Viral Story: ಮೀಸೆ, ಗಡ್ಡ ಬಂತೆಂದು ಪತ್ನಿಯನ್ನು ಮನೆಯಿಂದ ಹೊರ ಹಾಕಿದ ಪತಿ, ಇದು ಗಡ್ಡ ಬಿಟ್ಟ ಮಹಿಳೆಯ ಕಥೆ!

ಪಂಜಾಬ್ ಮೂಲದ ಮಂದೀಪ್ ಕೌರ್ ಎಂಬ ಮಹಿಳೆ ಮೀಸೆ ಮತ್ತು ಗಡ್ಡ ಬೆಳೆಸಿದ್ದಾಳೆ. ಈಗ ಎಲ್ಲೆಲ್ಲೂ ಆಕೆಯ ಕಥೆ ವೈರಲ್ ಆಗಿದೆ. ತನ್ನ ಜೀವನದಲ್ಲಿ ಅನುಭವಿಸಿದ ಸಂಕಷ್ಟಗಳಿಂದ ಹೊರ ಬಂದು ಆಕೆಯೀಗ ಹೊಸ ಜೀವನ ನಡೆಸುತ್ತಿದ್ದಾಳೆ. ಯಾರಿಗೂ ಅಂಜದೇ, ಅಳುಕದೇ, ಅವಮಾನ ಪಡದೇ ಮೀಸೆ, ಗಡ್ಡ ಕತ್ತರಿಸದೇ ಹಾಗೆಯೇ ಜೀವನ ನಡೆಸುತ್ತಿದ್ದಾಳೆ.

First published:

  • 18

    Viral Story: ಮೀಸೆ, ಗಡ್ಡ ಬಂತೆಂದು ಪತ್ನಿಯನ್ನು ಮನೆಯಿಂದ ಹೊರ ಹಾಕಿದ ಪತಿ, ಇದು ಗಡ್ಡ ಬಿಟ್ಟ ಮಹಿಳೆಯ ಕಥೆ!

    ಈಕೆಯ ಹೆಸರು ಮಂದೀಪ್ ಕೌರ್. ಪಂಜಾಬ್ ಮೂಲದ ಮಹಿಳೆ. ಮೊದಲು ಈಕೆ ಮದುವೆಯಾಗಿ ಸುಖ ಜೀವನ ನಡೆಸಿದವಳು. ಆದರೆ ಅದ್ಯಾವಾಗ ಆಕೆಗೆ ಗಡ್ಡ ಮತ್ತು ಮೀಸೆ ಬಂತೋ ಆಗಲೇ ಸಂತಸವು ಕಣ್ಣೀರಾಗಿ ಬದಲಾಯಿತು.

    MORE
    GALLERIES

  • 28

    Viral Story: ಮೀಸೆ, ಗಡ್ಡ ಬಂತೆಂದು ಪತ್ನಿಯನ್ನು ಮನೆಯಿಂದ ಹೊರ ಹಾಕಿದ ಪತಿ, ಇದು ಗಡ್ಡ ಬಿಟ್ಟ ಮಹಿಳೆಯ ಕಥೆ!

    ಮಂದೀಪ್ ಕೌರ್ ಎಂಬ ಈ ಮಹಿಳೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದಾಳೆ. ಈಕೆಯನ್ನು ಈಗ ಜನರು ಗಡ್ಡ ಮತ್ತು ಮೀಸೆ ಬಿಟ್ಟ ಮಹಿಳೆ ಎಂದೇ ಕರೆಯುತ್ತಾರೆ. ಇದೀಗ ಮಂದೀಪ್ ಕೌರ್ ತಲೆಗೆ ಪೇಟ ಸುತ್ತಿ ಪುರುಷನಾಗಿ ಬದಲಾಗಿದ್ದಾರೆ.

    MORE
    GALLERIES

  • 38

    Viral Story: ಮೀಸೆ, ಗಡ್ಡ ಬಂತೆಂದು ಪತ್ನಿಯನ್ನು ಮನೆಯಿಂದ ಹೊರ ಹಾಕಿದ ಪತಿ, ಇದು ಗಡ್ಡ ಬಿಟ್ಟ ಮಹಿಳೆಯ ಕಥೆ!

    ತನ್ನ ಮುಖದ ಮೇಲೆ ಬಂದ ಕೂದಲಿನಿಂದಾಗಿ ಪ್ರೀತಿ ಕೊಟ್ಟ ಗಂಡನಿಂದಲೇ ತಿರಸ್ಕಾರಕ್ಕೆ ಒಳಗಾಗಿದ್ದಾಳೆ. ಕೊನೆಗೆ ಗಂಡ ಮನೆಯಿಂದ ಹೊರ ಹಾಕಿದ್ದಾನೆ. ಸಾಕಷ್ಟು ಕಷ್ಟದಿಂದ ಮನೆಯಿಂದ ಹೊರ ಬಂದ ಮಂದೀಪ್ ಕೌರ್ ತನ್ನದೇ ಆದ ರೀತಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.

    MORE
    GALLERIES

  • 48

    Viral Story: ಮೀಸೆ, ಗಡ್ಡ ಬಂತೆಂದು ಪತ್ನಿಯನ್ನು ಮನೆಯಿಂದ ಹೊರ ಹಾಕಿದ ಪತಿ, ಇದು ಗಡ್ಡ ಬಿಟ್ಟ ಮಹಿಳೆಯ ಕಥೆ!

    ಈಗ ಮಂದೀಪ್ ಕೌರ್ ಜೀವನದ ಸಂಘರ್ಷದ ಕಥೆ ಎಲ್ಲೆಲ್ಲೂ ವೈರಲ್ ಆಗಿದೆ. ಆಕೆ ಈಗ ತನ್ನ ಹೋರಾಟದ ಜೀವನದ ಬಗ್ಗೆ ಮಾತನಾಡುತ್ತಿದ್ದಾರೆ. ಹೇಗೆ ಅವಳ ಸುಂದರ ಸಂಸಾರಕ್ಕೆ ತನಗೆ ಬಂದ ಗಡ್ಡ ಮತ್ತು ಮೀಸೆ ಮುಳುವಾಯಿತು ಎಂದು ತಿಳಿಸಿದ್ದಾರೆ.

    MORE
    GALLERIES

  • 58

    Viral Story: ಮೀಸೆ, ಗಡ್ಡ ಬಂತೆಂದು ಪತ್ನಿಯನ್ನು ಮನೆಯಿಂದ ಹೊರ ಹಾಕಿದ ಪತಿ, ಇದು ಗಡ್ಡ ಬಿಟ್ಟ ಮಹಿಳೆಯ ಕಥೆ!

    ಈಗ ಸಂಘರ್ಷದ ಜೀವನದಿಂದ ಹೊರ ಬಂದಿರುವ ಮಂದೀಪ್ ಕೌರ್ ಗಟ್ಟಿಯಾಗಿದ್ದಾರೆ. ಎಲ್ಲಾ ಸಂಕಷ್ಟ ಅವಮಾನ ಮೆಟ್ಟಿ ನಿಂತಿದ್ದಾರೆ. ಮುಖದ ಕೂದಲು ತನಗೆ ಶಕ್ತಿ ತುಂಬುತ್ತಿದೆ. ಅದನ್ನು ಯಾವತ್ತೂ ತೆಗೆಯಲ್ಲ ಎನ್ನುತ್ತಾರೆ.

    MORE
    GALLERIES

  • 68

    Viral Story: ಮೀಸೆ, ಗಡ್ಡ ಬಂತೆಂದು ಪತ್ನಿಯನ್ನು ಮನೆಯಿಂದ ಹೊರ ಹಾಕಿದ ಪತಿ, ಇದು ಗಡ್ಡ ಬಿಟ್ಟ ಮಹಿಳೆಯ ಕಥೆ!

    2012 ರಲ್ಲಿ ತಾನು ಮದುವೆಯಾದಾಗ ಮುಖದ ಮೇಲೆ ಕೂದಲು ಇರಲಿಲ್ಲ. ಆಗ ತನ್ನ ಪತಿ ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ. ಆದರೆ ಪರಿಸ್ಥಿತಿ ಬದಲಾಗಿ ಗಡ್ಡ ಮತ್ತು ಮೀಸೆ ಬರತೊಡಗಿತು. ಆಗ ಪತಿ ಪತ್ನಿಯನ್ನು ಮನೆಯಿಂದ ಆಚೆಗೆ ಹಾಕಿದ್ದಾರೆ.

    MORE
    GALLERIES

  • 78

    Viral Story: ಮೀಸೆ, ಗಡ್ಡ ಬಂತೆಂದು ಪತ್ನಿಯನ್ನು ಮನೆಯಿಂದ ಹೊರ ಹಾಕಿದ ಪತಿ, ಇದು ಗಡ್ಡ ಬಿಟ್ಟ ಮಹಿಳೆಯ ಕಥೆ!

    ಮುಂದೆ ಗಂಡ, ಮಂದೀಪ್ ಕೌರ್ ಗೆ ವಿಚ್ಛೇದನ ನೀಡುತ್ತಾನೆ. ನಂತರದ ದಿನಗಳಲ್ಲಿ ಸಾಕಷ್ಟು ಖಿನ್ನತೆಗೆ ಒಳಗಾಗಿದ್ದ ಮಂದೀಪ್ ಕೌರ್ , ಕ್ರಮೇಣವಾಗಿ ಹೊರ ಬಂದಳು. ತನ್ನ ವಾಸ್ತವ ಬದುಕನ್ನು ಒಪ್ಪಿದಳು. ನಂತರ ಗುರುದ್ವಾರಕ್ಕೆ ಬರಲಾರಂಭಿಸಿದಳು.

    MORE
    GALLERIES

  • 88

    Viral Story: ಮೀಸೆ, ಗಡ್ಡ ಬಂತೆಂದು ಪತ್ನಿಯನ್ನು ಮನೆಯಿಂದ ಹೊರ ಹಾಕಿದ ಪತಿ, ಇದು ಗಡ್ಡ ಬಿಟ್ಟ ಮಹಿಳೆಯ ಕಥೆ!

    ಕೌರ್ ಕೃಷಿ ಕಾಯಕಕ್ಕೆ ಕೈ ಹಾಕಿದಳು. ನಂತರ ಮೀಸೆ ಮತ್ತು ಗಡ್ಡವನ್ನು ತೆಗೆಸುವ ಗೋಜಿಗೆ ಹೊಗಲಿಲ್ಲ. ಸಿಖ್ ಧರ್ಮದ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್ ತನ್ನ ಪರಿಸ್ಥಿತಿಯಿಂದ ಹೊರಬರಲು ಸಹಾಯ ಮಾಡಿತು. ತಲೆಗೆ ಪೇಟ ಸುತ್ತಿಕೊಂಡು, ಮೋಟಾರ್ ಬೈಕ್, ಟೆಂಪೋ ಚಲಾಯಿಸುತ್ತಾರೆ.

    MORE
    GALLERIES