Viral Photo: ವೃದ್ಧನ ಜೊತೆ ರಸ್ತೆ ಬದಿಯಲ್ಲಿಯೇ ಕುಳಿತ IAS ಅಧಿಕಾರಿ
ಕಳೆದ ಕೆಲ ದಿನಗಳಿಂದ ಟ್ವಿಟರ್ ನಲ್ಲಿ ಫೋಟೋವೊಂದು (Viral Photo) ಮಿಂಚಿನಂತೆ ಹರಿದಾಡುತ್ತಿದೆ. ರಸ್ತೆ ಬದಿ ಓರ್ವ ಐಎಎಸ್ ಅಧಿಕಾರಿ (IAS Officer) ವೃದ್ಧರೊಬ್ಬರ ಜೊತೆ ಕುಳಿತು ಮಾತನಾಡುತ್ತಿದ್ದಾರೆ. ಸಾಮಾನ್ಯರಂತೆ ರಸ್ತೆ ಬದಿ ಯಾವುದೇ ಕುರ್ಚಿ ಅಥವಾ ಹಾಸಿಗೆ ಸಹ ಹಾಕಿಕೊಳ್ಳದೇ ವೃದ್ಧನ (Old Man) ಜೊತೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಐಎಎಸ್ ಅಧಿಕಾರಿಯ ಸರಳತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,
ಐಎಎಸ್ ಅಧಿಕಾರಿ ರಮೇಶ್ ಘೋಲಾಪ್ (Ramesh Gholap) ಅವರ ಫೋಟೋಗಳು ವೈರಲ್ ಆಗುತ್ತಿವೆ. ಈ ಫೋಟೋಗಳನ್ನು ಹಂಚಿಕೊಂಡಿರುವ ಟ್ವೀಟ್ ಗೆ 4 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿವೆ. ಫೋಟೋಗಳಿಗೆ ಸುಂದರವಾದ ಸಾಲುಗಳನ್ನು ಸಹ ರಮೇಶ್ ಅವರು ಬರೆದುಕೊಂಡಿದ್ದಾರೆ.
2/ 5
ನನ್ನ ಈ ಮಣ್ಣಿನ ಸೆಳೆಯ ಯಾವುದಕ್ಕಿಂತಲೂ ಕಡಿಮೆ ಇಲ್ಲ, ನಮ್ಮನ್ನು ಬಲವಾಗಿ ಈ ಮಣ್ಣು ಅಪ್ಪಿಕೊಳ್ಳುತ್ತದೆ. ಅಮೃತಶಿಲೆಯ ಮೇಲೆ ಜಾರಿ ಬೀಳಬಹುದು, ಆದ್ರೆ ಈ ಮಣ್ಣಿನ ಮೇಲೆ ಜಾರಿ ಬಿದ್ದ ಉದಾಹರಣೆಹಗಳಿಲ್ಲ ಎಂದು ಭೂ ತಾಯಿಯ ಕುರಿತು ಬರೆದುಕೊಂಡಿರುವ ಸಾಲುಗಳು ಸಹ ವೈರಲ್ ಆಗಿವೆ.
3/ 5
ರಮೇಶ್ ಅವರು ಪ್ರಯಾಣಿಸುತ್ತಿದ್ದ ಮಾರ್ಗ ಮಧ್ಯೆ ಓರ್ವ ವೃದ್ಧನನ್ನು ಕಂಡಿದ್ದಾರೆ. ತಕ್ಷಣವೇ ತಮ್ಮ ಕಾರ್ ನಿಲ್ಲಿಸಿ, ಇಳಿದು ಹೋಗಿ ಕೆಲ ಸಮಯ ಕುಶಲೋಪಚರಿ ವಿಚಾರಿಸಿದ್ದಾರೆ. ಅಲ್ಲಿಯೇ ಮಗನಂತೆ ವೃದ್ಧನ ಪಕ್ಕವೇ ಕುಳಿತುಕೊಂಡಿದ್ದಾರೆ.
4/ 5
ಸದ್ಯ ರಮೇಶ್ ಘೋಲಾಪ್ ಜಾರ್ಖಂಡ್ ರಾಜ್ಯದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಮೇಶ್ ಘೋಲಾವ್ 2012ರ ಐಎಎಸ್ ಬ್ಯಾಚ್ ನವರು. ಮೂಲತಃ ಮಹಾರಾಷ್ಟ್ರದವರು ಆಗಿದ್ದಾರೆ.
5/ 5
ರಮೇಶ್ ಘೋಲಾಪ್ ಅವರ ಫೋಟೋಗಳಿಗೆ ಹಲವು ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸರಳತೆ, ಮಾನವೀಯತೆ, ಸಮಾನತೆ, ಗೌರವ ಎಂಬಿತ್ಯಾದಿ ಕಮೆಂಟ್ ಗಳನ್ನು ಮಾಡಲಾಗುತ್ತಿದೆ. ನಗು ಸಾಮನ್ಯ ವ್ಯಕ್ತಿಯನ್ನು ಪರಿಚಯಿಸುತ್ತದೆ ಎಂದು ನೆಟ್ಟಿಗರು ಬರೆದಿದ್ದಾರೆ.