Photos: ಹೊಸಾ ವರ್ಷವನ್ನು ಬರಮಾಡಿಕೊಳ್ಳೋಕೆ ವಿಶ್ವದೆಲ್ಲೆಡೆ ಬೆಳಕಿನ ಚಿತ್ತಾರ, ಎಲ್ಲೆಲ್ಲಿ ಹೇಗಿದೆ ಸಂಭ್ರಮ?
ಈಗ ಎಲ್ಲೆಲ್ಲೂ ಬಣ್ಣದ ದೀಪಗಳದ್ದೇ ಚಿತ್ರ-ಚಿತ್ತಾರ. ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂಭ್ರಮಕ್ಕೆ ಈ ದೀಪಗಳು ಹೆಚ್ಚು ಮೆರುಗು ತಂದಿವೆ. ವಿಶ್ವದ ನಾನಾ ಮೂಲೆಗಳಲ್ಲಿ ಕ್ರಿಸ್ಮಸ್ ಮತ್ತು ಹೊಸಾ ವರ್ಷದ ಸಂಭ್ರಮಾಚರಣೆ ಹೇಗಿದೆ ಎನ್ನುವ ಸುಂದರ ಚಿತ್ರಗಳು ಇಲ್ಲಿವೆ.
ಜಪಾನಿನ ಟೋಕ್ಯೋdಲ್ಲಿ ಬಣ್ಣಬಣ್ಣದ ದೀಪಗಳ ಅಲಂಕಾರ ಮಾಡಿದ ಒಂದು ಮಾರ್ಗವನ್ನೇ ಸಜ್ಜುಗೊಳಿಸಲಾಗಿದೆ. ಹೊಸಾ ವರ್ಷದೊಳಗೆ ಬೆಳಕಿನ ನಡಿಗೆ ಹೋದಂತೆ ಭಾಸವಾಗುತ್ತದೆ ಎಂದು ಅಲ್ಲಿ ಓಡಾಡಿದ ಜನ ಹೇಳಿದ್ದಾರೆ. (Image Credits: AP)
2/ 7
ಕ್ರಿಸ್ಮಸ್ ಮತ್ತು ಹೊಸಾ ವರ್ಷಕ್ಕಾಗಿ ಸಿರಿಯಾ ದೇಶದ ಡಮಾಸ್ಕಸ್ ನಗರದಲ್ಲಿ ಕ್ರಿಸ್ಮಸ್ ರಜಾದಿನಗಳಿಗಾಗಿ ಸುಂದರವಾದ ಬಣ್ಣಬಣ್ಣದ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಇವುಗಳೆಡೆಯಲ್ಲಿ ಓಡಾಡುವುದೇ ಒಂದು ಖುಷಿಯ ವಿಚಾರ ಎಂದಿದ್ದಾರೆ ಜನ. (Image Credits: AP)
3/ 7
ಸ್ಪೇನ್ನ ವೀಗೋದಲ್ಲಿ ಮಗುವನ್ನು ಹಿಡಿದುಕೊಂಡಿರುವ ಮಹಿಳೆ ಬಣ್ಣದ ದೀಪಗಳಿಂದ ಮಾಡಿದ ಬೃಹತ್ ಕ್ರಿಸ್ಮಸ್ ವೃಕ್ಷದ ಕೆಳಗೆ ನಿಂತಿದ್ದಾರೆ. ಬದಲಾಗುವ ಈ ಬಣ್ಣಗಳ ದೀಪ ಹಬ್ಬ ಮತ್ತು ಹೊಸಾ ವರ್ಷದ ಆಚರಣೆಗೆ ಮತ್ತಷ್ಟು ಮೆರುಗು ತುಂಬಿದೆ. (Image Credits: AP)
4/ 7
ಲಾ ಸಾಂಟಾ ಮ್ಯುರೇಟ್ ರೀತಿ ವೇಷ ತೊಟ್ಟಿರುವ ವ್ಯಕ್ತಿಯೊಬ್ಬ ಮೆಕ್ಸಿಕೊದ ಮುಖ್ಯ ಬೀದಿಯಲ್ಲಿ ನಿಂತು ಫೋಟೊಗೆ ಪೋಸ್ ಕೊಟ್ಟಿದ್ದಾನೆ. ಕ್ರಿಸ್ಮಸ್ ನ ಬಣ್ಣದ ದೀಪಗಳು ಆತನ ಹಿಂದೆ ಹೊಳೆಯುತ್ತಿದ್ದು ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿರುವುದನ್ನು ಸೂಚಿಸುತ್ತವೆ. (Image Credits: AP)
5/ 7
ಕ್ರಿಸ್ಮಸ್ ಸಂದರ್ಭದಲ್ಲಿ ಚರ್ಚ್ಗಳಲ್ಲಿ ಮಾಡುವ ಅಲಂಕಾರಗಳು ನಿಜಕ್ಕೂ ಸುಂದರ. ವಿಶ್ವದ ನಾನಾ ಮೂಲೆಗಳಲ್ಲಿ ಈ ದಿನಕ್ಕಾಗಿಯೇ ಅನೇಕರು ಕಾಯುತ್ತಿರುತ್ತಾರೆ. ಜೆರುಸಲೆಮ್ನ ಓಲ್ಡ್ ಸಿಟಿಯ ಚರ್ಚ್ ಒಂದರ ಎದುರು ನನ್ ಒಬ್ಬರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. (Image Credits: AP)
6/ 7
ಈಗಿನ ಕ್ರಿಸ್ಮಸ್ ಮತ್ತು ಹೊಸಾ ವರ್ಷದ ಅಲಂಕಾರಗಳು ಅಂದ್ರೆ ಅದರೊಳಗಿಂತ ನೀವು ಓಡಾಡಬಹುದು, ಅಷ್ಟು ವೈಭವೋಪೇತವಾಗಿರುತ್ತದೆ. ಫಿಲಿಪೀನ್ಸ್ನ ಪ್ಯಾಸಿಯಲ್ಲಿ ಮಾಲ್ ಒಂದರ ಬಳಿ ಮಾಡಿರುವ ಕ್ರಿಸ್ಮಸ್ ಡ್ರೈ ವ್ ಥ್ರೂ ನ ಸುಂದರ ದೃಶ್ಯ. (Image Credits: AP)
7/ 7
ದಕ್ಷಿಣ ಆಫ್ರಿಕಾದ ಸಿಟಿ ಜೂನಲ್ಲೂ ಬಣ್ಣದ ದೀಪಗಳ ಮಾರ್ಗವನ್ನೇ ನಿರ್ಮಿಸಲಾಗಿದೆ. ಕುಟುಂಬ ಸಮೇತವಾಗಿ ಜೂ ಗೆ ಭೇಟಿ ಕೊಡ್ತಿರೋ ಜನ ಇವೆಲ್ಲವೂ ನೋಡಿ ಆನಂದಿಸುತ್ತಿದ್ದಾರೆ. (Image Credits: AP)