ಭುವನ ಸುಂದರಿ ಸ್ಪರ್ಧೆಯಲ್ಲಿ ಸ್ಪರ್ಧಿಸಲು ತೃತೀಯ ಲಿಂಗಿ ಏಂಜಲಾಗೆ ಅವಕಾಶ ಮಾಡಿಕೊಟ್ಟ ನಿಯಮ ಯಾವುದು ಗೊತ್ತಾ?
ಭುವನ ಸುಂದರಿ ಸ್ಪರ್ಧೆಯಲ್ಲಿದ್ದ ಒಂದು ನಿಯಮವನ್ನು 2012ರಲ್ಲಿ ತೆಗೆದುಹಾಕಲಾಯಿತು. ಆ ನಿಯಮ ಯಾವುದು? ಅದನ್ನು ತೆಗೆದುಹಾಕಲಾದ ಕಾರಣದಿಂದ ಏಜಂಲಾಗೆ ಅವಕಾಶ ಸಿಕ್ಕಿದ್ದಾದರೂ ಹೇಗೆ ಎಂದು ಈ ಗ್ಯಾಲರಿ ನೋಡಿ ತಿಳಿಯುತ್ತೆ.
ಭುವನ ಸುಂದರಿ ಸ್ಪರ್ಧೆಯ 66 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ 2018ರ ಸ್ಪರ್ಧೆ ನೆನಪಿನಲ್ಲಿ ಉಳಿಯಲಿದೆ. ಅದಕ್ಕೆ ಕಾರಣ ಸ್ಪೇನ್ನ ಮಿಸ್ ಸ್ಪೇನ್ ಏಂಜಲಾ ಪಾನ್ಸ್.
2/ 5
ಈ ಸ್ಪರ್ಧೆ ಆರಂಭವಾದಾಗಿನಿಂದಲೂ ಯಾವ ತೃತೀಯ ಲಿಂಗಿಯೂ ಇದರಲ್ಲಿ ಭಾಗವಹಿಸಿಲ್ಲ. ಆದರೆ ಮೊದಲ ಬಾರಿಗೆ ಏಂಜಲಾ ಮಿಸ್ ಸ್ಪೇನ್ ಕಿರೀಟವನ್ನು ಮುಟಿಗೇರಿಸಿಕೊಂಡು ಈಗ ಭುವನ ಸುಂದರಿ ಪಟ್ಟದ ಸ್ಪರ್ಧಿಯಾಗಿದ್ದಾರೆ.
3/ 5
ಭುವನ ಸುಂದರಿ ಸ್ಪರ್ಧೆಯಲ್ಲಿದ್ದ ಒಂದು ನಿಯಮವನ್ನು 2012ರಲ್ಲಿ ತೆಗೆದುಹಾಕಲಾಯಿತು. ಅದು ಜನ್ಮತಹ ಹೆಣ್ಣಾಗಿ ಹುಟ್ಟಿದವರು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂಬ ನಿಯಮ ಈ ಹಿಂದೆ ಇತ್ತು. ಆದರೆ ಅದು ಈಗಿಲ್ಲ. ಇದರಿಂದಾಗಿಯೇ ಈಗ ಏಜಂಲಾಗೆ ಅವಕಾಶ ಲಭಿಸಿದೆ.
4/ 5
27 ವರ್ಷದ ಏಂಜಲಾ ಸದ್ಯ ಸ್ಪೇನ್ನಲ್ಲಿ ತೃತೀಯ ಲಿಂಗಿಗಳ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿರುವ ಸ್ವಯಂ ಸೇವಕ ಸಂಘದೊಂದಿಗೆ ಕೆಲಸ ಮಾಡುತ್ತಿದ್ದಾರೆ.
5/ 5
ತಮ್ಮ ಬಗ್ಗೆ ಮಾತನಾಡುತ್ತಾ ಒಂದಲ್ಲ ಒಂದು ರೀತಿ ಹಾಗೂ ವಿಷಯದಲ್ಲಿ ಎಲ್ಲರೂ ತುಳಿತಕ್ಕೆ ಒಳಗಾಗಿ ತಾರತಮ್ಯಕ್ಕೆ ಒಳಗಾಗಿರುತ್ತಾರೆ ಎಂದಿದ್ದಾರೆ ಏಂಜಲಾ ಪಾನ್ಸ್.