16-17 ವರ್ಷಗಳ ಹಿಂದೆ ತನ್ನ ತಾಯಿ ತುಂಬಾ ಅನಾರೋಗ್ಯಕ್ಕೆ ಒಳಗಾಗಿದ್ದರು ಎಂದು ಸ್ವತಃ ಹೀರಾ ಹೇಳಿದ್ದಾರೆ. ಆ ನಂತರ ಅವರನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು. ಅನಾರೋಗ್ಯದಿಂದ ಬಳಲುತ್ತಿರುವ ತಾಯಿ ಸಾಯುವ ಮೊದಲು ತನ್ನ ಮಗಳಿಗೆ ಮದುವೆ ಮಾಡಬೇಕೆಂದು ಬಯಸಿದ್ದಳು. ಹೀಗಿರುವಾಗ ಹೀರಾ ತನ್ನ ತಾಯಿಗೆ ರಕ್ತ ಕೊಟ್ಟವನನ್ನು ಆಸ್ಪತ್ರೆಯಲ್ಲಿಯೇ ಮದುವೆಯಾದಳು. ತಾಯಿಯ ಸಂತೋಷಕ್ಕಾಗಿ ಹೀರಾ ಅಲ್ಲಿಯೇ ಮದುವೆಯಾದಳು ಮತ್ತು ಅವಳ ಬೀಳ್ಕೊಡುಗೆ ರಿಕ್ಷಾದಲ್ಲಿ ನಡೆಯಿತು. ಆ ದಿನ ಮಾತ್ರ ಅವಳು ವಧುವಾಗಿ ತಯಾರಾಗಿಲಿಲ್ಲ, ಮೇಕಪ್ ಮಾಡಿರಲಿಲ್ಲ. ಕೆಲವು ದಿನಗಳ ನಂತರ ಹೀರಾ ಅವರ ತಾಯಿ ಕೂಡ ಸಾವನ್ನಪ್ಪಿದ್ದರು. ಈ ದುಃಖವನ್ನು ಹೋಗಲಾಡಿಸಲು, ಹೀರಾ ಪ್ರತಿ ವಾರ ತನ್ನನ್ನು ಮದುಮಗಳಂತೆ ಅಲಂಕರಿಸಲು ಪ್ರಾರಂಭಿಸಿದರು.