ಪುರುಷರ ಶರ್ಟ್, ಪ್ಯಾಂಟ್, ಜೀನ್ಸ್, ಶಾರ್ಟ್ಸ್ ಮತ್ತು ಟೀ ಶರ್ಟ್‌ಗಳಲ್ಲಿ ಪಾಕೆಟ್‌ಗಳನ್ನು ತಯಾರಿಸಲಾಗುತ್ತದೆ, ಆದರೆ ಮಹಿಳೆಯರ ಶರ್ಟ್‌ಗಳಲ್ಲಿ ಟೀಶರ್ಟ್ಗಳಲ್ಲಿ ಪಾಕೆಟ್‌ಗಳೇ ಇರುವುದಿಲ್ಲ. ಅವರ ಇತರೆ ಬಟ್ಟೆಗಳಿಗೂ ಪಾಕೆಟ್‌ಗಳ ಕೊರತೆಯಿದೆ. ಇನ್ನು ಪಾಕೆಟ್ ಇಲ್ಲದ ಹುಡುಗಿಯರ ಜೀನ್ಸ್‌ಗಳನ್ನು ನಾವೆಲ್ಲರು ಸಾಕಷ್ಟು ನೋಡಿರುತ್ತೇವೆ. ಆದರೆ ಇದರ ಹಿಂದೆ ಯಾವುದೇ ವೈಜ್ಞಾನಿಕ ಕಾರಣವಿಲ್ಲ. ಹಿಂದಿನವರ ನಂಬಿಕೆ ಮತ್ತು ಪುರುಷರ ಪ್ರಾಬಲ್ಯದಿಂದ ಈ ಪದ್ದತಿಯನ್ನು ತರಲಾಗಿದೆ.
ಪಾಕೆಟ್ ಬದಲಿಗೆ ಚೀಲ: ಶತಮಾನಗಳ ಹಿಂದೆ ಪುರುಷರು ಮತ್ತು ಮಹಿಳೆಯರು ಇಬ್ಬರೂ ತಮ್ಮ ಸೊಂಟ ಅಥವಾ ಮೇಲಿನ ಭಾಗದಲ್ಲಿ ಚೀಲಗಳಂತಹ ವಸ್ತುಗಳನ್ನು ನೇತುಹಾಕುತ್ತಿದ್ದರು. ಇನ್ನು ಅದರಲ್ಲಿ ತಮಗೆ ಬೇಕಾದ ವಸ್ತುಗಳನ್ನು ಇಡುತ್ತಿದ್ದರು. ಆದರೆ ಸುಮಾರು 400 ವರ್ಷಗಳ ನಂತರ, ಪುರುಷರ ಬಟ್ಟೆಗಳಲ್ಲಿ ಪಾಕೆಟ್‌ಗಳನ್ನು ಹೊಲಿಯಲು ಆರಂಭಿಸಿದ್ದರು. ನಂತರದಲ್ಲಿ ಪುರುಷರ ಬಟ್ಟೆಗಳಲ್ಲಿ ಪಾಕೆಟ್‌ಗಳ ಪದ್ಧತಿ ಆರಂಭವಾಯಿತು.
ಆದರೆ ಮಹಿಳೆಯರ ಬಟ್ಟೆಯಲ್ಲಿ ಈ ಬದಲಾವಣೆ ಮಾಡಿಲ್ಲ. ಹೆಣ್ಣಿನ ದೇಹಾಕಾರ ಕೆಟ್ಟದಾಗಿ ಕಾಣಬೇಕು ಎಂದು ಅಂದಿನ ಪುರುಷರು ಬಯಸದೇ ಇರುವುದೇ ಇದಕ್ಕೆ ದೊಡ್ಡ ಕಾರಣ ಎನ್ನಲಾಗಿದೆ. ಪಾಕೆಟ್ ಹೊಂದಿದ್ದರೆ ಆಕೆ ಅದರೊಳಗೆ ಏನನ್ನಾದರೂ ವಸ್ತುಗಳನ್ನು ಇಡುತ್ತಾರೆ. ಆದ್ದರಿಂದ ದೇಹವು ಆಕಾರವಿಲ್ಲದೆ ಕಾಣಿಸಿಕೊಳ್ಳಬಹುದು. ಇದಕ್ಕಾಗಿಯೇ ಪಾಕೆಟ್‌ಗಳನ್ನು ಅಳವಡಿಸಿಲ್ಲ ಎಂದಿದ್ದಾರೆ.
ಎರಡನೆಯ ಕಾರಣವೆಂದರೆ ಆ ಕಾಲದ ಪುರುಷರು ಮಹಿಳೆಯರನ್ನು ದುರ್ಬಲರನ್ನಾಗಿ ಮಾಡಲು ಬಯಸಿದ್ದರು. ಇದೇ ಕಾರಣಕ್ಕೆ ಮಹಿಳೆಯರ ಬಟ್ಟೆಯಲ್ಲಿ ಪಾಕೆಟ್‌ಗಳನ್ನು ನೀಡಲಿಲ್ಲ ಎಂದು ವರದಿಯೊಂದು ಹೇಳುತ್ತದೆ. ಮಹಿಳೆಯರ ಬಟ್ಟೆಯಲ್ಲಿ ಪಾಕೆಟ್ ಸಹ ಕೊಟ್ಟರೆ ಕಳ್ಳತನ, ಲೂಟಿಯ ಭಯವಿಲ್ಲದೆ ನಿರ್ಭಯವಾಗಿ ಎಲ್ಲಿಗೆ ಬೇಕಾದರೂ ಹೋಗಿಬರುತ್ತಾರೆ. ಆದರೆ ಹೆಂಗಸರು ಇಷ್ಟು ಆರಾಮವಾಗಿ ಎಲ್ಲಿಗಾದರೂ ಬಂದು ಹೋಗುವುದು ಗಂಡಸರಿಗೆ ಇಷ್ಟವಿರಲಿಲ್ಲ, ಇದರಿಂದಾಗಿ ಅವರ ಬಟ್ಟೆಯಲ್ಲಿ ಪಾಕೆಟ್‌ಗಳನ್ನು ನೀಡುತ್ತಿರಲಿಲ್ಲ.