ಬ್ರೇಕಪ್ ಆದ ನಂತರ ಅದರಿಂದ ಹೊರ ಬರಲು ಕೆಲವರು ಲಾಂಗ್ ರೈಡ್ ಹೋಗುತ್ತಾರೆ. ಮತ್ತೂ ಕೆಲವರು ಬಾರ್ ನಲ್ಲಿ ಕುಳಿತು ಕುಡಿಯುತ್ತಾರೆ.
2/ 9
ಇನ್ನೂ ಕೆಲವರು, ಮೋಸ ಮಾಡಿದ ಹುಡುಗ/ಹುಡುಗಿಗೆ ಪಾಠ ಕಲಿಸಲೇಬೇಕು ಎನ್ನುವ ಛಲಕ್ಕೆ ಬೀಳುತ್ತಾರೆ. ಅದಕ್ಕೆ ಪಾಠ ಕಲಿಸಲು ಸಾಕಷ್ಟು ಮಾರ್ಗ ತುಳಿಯುತ್ತಾರೆ.
3/ 9
ಈಗ ಚೀನಾದಲ್ಲೂ ಅದೇ ರೀತಿ ಆಗಿದೆ. ಯುವತಿಯೊಬ್ಬಳು ಪ್ರೀತಿಸಿ ಕೈಕೊಟ್ಟ ಹುಡುಗನಿಗೆ ಕಣ್ಣೀರು ಹಾಕಿಸಲೆಂದೇ ಒಂದು ಟನ್ ಈರುಳ್ಳಿ ಕಳುಹಿಸಿದ್ದಾಳೆ.
4/ 9
ಹೌದು, ಹೀಗೊಂದು ಘಟನೆ ನಡೆದಿದ್ದು ಚೀನಾದಲ್ಲಿ. ಯುವತಿಯೋರ್ವಳು ಓರ್ವನನ್ನು ಕಳೆದ ಐದು ವರ್ಷಗಳಿಂದ ಪ್ರೀತಿಸಿದ್ದಳು. ಆದರೆ, ಇತ್ತೀಚೆಗೆ ಅವರ ಸಂಬಂಧ ಮುರಿದು ಬಿದ್ದಿತ್ತು.
5/ 9
ಹುಡುಗ, ಮನೆಯಲ್ಲಿ ತೊಂದರೆ ಇದೆ ಎಂದು ಹೇಳಿ ಆಕೆಯ ಜೊತೆ ಬ್ರೇಕಪ್ ಮಾಡಿಕೊಂಡಿದ್ದ. ಮನೆಯ ತೊಂದರೆ ವಿಚಾರ ಬಂದಾಗ ಹುಡುಗಿ ಕೂಡ ಬ್ರೇಕಪ್ ಗೆ ವಿರೋಧ ವ್ಯಕ್ತಪಡಿಸಿರಲಿಲ್ಲ.
6/ 9
ಸಂಬಂಧ ಮುರಿದು ಬಿದ್ದ ನಂತರ ಸತತ 3 ದಿನಗಳ ಕಾಲ ಊಟ ತಿಂಡಿ ಬಿಟ್ಟು ಆಕೆ ಅಳುತ್ತಳೇ ಇದ್ದಳು. ಒಂದು ವಾರದ ನಂತರ ಆಕೆಗೆ ತಿಳಿದು ಬಂದ ವಿಚಾರ ಏನೆಂದರೆ, ಆಕೆ ಪ್ರೀತಿಸಿದ್ದ ಹುಡುಗ ಹಾಯಾಗಿ ಓಡಾಡಿಕೊಂಡಿದ್ದಾನೆಂಬುದು.
7/ 9
ಈ ವಿಚಾರ ತಿಳಿಯುತ್ತಿದ್ದಂತೆ ಆಕೆ ಕೆಂಡಾಮಂಡಲವಾಗಿದ್ದಾಳೆ. ಅಷ್ಟೇ ಅಲ್ಲ, ಆತನ ಮನೆಗೆ ಒಂದು ಲಾರಿಯಲ್ಲಿ ಒಂದು ಟನ್ ಈರುಳ್ಳಿ ಕಳುಹಿಸಿದ್ದಾಳೆ. ಇದರಲ್ಲಿ ಕೆಲವರು ಕತ್ತರಿಸಿದ್ದ ಈರುಳ್ಳಿ ಕೂಡ ಇದ್ದವು ಎನ್ನಲಾಗಿದೆ.
8/ 9
ಈತ ಮನೆ ಬಾಗಿಲಿಗೆ ಬಂದ ಲಾರಿಯ ಬಾಗಿಲು ತೆರೆಯುತ್ತಿದ್ದಂತೆ, ಬಂದ ಘಾಟಿಗೆ ಕಣ್ಣಲ್ಲಿ ನೀರು ಬಂದಿದೆ. ನಾನು ನಿನಗಾಗಿ ಮೂರು ದಿನ ಅತ್ತಿದ್ದೇನೆ. ಈಗ ನಿನ್ನ ಪಾಳಿ. ನೀನು ಕೂಡ ಅಳಬೇಕು ಎಂದು ಪತ್ರ ಕೂಡ ಬರೆದಿದ್ದಾಳೆ.
9/ 9
ಲಾರಿ ಚಾಲಕನಿಗೆ ಇಷ್ಟು ಈರುಳ್ಳಿಗಳನ್ನು ಇಳಿಸಲು ಬರೋಬ್ಬರಿ ಬೇಕಾಗಿದ್ದು ನಾಲ್ಕು ಗಂಟೆ! ಅಲ್ಲದೆ, ಈರುಳ್ಳಿ ಘಾಟು ತಾಳಲಾರದೆ ಅಕ್ಕ-ಪಕ್ಕದ ಮನೆಯವರು ಯುವತಿಗೆ ಶಾಪ ಹಾಕಿದ್ದಾರೆ.