಿಂದ ರಕ್ಷಿಸಿದರು. ಅಲ್ಲದೆ ಈ ಎಲ್ಲಾ ರಾಕ್ಷಸರು ಹಳ್ಳಿಯ ವಿವಾಹಿತ ಮಹಿಳೆಯರಿಗೆ ಸುಂದರವಾದ ಬಟ್ಟೆಗಳನ್ನು ನೀಡುತ್ತಿದ್ದರಂತೆ. ಇದನ್ನೆಲ್ಲಾ ತಡೆದು ದೇವತೆಗಳು ಅಸುರರನ್ನು ಸಂಹರಿಸಿ ಮಹಿಳೆಯರನ್ನು ರಕ್ಷಿಸಿದರು.
ಗಂಡ-ಹೆಂಡತಿ ನಗುವಿನ ಮೇಲೂ ನಿಷೇಧ: ಶ್ರಾವಣದ ಈ ಐದು ದಿನಗಳಲ್ಲಿ ಗಂಡ ಹೆಂಡತಿ ಒಬ್ಬರನ್ನೊಬ್ಬರು ನೋಡಿ ಮುಗುಳ್ನಗಲೂ ಸಾಧ್ಯವಿಲ್ಲ. ಈ ಸಮಯದಲ್ಲಿ ಮಹಿಳೆಯರಿಗೆ ಒಂದು ಉಡುಪನ್ನು ಮಾತ್ರ ಧರಿಸಲು ಅವಕಾಶವಿದೆ. ಈ ಸಂಪ್ರದಾಯವನ್ನು ಅನುಸರಿಸುವ ಪಿನಿ ಹಳ್ಳಿಯ ಮಹಿಳೆಯರು ಉಣ್ಣೆಯಿಂದ ಮಾಡಿದ ಪಾಟ್ಕಾವನ್ನು ಬಳಸಬಹುದು. ಈ ಅವಧಿಯಲ್ಲಿ ಪಿನಿ ಗ್ರಾಮದ ಜನರು ಹೊರಗಿನವರನ್ನು ಗ್ರಾಮಕ್ಕೆ ಪ್ರವೇಶಿಸಲು ಬಿಡುವುದಿಲ್ಲ. ಅಲ್ಲದೆ ಅವರ ಈ ವಿಶೇಷ ಹಬ್ಬದಲ್ಲಿ ಹೊರಗಿನವರು ಭಾಗವಹಿಸುವಂತಿಲ್ಲ.