ಕೋಲ್ಕತ್ತಾದಲ್ಲಿ ನಡೆದ ಮದುವೆಯೊಂದು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಕಾರಣ ಇಬ್ಬರು ಸಲಿಂಗಕಾಮಿ ಜೋಡಿಗಳು ಮದುವೆಯಾಗಿರುವುದು. ಒಬ್ಬ ಹುಡುಗಿ ಮತ್ತು ಹುಡುಗ ಮದುವೆಯಾಗುತ್ತಾರೆ ಎಂಬುದು ಸಾಮಾನ್ಯ. ಆದರೆ, ಇಬ್ಬರು ಹಿಂದೂ ಸಂಪ್ರದಾಯದಂತೆ ಮದುವೆಯಾಗುತ್ತಿರುವುದನ್ನು ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಇದು ಸಿಂಪಲ್ ಮದ್ವೆಯಲ್ಲ, ಧಾಂ ಧೂಂ ಅದ್ಧೂರಿ ಮದುವೆ.
ಪುರೋಹಿತರು ಮಂತ್ರ ಹೇಳಿ ದಂಪತಿಗಳು ಪರಸ್ಪರ ಹಾರ ಹಾಕಿಕೊಂಡರು. ಇದರೊಂದಿಗೆ, ದಂಪತಿಗಳು ಪವಿತ್ರ ಅಗ್ನಿಯ ಮುಂದೆ ಏಳು ಹೆಜ್ಜೆ ಪ್ರದಕ್ಷಿಣೆಯನ್ನು ಮಾಡಿದರು. ಕೋಲ್ಕತ್ತಾ ನಗರದಲ್ಲಿ ಸಲಿಂಗ ವಿವಾಹಗಳು ನಡೆಯುತ್ತಿರುವುದು ಇದೇ ಮೊದಲಲ್ಲವಾದರೂ, ಮದುವೆಯಲ್ಲಿ ಹಿಂದೂ ಸಂಪ್ರದಾಯಗಳನ್ನು ಪಾಲಿಸುತ್ತಿರುವುದು ಇದೇ ಮೊದಲು. LGBTQ+ ಸಮುದಾಯಕ್ಕೆ ಸೇರಲು ಬಯಸುವವರಿಗೆ ಮದುವೆಯು ಹೊಸ ಭರವಸೆ ಮೂಡಿಸಿದೆ.
ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಫ್ಯಾಷನ್ ಡಿಸೈನರ್ ನವೋನಿಲ್ ದಾಸ್ ಮಾತನಾಡಿ ‘ಮದುವೆ ಫಲಕದ ಮೇಲೆ ಇಬ್ಬರು ಪುರುಷರು ‘ವೀ ಡು’ ಎಂದು ಬರೆದಿರುವುದು ನೋಡುಗರ ಮನದಲ್ಲಿ ಕುತೂಹಲ ಮೂಡಿಸುತ್ತಿದೆ. ಭಾರತದಲ್ಲಿ ಸಲಿಂಗ ವಿವಾಹವನ್ನು ಗುರುತಿಸುವುದು ಮತ್ತು ಮದುವೆಯನ್ನು ನೋಂದಾಯಿಸಲಾಗುವುದಿಲ್ಲ. ಆದರೆ ಅವರ ವಿವಾಹವು ಕ್ರಿಮಿನಲ್ ಆಕ್ಟ್ ಅಲ್ಲ" ಎಂದು ಅವರು ಹೇಳಿದರು.