ಮೆಗಾ ವೆಬ್‌ಸೈಟ್ Quora ನಲ್ಲಿ ಅನೇಕ ಜನರು ಇದೇ ರೀತಿಯ ಪ್ರಶ್ನೆಗಳನ್ನು ಕೇಳಿದ್ದಾರೆ, ಅದಕ್ಕೆ ವಿಕಾಸ್ ಮಿಶ್ರಾ ಎಂಬ ವ್ಯಕ್ತಿ ಉತ್ತರಿಸಿದ್ದಾರೆ. ವಿಕಾಸ್ ಸೇಂಟ್ ಫ್ರಾನ್ಸಿಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ಅಧ್ಯಯನ ಮಾಡಿ, ಯಾತಕ್ಕಾಗಿ ಈ ಹಸಿರು ಮತ್ತು ನೀಲಿ ಬಣ್ಣ ಧರಿಸುತ್ತಾರೆ ಅಂತ ತಿಳಿಸಲಾಗಿದೆ.
ಹಿಂದೆ ಬಿಳಿ ಬಟ್ಟೆ ಧರಿಸುವ ಸಂಪ್ರದಾಯವಿತ್ತು: ವೈದ್ಯರು ನೀಲಿ ಅಥವಾ ಹಸಿರು ಧರಿಸುವ ಸಂಪ್ರದಾಯ ಮೊದಲಿನಿಂದಲೂ ಇರಲಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಮೊದಲು ಎಲ್ಲಾ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ಬಿಳಿ ಬಟ್ಟೆಯನ್ನು ಧರಿಸಿದ್ದರು. ಆದರೆ 1914 ರಲ್ಲಿ ವೈದ್ಯರು ಅದನ್ನು ಹಸಿರು ಬಣ್ಣಕ್ಕೆ ತಿರುಗಿಸಿದರು. ಅಂದಿನಿಂದ ಈ ಡ್ರೆಸ್ ಕೋಡ್ ಟ್ರೆಂಡ್ ಆಗಿಬಿಟ್ಟಿದೆ. ಈ ದಿನಗಳಲ್ಲಿ ಕೆಲವು ವೈದ್ಯರು ನೀಲಿ ಬಣ್ಣವನ್ನು ಸಹ ಧರಿಸುತ್ತಾರೆ.