Marriage: 105 ಮಹಿಳೆಯರನ್ನು ಮದುವೆಯಾದ ಭೂಪ! ಮ್ಯಾರೇಜ್‌ನಲ್ಲಿ ಈತನದ್ದೇ ಗಿನ್ನಿಸ್ ರೆಕಾರ್ಡ್!

ಒಂದು ಮದ್ವೆ ಆಗಿಯೇ ಸಂಸಾರ ನಡೆಸೋಕೆ ಆಗ್ತಿಲ್ಲ ಅಂತ ಹಲವು ಗಂಡಸರು ಹೇಳುವ ಮಾತು! ಆದ್ರೆ ಇಲ್ಲೊಬ್ಬ ಭೂಪ ಒಂದಲ್ಲ, ಎರಡಲ್ಲ ಬರೋಬ್ಬರಿ 105ಕ್ಕೂ ಹೆಚ್ಚು ಮದ್ವೆಯಾಗಿದ್ದಾನಂತೆ! ಇದು ಗಿನ್ನಿಸ್ ರೆಕಾರ್ಡ್‌ಗೆ ಸೇರಿದ್ದು, ಈತನ ದಾಖಲೆ ಯಾರೂ ಮುರಿದಿಲ್ವಂತೆ!

First published:

  • 18

    Marriage: 105 ಮಹಿಳೆಯರನ್ನು ಮದುವೆಯಾದ ಭೂಪ! ಮ್ಯಾರೇಜ್‌ನಲ್ಲಿ ಈತನದ್ದೇ ಗಿನ್ನಿಸ್ ರೆಕಾರ್ಡ್!

    ವ್ಯಕ್ತಿಯೊಬ್ಬ ಮದುವೆಯಾಗಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ತನ್ನ ಹೆಸರು ಸೇರಿಸಿಕೊಂಡಿದ್ದಾನೆ. ಅಂದಹಾಗೆ ಆತ ಮದುವೆಯಾಗಿದ್ದು ಒಂದಲ್ಲ, ಎರಡಲ್ಲ ಬರೋಬ್ಬರಿ 105ಕ್ಕೂ ಹೆಚ್ಚು ಮಹಿಳೆಯರನ್ನು!

    MORE
    GALLERIES

  • 28

    Marriage: 105 ಮಹಿಳೆಯರನ್ನು ಮದುವೆಯಾದ ಭೂಪ! ಮ್ಯಾರೇಜ್‌ನಲ್ಲಿ ಈತನದ್ದೇ ಗಿನ್ನಿಸ್ ರೆಕಾರ್ಡ್!

    ಯೋವಾನಿ ವಿಜಿಲಿಟ್ಟೋ ಎಂಬ ಹೆಸರಿನ ವ್ಯಕ್ತಿಯೊಬ್ಬ 1949ರಿಂದ 1981ರ ನಡುವೆ ಸುಮಾರು 105ಕ್ಕೂ ಹೆಚ್ಚು ಮಹಿಳೆಯರನ್ನು ವಿವಾಹವಾಗಿದ್ದಾನೆ. ವಿಚ್ಛೇದನವನ್ನೇ ಪಡೆಯದೇ ನೂರ ಐದಕ್ಕೂ ಹೆಚ್ಚು ಬಾರಿ ಮದುವೆಯಾಗಿದ್ದಾನೆ. ಈತನ ಸಾಧನೆಯನ್ನು ಗಿನ್ನೆಸ್ ವಿಶ್ವ ದಾಖಲೆ ಟ್ವಿಟರ್ನಲ್ಲಿ ಶೇರ್ ಮಾಡಿದೆ.

    MORE
    GALLERIES

  • 38

    Marriage: 105 ಮಹಿಳೆಯರನ್ನು ಮದುವೆಯಾದ ಭೂಪ! ಮ್ಯಾರೇಜ್‌ನಲ್ಲಿ ಈತನದ್ದೇ ಗಿನ್ನಿಸ್ ರೆಕಾರ್ಡ್!

    ಈತ 53 ನೇ ವಯಸ್ಸಿನಲ್ಲಿ ಅರೆಸ್ಟ್ ಆದ. ಆಗ ಆತ ಏಪ್ರಿಲ್ 3, 1929 ರಂದು ಇಟಲಿಯ ಸಿಸಿಲಿಯಲ್ಲಿ ಜನಿಸಿದ್ದಾಗಿ ಹೇಳಿದ್ದ. ನಂತರ ಅವನು ತನ್ನ ನಿಜವಾದ ಹೆಸರನ್ನು ನಿಕೊಲಾಯ್ ಪೆರುಸ್ಕೋವ್ಗೆ ಅಂತ ಹೇಳಿಕೊಂಡಿದ್ದ. ಬಳಿಕ ಕೋರ್ಟ್ ಮುಂದೆ ಅವನ ನಿಜವಾದ ಹೆಸರು ಫ್ರೆಡ್ ಜಿಪ್ ಮತ್ತು ಅವರು ಏಪ್ರಿಲ್ 3, 1936 ರಂದು ನ್ಯೂಯಾರ್ಕ್ನಲ್ಲಿ ಜನಿಸಿದ್ದಾಗಿ ಹೇಳಿದ್ದನಂತೆ.

    MORE
    GALLERIES

  • 48

    Marriage: 105 ಮಹಿಳೆಯರನ್ನು ಮದುವೆಯಾದ ಭೂಪ! ಮ್ಯಾರೇಜ್‌ನಲ್ಲಿ ಈತನದ್ದೇ ಗಿನ್ನಿಸ್ ರೆಕಾರ್ಡ್!

