ನಿದ್ರೆ ಮಾಡಿದ್ರೆ 1 ಲಕ್ಷ ರೂ ಸಂಬಳ; ಬೆಂಗಳೂರು ಮೂಲದ ಕಂಪನಿ ಹೊರಡಿಸಿದೆ ಹೀಗೊಂದು ಆಫರ್
ಪ್ರಪಂಚ ಅಚ್ಚರಿಯ ಕೆಲಸಗಳಲ್ಲಿ ನಿದ್ದೆ ಮಾಡುವ ಕೆಲಸ ಕೂಡ ಒಂದು. ಸದ್ಯ ಬೆಂಗಳೂರಿನ ಕಂಪೆನಿಯೊಂದು ಇಂತಹದೇ ಕೆಲಸವನ್ನ ಆಫರ್ ಮಾಡಿದೆ. ಅಚ್ಚರಿ ಎಂದರೆ ನಿದ್ದೆ ಮಾಡುವವರಿಗೆ 1 ಲಕ್ಷ ರೂ ಸಂಬಳ ಕೊಡಲಿದೆಯಂತೆ!
ಕೆಲಸದ ಸಮಯದಲ್ಲಿ ನಿದ್ದೆ ಮಾಡಿದರೆ ಕೆಲಸವೇ ಕೈ ತಪ್ಪಿ ಹೋಗುವ ಸ್ಥಿತಿ ನಿರ್ಮಾಣವಾಗಬಹುದು. ಆದರೆ ನಿದ್ದೆ ಮಾಡುವುದೇ ಒಂದು ಕೆಲಸವಾದರೆ ಹೇಗೆ ?
2/ 13
ಹೌದು. ಪ್ರಪಂಚ ಅಚ್ಚರಿಯ ಕೆಲಸಗಳಲ್ಲಿ ನಿದ್ದೆ ಮಾಡುವ ಕೆಲಸ ಕೂಡ ಒಂದು. ಸದ್ಯ ಬೆಂಗಳೂರಿನ ಕಂಪೆನಿಯೊಂದು ಇಂತಹದೇ ಕೆಲಸವನ್ನ ಆಫರ್ ಮಾಡಿದೆ. ಅಚ್ಚರಿ ಎಂದರೆ ನಿದ್ದೆ ಮಾಡುವವರಿಗೆ 1 ಲಕ್ಷ ರೂ ಸಂಬಳ ಕೊಡಲಿದೆಯಂತೆ!
3/ 13
ಬೆಂಗಳೂರು ಮೂಲದ ವೇಕ್ಫಿಟ್ ಎಂಬ ಕಂಪನಿ ಹಿಗೋಂದು ಉದ್ಯೋಗ ಪ್ರಕಟನೆಯನ್ನು ಹೊರಡಿಸಿದೆ. ಒಬ್ಬ ವ್ಯಕ್ತಿ ರಾತ್ರಿ 9 ಗಂಟೆಗಳ ಕಾಲ ನಿದ್ದೆ ಮಾಡಿದರೆ ಆತನಿಗೆ 1 ಲಕ್ಷ ರೂಪಾಯಿ ನೀಡಲಿದೆಯಂತೆ.
4/ 13
ವೇಕ್ ಫಿಟ್ ಕಂಪನಿಯಲ್ಲಿ ಕೆಲಸ ಸಿಕ್ಕ ಉದ್ಯೋಗಿಗಳಿಗೆ ನುರಿತ ತಜ್ಞರು ನಿದ್ರೆ, ಫಿಟ್ನೆಸ್, ಪೌಷ್ಠಿಕತೆಯ ಬಗ್ಗೆ ಮಾರ್ಗದರ್ಶನವನ್ನು ನೀಡಲಿದ್ದಾರೆ.
