ತಾಯಿ ಮಕ್ಕಳಿಗೆ ಆಶೀರ್ವಾದ ಮಾಡುವುದಲ್ಲದೆ ಅವರ ಮನದಾಳದ ಆಸೆಯನ್ನೆಲ್ಲ ನೀಡುತ್ತಾಳೆ ಎನ್ನುತ್ತಾರೆ ಗ್ರಾಮಸ್ಥರು. ಗ್ರಾಮಸ್ಥರು ಇಲ್ಲಿ ಕಾಲಕಾಲಕ್ಕೆ ಹವನ ಪೂಜೆಯನ್ನು ಮಾಡುತ್ತಲೇ ಇರುತ್ತಾರೆ. ಈಗ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಜನರಲ್ಲಿ ಅಮ್ಮನ ಮೇಲಿನ ಭಕ್ತಿ, ನಂಬಿಕೆ ಹೆಚ್ಚುತ್ತಿದೆ.