ನಾಯಿ ನಿಯತ್ತಿನ ಪ್ರಾಣಿ. ಹಾಗಾಗಿ ಅನೇಕರು ಮನೆಯಲ್ಲಿ ಶ್ವಾನವನ್ನು ಸಾಕಿಕೊಂಡಿರುತ್ತಾರೆ. ಅದರಲ್ಲೂ ಪರುಷರಿಗಿಂತ ಮಹಿಳೆಯರು ಮುದ್ದಾದ ನಾಯಿಮರಿಯನ್ನು ತಮ್ಮ ಕೋಣೆಯೊಳಕ್ಕೆ ಸಾಕುತ್ತಿರುತ್ತಾರೆ. ಅದರೊಂದಿಗೆ ಆಟವಾಡುತ್ತಾ, ಮುದ್ದಾಡುತ್ತಾ, ನಿದ್ರೆ ಮಾಡುತ್ತಾರೆ.
2/ 6
ಆದರೆ ನಾಯಿ ಜೊತೆಗೆ ನಿದ್ರೆ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದಂತೆ. ಹಾಗಂತ ಸಂಶೋಧಕರು ಬಹಿರಂಗಗೊಳಿಸಿದ್ದಾರೆ.
3/ 6
ನ್ಯೂಯರ್ಕ್ ಮೂಲದ ಎಕ್ಸ್ಫರ್ಟ್ ಕನೆಶೂಯ್ಸ್ ಕಾಲೇಜಿನ ಸಂಶೋಧಕರ ಈ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ. 962 ಮಹಿಳೆಯರು ನಾಯಿ ಜೊತೆಗೆ ಮಲಗುವ ಮೂಲಕ ಆರಾಮಧಾಯಕ ನಿದ್ರೆಗೆ ಜಾರುತ್ತಿದ್ದರು ಎಂದು ತಿಳಿಸಿದ್ದಾರೆ.
4/ 6
ಶೇ .57 ಮಹಿಳೆಯರು ಸಾಕು ಪ್ರಾಣಿಗಳ ಜೊತೆಗೆ ಮಲಗುವುದಿಲ್ಲ ಎಂದು ಸಂಶೋಧನೆ ಬಹಿರಂಗಗೊಳಿಸಿದೆ. ಆದರೆ ಶೇ 55 ಜನರು ನಾಯಿಯೊಂದಿಗೆ ಮಲಗುತ್ತಿದ್ದಾರೆ, ಅಂತೆಯೇ ಶೇ.31 ಜನರು ಬೆಕ್ಕಿನೊಂದಿಗೆ ಮಲಗುತ್ತಿದ್ದಾರೆ ಎಂದು ತಿಳಿಸಿದೆ.
5/ 6
ಯಾರು ಸಾಕು ನಾಯಿಯೊಂದಿಗೆ ತಮ್ಮ ಕೋಣೆಯಲ್ಲಿ ಮಲಗುತ್ತಾರೋ ಅವರ ಆರೋಗ್ಯ ಉತ್ತಮವಾಗಿರಲಿದೆ ಎಂದು ಸಂಶೋಧನೆಯಿಂದ ಬಹಿರಂಗವಾಗಿದೆ. ಏಕೆಂದರೆ ರಾತ್ರಿ ವೇಳೆ ಬೇಗ ಮಲಗುವುದು ಮತ್ತು ಬೆಳಗ್ಗಿನ ಜಾವ ಬೇಗ ಎದ್ದೇಳಲು ಈ ಮಹಿಳೆಯರು ಬಯಸುತ್ತಾರೆ ಎಂದು ತಿಳಿಸಿದೆ.
6/ 6
ಮತ್ತೊಂದೆಡೆ ನಿಯತ್ತಿನ ಪ್ರಾಣಿಯಾದ ನಾಯಿ ಜೊತಗಿದ್ದರೆ ಸುರಕ್ಷಿತವಾಗಿರುತ್ತೇವೆ ಎಂಬ ನಂಬಿಕೆಯಿಂದ ಉತ್ತಮ ನಿದ್ದೆಗೆ ಜಾರಲು ಕಾರಣವಾಗಿದೆ. ಮತ್ತೊಂದೆಡೆ ಮಾಲೀಕನಿಗೆ ಯಾವುದೇ ತೊಂದರೆಯಾದರು ನಾಯಿಗೆ ಬೇಗನೆ ತಿಳಿಯುತ್ತದೆ ಎಂಬುವುದು ಮತ್ತೊಂದು ಕಾರಣವಾಗಿದೆ.