5/ 13
ವೇಕ್ಫಿಟ್ ಕಂಪನಿ ಇಂಟರ್ನ್ಶಿಪ್ ಮಾಡುವವರಿಗೆ ಮೊದಲ ಆದ್ಯತೆಯನ್ನು ನೀಡುತ್ತಿದೆ. ಅದರೆ ಉದ್ಯೋಗ ಆಕಾಂಕ್ಷಿ ಈ ಕೆಲಸವನ್ನು ಪಡೆಯಬೇಕಾದರೆ ಕೆಲವು ಅರ್ಹತೆಯನ್ನು ಹೊಂದಿರಬೇಕು ಎಂದು ಕಂಪನಿ ತಿಳಿಸಿದೆ.
6/ 13
1.ಮೊದಲನೆಯದಾಗಿ ಕೆಲಸ ಗಿಟ್ಟಿಸಿಕೊಳ್ಳುವ ಅಭ್ಯರ್ಥಿಯು ಪದವಿಯನ್ನು ಹೊಂದಿರಬೇಕು. ಶಾಲೆ ಮತ್ತು ಕಾಲೇಜಿನಲ್ಲಿ ಉಪನ್ಯಾಸದ ಮೇಲೆ ಹೆಚ್ಚು ನಿದ್ರಿಸುತ್ತಿದ್ದರೆ. ಅಂತವರಿಗೆ ಹೆಚ್ಚುವರಿ ಬೋನಸ್ ಅನ್ನು ಕಂಪನಿ ನೀಡುತ್ತದೆ.
7/ 13
2. ಹಾಸಿಗೆ ಮೇಲೆ ಮಲಗಿದ 10-20 ನಿಮಿಷಗಳಲ್ಲಿ ನಿದ್ರಿಸಲು ಸಾಧ್ಯವಾಗಬೇಕು.
8/ 13
3. ಗದ್ದಲದ ವಾತವರಣದಲ್ಲಿ ನಿದ್ರಿಸುವ ಅನುಭವವೂ ಇರಬೇಕು
9/ 13
4. ಇದರಲ್ಲಿ ಒಬ್ಬರು ತಂಡ ಆಟಗಾರರಾಗಿದ್ದು, ಬಲವಾದ ಜ್ನಾನವನ್ನು ಹೊಂದಿರಬೇಕು.
10/ 13
5. ಮಲಗುವ ವಿಧಾನ ಮತ್ತು ಅದನ್ನು ವಿಶ್ಲೇಷಿಸಲು ನುರಿತಾಗಿರಬೇಕು.
11/ 13
6. ಕ್ಯಾಮೊಮೈಲ್ ಬಗ್ಗೆ ಅಭಿರುಚಿ ಇದ್ದರೆ, ಸಾಮಾಜಿಕ ಜಾಲತಾಣವನ್ನು ಹ್ಯಾಂಡಲ್ ಮಾಡುವವರಾಗಿದ್ದರೆ ಅವರಿಗೆ ಮೊದಲ ಅವಕಾಶವನ್ನು ನೀಡಲಾಗುತ್ತದೆ.
12/ 13
ವೇಕ್ಫಿಟ್ ಖಾಲಿ ಇರುವ ಹುದ್ದೆಗಳಿಗೆ ಪ್ರಕಟನೆ ಹೊರಡಿಸಿರುವುದು ಇದೇ ಮೊದಲೇನಲ್ಲ. ಈ ಮೊದಲು ಸಾಕಷ್ಟು ಬಾರಿ ಉದ್ಯೋಗ ಅವಕಾಶವನ್ನು ಕಲ್ಪಿಸಿದೆ.
13/ 13
ಕಳೆದ ಬಾರಿ ಸುಮಾರು 1.7 ಲಕ್ಷ ಜನರು ನಿದ್ರೆ ಮಾಡುವ ಕೆಲಸಕ್ಕೆ ಹೆಸರು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 23 ಜನರನ್ನು ಆಯ್ಕೆ ಮಾಡಲಾಗಿದೆ. 21 ಜನರು ಉದ್ಯೋಗಿಗಳು ಭಾರತೀಯರಾದರೆ 2 ಜನರು ವಿದೇಶಿಗರಾಗಿದ್ದರು ಎಮದು ಕಂಪೆನಿ ಹೇಳಿದೆ.