ಸಿಲಿಕಾನ್ ಸಿಟಿ ಬೆಂಗಳೂರು ಯಾವುದಕ್ಕೂ ಕಮ್ಮಿ ಇಲ್ಲ. ಇಲ್ಲಿನ ಹೈಫೈ ರೆಸ್ಟೋರೆಂಟ್‌ಗಳು, ಕೆಫೆಗಳು ಮತ್ತೊಂದು ಹೈಲೈಟ್. ಇಲ್ಲಿರುವ ಅತ್ಯುತ್ತಮ ಆಂಬಿಯೆನ್ಸ್ ಜೊತೆಗೆ ಆಹಾರ ಹಾಗೂ ಪಾನೀಯಗಳ ರುಚಿ ಸವಿಯೋದೇ ಒಂದು ಡಿಫರೆಂಟ್ ಎಕ್ಸ್‌ಪೀರಿಯೆನ್ಸ್. ಹಾಗೆಯೇ ಇಂಥ ಸ್ಥಳಗಳಲ್ಲಿ ಉಚಿತ ವೈಫೈ ಕೂಡ ಇರುವುದು ಮತ್ತಷ್ಟು ಪ್ರಯೋಜನಕಾರಿ. ಅಲ್ಲಿಗೆ ಭೇಟಿ ನೀಡಿದಂತಹ ಜನರ ಫೀಡ್‌ಬ್ಯಾಕ್ ಹಾಗೂ ರಿರ್ವ್ಯೂಗಳನ್ನು ಆಧರಿಸಿ, ನಮ್ಮ ಬೆಂಗಳೂರಿನಲ್ಲಿ ಉಚಿತ ವೈಫೈ ಹೊಂದಿರುವಂಥ ಅತ್ಯುತ್ತಮ ಸ್ಥಳಗಳು ಯಾವವು ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲಿದೆ.
ಚರ್ಚ್ ಸ್ಟ್ರೀಟ್ ಸೋಶಿಯಲ್: ವಿಶಿಷ್ಟ ಆಂಬಿಯನ್ಸ್ ಹೊಂದಿರುವ ಈ ರೆಸ್ಟೋರೆಂಟ್ ಬಗ್ಗೆ ಅನೇಕರು ಒಳ್ಳೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಶಾಲಿನಿ ಸಿಂಗ್ ಎಂಬುವವರು ಲವ್ ದ ಫ್ರೀ ವೈಫೈ ನನ್ನ ನೆಚ್ಚಿನ ಪಾನೀಯವನ್ನು ಹೀರುತ್ತಾ ಮತ್ತು ಉತ್ತಮ ಸಂಗೀತವನ್ನು ಆನಂದಿಸುತ್ತಾ ಶಾಂತಿಯುತ ಸಮಯವನ್ನು ಹೊಂದಬಹುದು ಎಂದು ಹೇಳಿದ್ದಾರೆ. ನಿಗಿಲ್ಯಾ ಎಂಬುವವರು ನನ್ನ ಚೈನಾ ಬಾಕ್ಸ್ ತುಂಬಾ ಡಿಲಿಶ್ ಆಗಿತ್ತು. ಮತ್ತೊಮ್ಮೆ ಭೇಟಿ ನೀಡಲು ಇಷ್ಟಪಡುತ್ತೇನೆ! ಎಂದಿದ್ದಾರೆ. ಇನ್ನು ನಿತಿನ್ ಎಂಬುವವರು BBQ ಬೋರ್ಡ್ ಮತ್ತು ಸ್ಯಾಡಲ್‌ಬ್ಯಾಗ್ ಪ್ಯಾನ್‌ಕೇಕ್‌ಗಳನ್ನು ಟೇಸ್ಟ್ ಮಾಡಿದ್ದು, ಈ ಆಹಾರ ಬಾಂಬ್ ನಂತೆ ಸಖತ್ತಾಗಿದೆ ಎಂದು ಬರೆದಿದ್ದಾರೆ.
