Gold Price Today: ಆಭರಣ ಪ್ರಿಯರಿಗೆ ಸಿಹಿಸುದ್ದಿ, ಇಂದು ಚಿನ್ನದ ಬೆಲೆ ಏರಿಕೆಯಾಗಿಲ್ಲ ನೋಡಿ..!

Gold Rate on September 12 2021 | ಬಂಗಾರದ(Gold) ಮೇಲೆ ಹೂಡಿಕೆ ಮಾಡೋದು ಒಂದು ರೀತಿ ಭದ್ರತೆಯ ಪ್ರತೀಕ. ಇಂದು ಕೊಂಡ ಒಂದಿಷ್ಟೇ ಬಂಗಾರ ಕೆಲ ಸಮಯದ ನಂತರ ಭಾರೀ ಲಾಭ ತಂದುಕೊಡುತ್ತದೆ. ಬಹುಶಃ ಹಣದುಬ್ಬರದ ಪ್ರತೀ ಏರಿಳಿಕೆಯಲ್ಲೂ ಉತ್ತಮ ಬೆಲೆ ಕಾಯ್ದಿರಿಸಿಕೊಂಡಿರುವ ಏಕೈಕ ವಸ್ತು ಚಿನ್ನವೇ. ಹಾಗಾಗಿ ಪ್ರತಿದಿನ ದಿನಕ್ಕೆರಡು ಬಾರಿ ಚಿನ್ನದ ಮಾರುಕಟ್ಟೆಯಲ್ಲಿ ಹಳದಿ ಲೋಹದ(Yellow Metal) ಬೆಲೆ ಏರಿಳಿತವಾದರೂ ಜನರಿಗೆ ಅದರಲ್ಲಿ ಆಸಕ್ತಿ ಒಂಚೂರೂ ಕಡಿಮೆ ಆಗೋದೇ ಇಲ್ಲ. ಒಂದು ಕಡೆ ಹೂಡಿಕೆಯ ರೂಪದಲ್ಲಿ ಚಿನ್ನಕ್ಕೆ ಡಿಮ್ಯಾಂಡ್ ಇದ್ದರೆ, ಮತ್ತೊಂದೆಡೆ ಆಭರಣ ಕೊಳ್ಳಲು ಭಾರತೀಯರೂ ಸೇರಿದಂತೆ ನಾನಾ ದೇಶಗಳ ಜನರಿಗೆ ಹೆಚ್ಚಿನ ಆಸಕ್ತಿ ಇರುತ್ತದೆ. ಇವೆಲ್ಲವೂ ಸೇರಿ ಪ್ರತಿದಿನದ ಚಿನ್ನದ ಬೆಲೆಯ(Gold Price) ಮೇಲೆ ಎಲ್ಲರಿಗೂ ಒಂದು ಕಣ್ಣು ಇದ್ದೇ ಇರುತ್ತದೆ.

First published: