ಇಕ್ಷಾ ಹ್ಯಾಂಗ್ ಸುಬ್ಬಾ ಅಕಾ ಇಕ್ಷಾ ಕೆರುಂಗ್ ಪೋಲಿಸ್ ವೃತ್ತಿಗೆ ಸೇರಿಕೊಂಡಾಗ ಅವಳ ವಯಸ್ಸು ಕೇವಲ 19 ವರ್ಷ ಆಗಿತ್ತು. ಹಿಂದೊಮ್ಮೆ 'ಎಂಟಿವಿ ಸೂಪರ್ ಮಾಡೆಲ್ ಸೀಸನ್ 2' ಸಮಯದಲ್ಲಿ, ಇಕ್ಷಾ ಭಾಗವಹಿಸಿ ತನ್ನನ್ನು ಪರಿಚಯಿಸಿಕೊಂಡಾಗ, ಅಥಿತಿಯಾಗಿ ಆಗಮಿಸಿದ್ದ ಬಾಲಿವುಡ್ ನಟಿ ಮಲೈಕಾ ಅರೋರಾ ಅವಳಿಗೆ ನಿಂತು ಅಭಿನಂದಿಸಿದರು. "ಇಂತಹ ಮಹಿಳೆಯರಿಗೆ ಸೆಲ್ಯೂಟ್ ಮಾಡಬೇಕಾಗಿದೆ" ಎಂದು ಹೇಳಿದರು.