ಬಿಗ್ ಸ್ಟ್ರಾ: ಸೇಂಟ್ ಮಾರ್ಕ್ಸ್ ರೋಡ್‌ನಲ್ಲಿರುವ ಬಿಗ್ ಸ್ಟ್ರಾ, ಒಳ್ಳೆಯ ಅನುಭವ ಎಂದು ಅನೇಕರು ಹೇಳಿದ್ದಾರೆ. ಅವರಲ್ಲಿ ಓಂಕಾರ್ ಎಂಬುವವರು ಮಾವಿನ ಲ್ಯಾಟೆ ಅದ್ಭುತ ರುಚಿಯ ಬಗ್ಗೆ ಬರೆದಿದ್ದಾರೆ. ಹೊಸ ರೀತಿಯ ರಿಫ್ರೆಶ್ ಪಾನೀಯ, ನೀವು ಸಿಪ್ ಮಾಡಬಹುದು ಎಂದು ಹೇಳಿದ್ದಾರೆ. ರಘು ಎಂಬುವವರು ಬೆರಿಫಿಕ್ ರಿಫ್ರೆಶ್ ಡ್ರಿಂಕ್ ಸಖತ್ತಾಗಿದೆ ಎಂದು ಹೋಗಳಿದ್ದಾರೆ. ಪ್ರಿಯಾಂಕಾ ಎಂಬುವವರು ಇಲ್ಲಿಗೆ ಬಂದರೆ ರಿಫ್ರೆಶ್ ಬಬಲ್ ಟೀಯನ್ನು ಒಮ್ಮೆಯಾದರೂ ಪ್ರಯತ್ನಿಸಿ ಎಂದು ಹೇಳಿದ್ದಾರೆ.
ಮ್ಯಾಟಿಯೊ : ಚರ್ಚ್ ಸ್ಟ್ರೀಟ್‌ನಲ್ಲಿರುವ ಮ್ಯಾಟಿಯೋ ಅಷ್ಟೇನೂ ದುಬಾರಿಯಲ್ಲ ಎಂಬುದಾಗಿ ಅನೇಕರು ಹೇಳಿದ್ದಾರೆ. ಮನೋಜ್ ಎಂಬುವವರು ಸ್ನೇಹಶೀಲ ಸ್ಥಳ. ಹೆಚ್ಚು ದುಬಾರಿ ಅಲ್ಲ. ಉತ್ತಮ ಆಹಾರದ ಜೊತೆಗೆ ಉಚಿತ ವೈಫೈ ಎಂದು ಹೇಳಿದ್ದಾರೆ. ವಿನಯ್ ಎಂಬುವವರು ಕೆಲವು ಉತ್ತಮ ಕಾಫಿ ನಡುವೆ ಉಚಿತ ವೈ ಫೈ ಎಂದಿದ್ದಾರೆ. ಹಾಗೆಯೇ, ವಿಜಿಲಿನ್ ಎಂಬುವವರು ಸಲಾಡ್‌ಗಳು ಉತ್ತಮವಾಗಿದ್ದು, ಉಚಿತ ವೈಫೈ ಇದೆ ಎಂದು ಬರೆದಿದ್ದಾರೆ.
