ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದು ಅಷ್ಟು ಒಳ್ಳೆಯದಲ್ಲ ಅಂತಾರೆ ವೈದ್ಯರು. ಕಾಫಿಯೊಳಗಿನ ಕೆಫೀನ್ ನಿಮ್ಮ ಮೆದುಳನ್ನು ಕೂಡಲೇ ಚಾರ್ಜ್ ಮಾಡುತ್ತದೆ ನಿಜ. ಆದರೆ ನಮ್ಮ ಹೊಟ್ಟೆ ಸುಮಾರು ಏಳೆಂಟು ಗಂಟೆಗಳ ಕಾಲ ಖಾಲಿ ಇರೋದ್ರಿಂದ ಮೊದಲು ಕಾಫಿಯೇ ಬಿದ್ದರೆ ಇಡೀ ದಿನದ ಜೀರ್ಣಕ್ರಿಯೆ ನಿಧಾನವಾಗಬಹುದು ಎನ್ನಲಾಗಿದೆ.