ನಾವು ಹಾಯಾಗಿ, ಸುಖ ಜೀವನವನ್ನು ಸಾಗಿಸಲು ಕಾರಣವೆಂದರೆ ನಮ್ಮ ಸೈನಿಕರು ಅಂತ ಹೇಳಬಹುದು. ಯಾಕೆಂದರೆ ದೇಶದ ಗಡಿ ಭಾಗದಲ್ಲಿ ಮೂರು ಹೊತ್ತು ಕಾಯುತ್ತಾ, ರಕ್ಷಣೆ ಮಾಡುತ್ತಾ ಇರುವವರು ಸೈನಿಕರು.
2/ 7
ಜನವರಿ 26 ಬರುತ್ತಿದೆ, ಜನರು ದೇಶಭಕ್ತಿಯನ್ನು ಸಾರಲು ಸಿದ್ಧರಾಗುತ್ತಾ ಇದ್ದಾರೆ. ಚಿಕ್ಕ ಮಕ್ಕಳಿಂದ ದೊಡ್ಡವರವರೆಗೆ ದೇಶಪ್ರೇಮವು ಅಂದು ಎದ್ದು ಕಾಣುತ್ತದೆ. ರಾಜ್ಕೋಟ್ನಲ್ಲಿ ತಂದೆಯೊಬ್ಬರು ತಮ್ಮ ಮತ್ತು ತಮ್ಮ ಕುಟುಂಬದ ದೇಶಪ್ರೇಮವನ್ನು ವಿಭಿನ್ನ ರೀತಿಯಲ್ಲಿ ತೋರಿಸಿದ್ದಾರೆ.
3/ 7
ಜನವರಿ 26 ರಂದು ರಾಜ್ಕೋಟ್ ನಿವಾಸಿಗರು ಗಣರಾಜ್ಯೋತ್ಸವವನ್ನು ಆಚರಿಸುತ್ತಾರೆ. ಆಗ ಮಗಳು ಸೈನ್ಯಕ್ಕೆ ಸೇರಲು ಬಯಸಿದ್ದಾರೆ. ಆದ್ದರಿಂದ ಅವರ ತಂದೆ ತನ್ನ ಬೈಕ್ಗೆ ಸೈನ್ಯದ ಬಣ್ಣ ಬಳಿದಿದ್ದಾರೆ.
4/ 7
ಮಾಹಿತಿಯ ಪ್ರಕಾರ, ರಾಜ್ಕೋಟ್ ನಗರದ ಭಕ್ತಿನಗರ ಸ್ಟೇಷನ್ ಪ್ಲಾಟ್ ಬಳಿ ಪೇಪರ್ ಕಟಿಂಗ್ ಮೆಷಿನ್ ಹೊಂದಿರುವ ಅಜಯ್ಭಾಯ್ ದುಡ್ಕಿಯಾ ಅವರ ಮಗಳು ಸೇನೆಗೆ ಸೇರುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಹಾಗಾಗಿ ಮಗಳ ಆಶಯಕ್ಕೆ ಗೌರವ ನೀಡಿ ಮನೆಯಲ್ಲಿಯೂ ದೇಶಪ್ರೇಮದ ವಾತಾವರಣ ಮೂಡುವಂತೆ ಮಾಡಲಾಗಿದೆ.
5/ 7
ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಸೇರಿ ದೇಶ ಸೇವೆ ಮಾಡುವ ಆಸೆಯನ್ನು ಮಗಳು ವ್ಯಕ್ತಪಡಿಸಿದ್ದಾಳೆ. ಸೈನ್ಯದ ವಾತಾವರಣವನ್ನು ನೀಡಲು ಅಜಯ್ಭಾಯ್ ತಮ್ಮ ಬೈಕ್ಗೆ ಸೈನ್ಯದ ಡ್ರೆಸ್ನ ಬಣ್ಣ ಹಚ್ಚಿದರು. ತ್ರಿವರ್ಣ ಧ್ವಜವನ್ನು ಲೇಬಲ್ ಮಾಡಲಾಗಿದೆ.
6/ 7
ಒಟ್ಟಿನಲ್ಲಿ ನನ್ನ ಮಗಳಿಗೆ ದೇಶಸೇವೆ ಮಾಡಬೇಕು ಎಂದು ಆಸೆಯಾಗಿದೆ. ಹಾಗಾಗಿ ಶಾಲೆಗೆ, ಟ್ಯೂಷನ್ ಗೆ ಕೊಂಡೊಯ್ಯುವ ಸ್ಕೂಟರ್ಗೆ ಸೇನಾ ಡ್ರೆಸ್ ತಕ್ಕಂತೆ ಅದೇ ಸ್ಕೂಟರ್ ನ ಬಣ್ಣವನ್ನು ಮಾಡಲಾಗಿದೆ ಎಂದು ಅಜಯ್ ಭಾಯ್ ಹೇಳಿದ್ದಾರೆ.
7/ 7
ಇದರೊಂದಿಗೆ ಸೇನಾ ಡ್ರೆಸ್ ಗೆ ತಕ್ಕಂತೆ ಸ್ಕೂಲ್ ಬ್ಯಾಗ್, ಲ್ಯಾಪ್ ಟಾಪ್ ಬ್ಯಾಗ್, ಕ್ಯಾಪ್ ಇತ್ಯಾದಿಗಳನ್ನು ನೀಡುವ ಆಲೋಚನೆ ಕೂಡ ಈಕೆಯ ತಂದೆಗಿದೆ. ಇದರಿಂದ ದೇಶಭಕ್ತಿ ನಿರಂತರವಾಗಿ ಆಕೆಯಲ್ಲಿ ಇರಬೇಕು ಮತ್ತು ಮುಂದೆ ನನ್ನ ಮಗಳನ್ನು ಸೇನೆಗೆ ಕಳುಹಿಸುತ್ತೇನೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.