ಜ್ಯೂಸ್ ಮೇಕರ್: ಕೋರಮಂಗಲದಲ್ಲಿರುವ ಜ್ಯೂಸ್ ಮೇಕರ್ ಬಹಳ ಫೇಮಸ್. ಇದರ ಬಗ್ಗೆ ಅಖಿಲ್ ಎಂಬುವವರು ಉತ್ತಮ ಸ್ಯಾಂಡ್‌ವಿಚ್‌ಗಳು, ಮಿಕ್ಸ್ ಜ್ಯೂಸ್ ಅನ್ನು ಪ್ರಯತ್ನಿಸಿ ಹ್ಯಾಂಗ್‌ಔಟ್ ಮಾಡಲು ಉತ್ತಮ ಸ್ಥಳ ಜೊತೆಗೆ ಉಚಿತ ವೈಫೈ ಎಂದು ಬರೆದಿದ್ದಾರೆ. ಇಮ್ದಾದ್ ಎಂಬುವವರು ಈ ಸ್ಥಳ ಇಷ್ಟವಾಯಿತು. ಪೆಪ್ಪರ್ ಸಾಸ್ ಮತ್ತು ಸುಡಾಂಜಿ ಶೇಕ್ ಜೊತೆಗೆ ಸ್ಮ್ಮಾಶ್ ಮಾಡಿದ ಆಲೂಗಡ್ಡೆಯನ್ನು ಪ್ರಯತ್ನಿಸಿ ಎಂದಿದ್ದಾರೆ. ಹಾಗೆಯೇ . ನಿಚಲ್ ಎಂಬುವವರು ಕಿವಿ + ಬಾಳೆಹಣ್ಣಿನ ಮಿಲ್ಕ್ ಶೇಕ್ ಅನ್ನು ಟ್ರೈ ಮಾಡಲೇಬೇಕು ಎಂದಿದ್ದಾರೆ.
ಪಾಸ್ಟಾ ಸ್ಟ್ರೀಟ್ : ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿರುವ ಪಾಸ್ಟಾ ಸ್ಟ್ರೀಟ್‌ನಲ್ಲಿಯ ಫೂಡ್ ಸಖತ್ ಟೇಸ್ಟಿಯಾಗಿರುತ್ತದೆ ಎಂಬುದಾಗಿ ಗ್ರಾಹಕರು ಹೇಳಿದ್ದಾರೆ. ರೀತು ಕಾರ್ತಿಕ್ ಎಂಬುವವರು ಇಲ್ಲಿನ ಪಾಸ್ಟಾಗಳು ರುಚಿಕರವಾಗಿರುತ್ತವೆ. ಚಾಕೊಲೇಟ್ ಅಂತೂ ಸಖತ್ ಟೇಸ್ಟಿಯಾಗಿದೆ. ಟ್ರೀ ಮಾಡಲೇಬೇಕು ಎಂದು ಬರೆದಿದ್ದಾರೆ. ಮತ್ತೊಬ್ಬ ಗ್ರಾಹಕರು ನೀವು ಅಧಿಕೃತ ರುಚಿಕರವಾದ ಪಾಸ್ಟಾಗಾಗಿ ಹಂಬಲಿಸುತ್ತಿದ್ದರೆ ಇದು ಅತ್ಯುತ್ತಮ ಸ್ಥಳವಾಗಿದೆ ಎಂದಿದ್ದಾರೆ.
ದಿ ಹಮ್ಮಿಂಗ್ ಟ್ರೀ: ಇಂದಿರಾ ನಗರದಲ್ಲಿರುವ ದಿ ಹಮ್ಮಿಂಗ್ ಟ್ರೀಯಲ್ಲಿನ ರಟಾಟೂಲ್, ಆಲೂಗಡ್ಡೆ ಬೆಲ್‌ಗಳು ಮತ್ತು ಮೆನುವಿನಲ್ಲಿರುವ ಹಲವು ಐಟಂಗಳನ್ನು ಇಷ್ಟಪಟ್ಟಿದ್ದಾಗಿ ಸೌರಭ್ ಎಂಬುವವರು ಹೇಳಿದ್ದಾರೆ. ಸಂತೋಷ್ ಎಂಬುವವರು ನಿಮಗೆ ಟೇಬಲ್ ಸಿಗದಿದ್ದರೆ ನೆಲದ ಮೇಲೆ ಕುಳಿತುಕೊಳ್ಳಿ. ಅದನ್ನು ಇನ್ನಷ್ಟು ಪರಿಪೂರ್ಣಗೊಳಿಸಲು ಗಾಳಿಗೆ ತೆರೆದುಕೊಳ್ಳಿ ಎಂದು ಹೇಳಿದ್ದಾರೆ.