ಭಾರತಕ್ಕೆ ಮುಂಗಾರು ಆಗಮಿಸಿದೆ. ಹಲವು ರಾಜ್ಯಗಳಲ್ಲಿ ಹಂತ ಹಂತವಾಗಿ ಮಳೆ ಸುರಿಯಲಾರಂಭಿಸಿದೆ. ಮಳೆಗಾಲದಲ್ಲಿ ಪ್ರಯಾಣಿಸುವುದೆಂದರೆ ದೊಡ್ಡ ಸಮಸ್ಯೆಯಾಗಿದೆ. ಯಾವುದಾದರೊಂದು ಕೆಲಸಕ್ಕಾಗಿ ಹೊರಗೆ ಹೋಗಬೇಕು. ಇಂತಹ ಪರಿಸ್ಥಿತಿಯಲ್ಲಿ ಮಳೆ ಬರುವ ಮುಸ್ಸೂಚನೆ ಕಂಡರೆ ಜನ ರೈನ್ ಕೋಟ್ , ಕೊಡೆಗಳ ಖರೀದಿಗೆ ಮುಂದಾಗುತ್ತಾರೆ. ಹಿಂದೆಲ್ಲಾ ಒಯ್ಯಲು ಬಹಳ ಕಷ್ಟಪಡುತ್ತಿದ್ದ ಉದ್ದನೆಯ ಕೊಡೆಗಳು ಬರುತ್ತಿದ್ದ ಕಾಲವೊಂದಿತ್ತು. ಆದರೀಗ ಅಂತವುಗಳು ಫ್ಯಾಷನ್ನ ಒಂದು ಭಾಗವಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಅದಕ್ಕಿಂತಲೂ ವಿಭಿನ್ನವಾದ ಛತ್ರಿಗಳು ಬರುತ್ತಿವೆ.