ಸ್ವಿಜರ್ಲ್ಯಾಂಡ್‌ನ ವಲೈಸ್ ಕ್ಯಾಂಟನ್‌ನಲ್ಲಿರುವ ಅಲ್ಬಿನೆನ್ (Albinen) ಗ್ರಾಮವು ಈ ಅವಕಾಶ ನೀಡ್ತಿದೆ. ಸುಂದರವಾದ ಪರ್ವತ ಕಣಿವೆಯ (Mountain Valley) ಹಳ್ಳಿಗೆ ನಿಮ್ಮ ಕುಟುಂಬದೊಡನೆ ಸ್ಥಳಾಂತರಿಸಲು ಒಂದು ಅನನ್ಯ ಅವಕಾಶವನ್ನು ನೀಡುತ್ತಿದೆ. ಈ ಗ್ರಾಮವು ಸಮುದ್ರ ಮಟ್ಟದಿಂದ 4,265 ಅಡಿ ಎತ್ತರದಲ್ಲಿದ್ದು, ಮತ್ತು ಹಿಮದಿಂದ ಆವೃತವಾದ ಶಿಖರಗಳ ಸುಂದರ ಅನುಭವ ನೀಡುತ್ತದೆ.
ಇದರಿಂದಾಗಿ ಗ್ರಾಮವನ್ನು ಖಾಲಿಯಾಗದಂತೆ ತಡೆಯಲು ಆಲ್ಬಿನೆನ್‌ಗೆ ತೆರಳಲು ಕುಟುಂಬಗಳಿಗೆ £50,000 (₹50 ಲಕ್ಷ) ಕ್ಕಿಂತ ಹೆಚ್ಚು ಪಾವತಿಸುವ ಯೋಜನೆಯನ್ನು 2018 ರಲ್ಲೇ ಪ್ರಾರಂಭಿಸಿದೆ. 50 ಲಕ್ಷ ಅಷ್ಟೇ ಅಲ್ಲ. ನಾಲ್ವರನ್ನು ಒಳಗೊಂಡ ಕುಟುಂಬದ ಪ್ರತಿ ವಯಸ್ಕರಿಗೆ 25,000 ಸ್ವಿಸ್ ಫ್ರಾಂಕ್‌ಗಳನ್ನು (₹22.5 ಲಕ್ಷ) ಮತ್ತು ಪ್ರತಿ ಮಗುವಿಗೆ ಇನ್ನೂ 10,000 ಸ್ವಿಸ್ ಫ್ರಾಂಕ್‌ಗಳನ್ನು (₹9 ಲಕ್ಷ)ವನ್ನು ನೀಡುತ್ತಾರೆ ಎಂದು ತಿಳಿದುಬಂದಿದೆ.
ಅರ್ಜಿದಾರರು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು ಮತ್ತು ಕನಿಷ್ಠ ಹತ್ತು ವರ್ಷಗಳ ಕಾಲ ಅಲ್ಬಿನೆನ್ ಗ್ರಾಮದಲ್ಲಿ ಕನಿಷ್ಠ 200,000 ಸ್ವಿಸ್ ಫ್ರಾಂಕ್‌ಗಳ (₹1.8 ಕೋಟಿ) ಮೌಲ್ಯದ ಮನೆಯಲ್ಲಿ ವಾಸಿಸಲು ಒಪ್ಪಿಕೊಳ್ಳಬೇಕು. ಇನ್ನು, ಒಬ್ಬ ವ್ಯಕ್ತಿಯು 10 -ವರ್ಷದ ಅವಧಿಗೆ ಮುಂಚೆಯೇ ಹೋದರೆ, ಅವರು £50,000 ಹಣವನ್ನು ಮರುಪಾವತಿಸಬೇಕಾಗುತ್ತದೆ. ಅವಶ್ಯಕತೆಗಳು ಕಟ್ಟುನಿಟ್ಟಾಗಿ ತೋರುತ್ತದೆಯಾದರೂ, ಸ್ವಿಟ್ಜರ್ಲೆಂಡ್‌ನಲ್ಲಿ ವಾಸಿಸುವ ಪ್ರಯೋಜನಗಳು ಹಲವಾರು.