Viral Photos: ಆಫೀಸ್​ನಲ್ಲಿ ಬಿದ್ದ ಬಾಸ್ ರಾತ್ರೋ ರಾತ್ರಿ ಫೇಮಸ್! ಕೆಲಸಗಾರರ ತರಲೆ ವೈರಲ್

ಕಛೇರಿಯೊಂದರ ಉದ್ಯೋಗಿಗಳು ತಮ್ಮ ವಿಶಿಷ್ಟವಾದ ಆಲೋಚನೆಯ ಸಹಾಯದಿಂದ ತಮ್ಮ ಸ್ಲೀಪಿಂಗ್ ಬಾಸ್ ಅನ್ನು ವೈರಲ್ ಮಾಡಿದ್ದರು. ಇತ್ತೀಚೆಗಷ್ಟೇ ಕಂಪನಿಯೊಂದರ ಸಿಇಒ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಫೋಟೊಗ್ರಫಿ ಆಪ್ ಲೈಟ್‌ಟ್ರಿಕ್‌ನ ಸಿಇಒ ಮತ್ತು ಸಹ ಸಂಸ್ಥಾಪಕ ಜೀವ್ ಫ್ರಾಬ್‌ಮನ್ ತಮ್ಮ ಕಚೇರಿಯ ಸೋಫಾದಲ್ಲಿ ಮಲಗಿ ವೈರಲ್ ಆಗಿದ್ದಾರೆ. ಉದ್ಯೋಗಿಗಳು ತಮ್ಮ ಮೇಲಧಿಕಾರಿಯ ಚಿತ್ರವನ್ನು ತೆಗೆದು ವೈರಲ್ ಆಗುವ ರೀತಿಯಲ್ಲಿ ಎಡಿಟ್ ಮಾಡಿದ್ದಾರೆ. ಈ ಚಿತ್ರಗಳನ್ನು 2016 ರಲ್ಲಿ ಮೊದಲ ಬಾರಿಗೆ ಹಂಚಿಕೊಳ್ಳಲಾಗಿದ್ದರೂ, ಮತ್ತೊಮ್ಮೆ ಜನರು ಅವುಗಳನ್ನು ಫೇಸ್‌ಬುಕ್‌ನಲ್ಲಿ ತೀವ್ರವಾಗಿ ಹಂಚಿಕೊಳ್ಳುತ್ತಿದ್ದಾರೆ.

First published: