ಚಕ್ರವರ್ತಿ ಪೃಥ್ವಿರಾಜನು ಈ ಯುದ್ಧದಲ್ಲಿ ಸೋಲನ್ನು ಎದುರಿಸಬೇಕಾಗಿ ಬಂದರೂ, ಅವನ ಪರಾಕ್ರಮದ ಕಥೆಗಳು ಜನರನ್ನು ಇನ್ನೂ ರೋಮಾಂಚನಗೊಳಿಸುತ್ತವೆ. ಈಗ ಅಥಃಪತನದಲ್ಲಿರುವ ಈ ಐತಿಹಾಸಿಕ ಕೋಟೆಯು ಅದರೊಳಗೆ ಇತಿಹಾಸದ ಹಲವು ಪದರಗಳನ್ನು ಹೊಂದಿದೆ. ಕೋಟೆಯು ಈಗ ಉತ್ತಮ ಸ್ಥಿತಿಯಲ್ಲಿಲ್ಲ. ಆದರೆ ಅದರ ಕಟ್ಟಡಗಳು ಮತ್ತು ಇತರ ಅವಶೇಷಗಳು ಶತಮಾನಗಳ ಹಿಂದೆ ನಡೆದ ಯುದ್ಧದ ನೆನಪುಗಳನ್ನು ಮರಳಿ ತರುತ್ತವೆ.