    ವಿಗ್ಲಿಯೊಟೊ 1949 ಮತ್ತು 1981 ರ ನಡುವೆ 104-105 ಮಹಿಳೆಯರನ್ನು ವಿವಾಹವಾದನು. ವಿಶೇಷ ಅಂದ್ರೆ ಅವನ ಹೆಂಡತಿಯರಿಗೆ ಪರಸ್ಪರರ ಬಗ್ಗೆ ಗೊತ್ತೇ ಇರಲಿಲ್ಲವಂತೆ. ಆತ 14 ದೇಶಗಳಲ್ಲಿ ಮಹಿಳೆಯರನ್ನು ವಿವಾಹವಾದನು ಅಂತ ಹೇಳಲಾಗುತ್ತದೆ.

    MORE
    GALLERIES

  • 58

    Marriage: 105 ಮಹಿಳೆಯರನ್ನು ಮದುವೆಯಾದ ಭೂಪ! ಮ್ಯಾರೇಜ್‌ನಲ್ಲಿ ಈತನದ್ದೇ ಗಿನ್ನಿಸ್ ರೆಕಾರ್ಡ್!

    ಮಹಿಳೆಯರನ್ನು ತನ್ನ ಬಲೆಗೆ ಬೀಳಿಸಿಕೊಳ್ಳುವುದರಲ್ಲಿ ನಿಸ್ಸೀಮನಾಗಿದ್ದ ಆತ, ಬೇರೆ ಬೇರೆ ಹೆಸರನ್ನು ಹೇಳುತ್ತಿದ್ದ. ಮದುವೆಯಾದ ನಂತರ ಪತ್ನಿಯ ಹಣ ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಓಡಿ ಹೋಗುತ್ತಿದ್ದ.

    MORE
    GALLERIES

  • 68

    Marriage: 105 ಮಹಿಳೆಯರನ್ನು ಮದುವೆಯಾದ ಭೂಪ! ಮ್ಯಾರೇಜ್‌ನಲ್ಲಿ ಈತನದ್ದೇ ಗಿನ್ನಿಸ್ ರೆಕಾರ್ಡ್!

    ನಾನು ದೂರದಲ್ಲಿ ವಾಸಿಸುತ್ತಿದ್ದೇನೆ, ಆದ್ದರಿಂದ ನಿಮ್ಮ ಎಲ್ಲಾ ವಸ್ತುಗಳನ್ನು ತೆಗೆದುಕೊಂಡು ನನ್ನ ಬಳಿಗೆ ಬನ್ನಿ ಎಂದು ಮಹಿಳೆಯರಿಗೆ ಹೇಳುತ್ತಿದ್ದ. ಆತನ ಮಾತು ನಂಬಿ ಮಹಿಳೆಯರು ತಮ್ಮ ಎಲ್ಲಾ ವಸ್ತುಗಳನ್ನು ತೆಗೆದುಕೊಂಡು ಬಂದಾಗ, ಅವರನ್ನು ಯಾಮಾರಿಸಿ ಓಡಿ ಹೋಗುತ್ತಿದ್ದನಂತೆ. ಹೀಗೆ ಕದ್ದ ಮಾಲುಗಳನ್ನೆಲ್ಲ ಕಳ್ಳ ಮಾರುಕಟ್ಟೆಯಲ್ಲಿ ಮಾರುತ್ತಿದ್ದನಂತೆ.

    MORE
    GALLERIES

  • 78

    Marriage: 105 ಮಹಿಳೆಯರನ್ನು ಮದುವೆಯಾದ ಭೂಪ! ಮ್ಯಾರೇಜ್‌ನಲ್ಲಿ ಈತನದ್ದೇ ಗಿನ್ನಿಸ್ ರೆಕಾರ್ಡ್!

    ಈತನ ವಿರುದ್ಧ ಹಲವು ದೂರುಗಳು ಬಂದಿದ್ದರೂ ಆತ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಆದಾಗ್ಯೂ, ಕೊನೆಯ ಹೆಂಡತಿ ಅವನನ್ನು ಯುಎಸ್ಎಯ ಫ್ಲೋರಿಡಾದಲ್ಲಿ ಹಿಡಿದಿದ್ದಾಳೆ.

    MORE
    GALLERIES

  • 88

    Marriage: 105 ಮಹಿಳೆಯರನ್ನು ಮದುವೆಯಾದ ಭೂಪ! ಮ್ಯಾರೇಜ್‌ನಲ್ಲಿ ಈತನದ್ದೇ ಗಿನ್ನಿಸ್ ರೆಕಾರ್ಡ್!

    ಡಿಸೆಂಬರ್ 28, 1981 ರಂದು ಅಧಿಕಾರಿಗಳು ವಿಗ್ಲಿಯೊಟ್ಟೊವನ್ನು ಅರೆಸ್ಟ್ ಮಾಡಿದ್ರು. ನಂತರ ಜನವರಿ 1983 ರಲ್ಲಿ, ಅವರ ವಿರುದ್ಧ ವಿಚಾರಣೆ ಪ್ರಾರಂಭವಾಯಿತು. ಆತನಿಗೆ ಒಟ್ಟು 34 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಆತ 1991 ರಲ್ಲಿ ತಮ್ಮ 61 ನೇ ವಯಸ್ಸಿನಲ್ಲಿ ಮೆದುಳಿನ ರಕ್ತಸ್ರಾವದಿಂದ ಕೊನೆಯುಸಿರೆಳೆದ.

    MORE
    GALLERIES