ಡೈಲಿ ಸ್ಟಾರ್ ನ್ಯೂಸ್ ವೆಬ್‌ಸೈಟ್ ವರದಿಗಳ ಪ್ರಕಾರ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಬೃಹತ್ ಬಂಡೆಯನ್ನು ಟ್ರ್ಯಾಕ್ ಮಾಡುತ್ತಿದೆ ಈಗ ಈ ಕಲ್ಲು ಭೂಮಿಯ ಕಕ್ಷೆ ಸೇರಬಹುದು ಎಂಬ ಸುದ್ದಿ ಬಂದಿದೆ ಈ ಬಂಡೆಯು ಭೂಮಿಗೆ ಬಹಳ ಹತ್ತಿರ ಬಂದು ಡಿಕ್ಕಿ ಹೊಡೆಯುತ್ತದೆ ಈ ಬೃಹತ್ ಕ್ಷುದ್ರಗ್ರಹವನ್ನು 199145 (2005 YY128) ಎಂದು ಹೆಸರಿಸಲಾಗಿದೆ. ಈ ಕಲ್ಲು ಸುಮಾರು 1 ಕಿಮೀ ಅಗಲವಿದೆ ಈ ಕ್ಷುದ್ರಗ್ರಹವು ಭೂಮಿಯ ಕಕ್ಷೆಯನ್ನು ಪ್ರವೇಶಿಸುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ ಫೋಟೋ ಕೃಪೆ - NASA
ಈ ಬಂಡೆಯು ಭೂಮಿಯ ಮೂಲಕ ಹಾದು ಹೋಗಲಿದೆ , ಈ ಕ್ಷುದ್ರಗ್ರಹವು 1870 ರಿಂದ 4266 ಅಡಿಗಳಷ್ಟು ದೊಡ್ಡದಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಫೆಬ್ರವರಿ 16 ರಂದು ಈ ಬಂಡೆಯು ಭೂಮಿಯ 4.5 ಮಿಲಿಯನ್ ಕಿಲೋಮೀಟರ್ ಒಳಗೆ ಬರಲಿದೆ ಎಂದು NASA ಊಹಿಸಿದೆ. ಆದರೆ ಈ ಬಂಡೆಯು ಭೂಮಿಗೆ ಅಪ್ಪಳಿಸುತ್ತದೆ ಎಂದು NASA ಇನ್ನೂ ಸಂಪೂರ್ಣವಾಗಿ ಖಚಿತಪಡಿಸಿಲ್ಲ. ಆದ್ದರಿಂದ ಇದೀಗ ಗಾಬರಿಯಾಗದಂತೆ ಸೂಚಿಸಲಾಗಿದೆ.