ತಾಯಿ ಮಕ್ಕಳ ಸಂಬಂಧ ಅವಿನಾಭಾವ. ಎಷ್ಟು ವಿವರಿಸಿದರೂ ಸಾಲದು. ಆಕೆ ಎಷ್ಟೇ ಕಷ್ಟದಲ್ಲಿ ಇದ್ರೂ ಕೂಡ ತನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ. ಮಕ್ಕಳು ಕೂಡ ದೊಡ್ಡವರಾದ ಮೇಲೆ ಅಷ್ಟೇ ಚೆನ್ನಾಗಿ ನೋಡಿಕೊಳ್ಳಬೇಕು. ಇದೀಗ ಅಂತದ್ದೇ ಒಂದು ಸುದ್ಧಿ ವೈರಲ್ ಆಗ್ತಾ ಇದೆ.
2/ 7
ಇದು ಕಾರವಾರದ ಆಸ್ಪತ್ರೆಯೊಂದಲ್ಲಿ ನಡೆದ ಘಟನೆ. ಹೋಳಿ ಹಬ್ಬವನ್ನು ಆಚರಿಸಿದ ತಾಯಿ ಹಾಗೇ ಮಗಳು. ನಿಜಕ್ಕೂ ಭಾವನಾತ್ಮಕವಾಗಿದೆ.
3/ 7
ಐಸಿಯುದಲ್ಲಿದ್ದ ಅಮ್ಮನೊಂದಿಗೆ ಹಾಡು ಹೇಳಿ ಹೋಳಿ ಆಚರಿಸಿದ್ದಾರೆ ವೈದ್ಯೆ. ಅನಾರೋಗ್ಯದಿಂದ ತುರ್ತು ನಿಗಾ ಘಟಕದಲ್ಲಿದ್ದ ಅಮ್ಮನಿಗೆ ಬಣ್ಣ ಹಚ್ಚಿ ಹೋಳಿ ಸಂಭ್ರಮಿಸಿದ್ದಾರೆ ಮಗಳು.
4/ 7
ಹಾಡು ಹೇಳುವ ಮೂಲಕ ಮಗಳು ವೈದ್ಯೆ ಅಮ್ಮನ ಮೊಗದಲ್ಲಿ ಮಂದಹಾಸ ತರಿಸಿದ ಫೋಟೋ ವೈರಲ್ ಆಗಿದೆ. ಇದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದ ಘಟನೆಯಾಗಿದೆ.
5/ 7
ವೈದ್ಯೆಯ ಹೆಸರು ಪೆಥಾಲಜಿಸ್ಟ್ ಡಾ.ಸುಮನ್ ದಿನೇಶ ಹೆಗಡೆ. ತನ್ನ ಅಮ್ಮನಿಗಾಗಿ ಹಾಡಿ ಹೋಳಿ ಸಂಭ್ರಮಿಸಿದ್ದಾರೆ. ಮಹಾಲಕ್ಷ್ಮೀ ನರ್ಸಿಂಗ್ ಹೋಮ್ನಲ್ಲಿ ಈ ಘಟನೆ ನಡೆದಿದೆ.
6/ 7
ಆಸ್ಪತ್ರೆಯಲ್ಲಿ ದಾಖಲಾದ ಅಮ್ಮನಿಗೆ ಚಿಕಿತ್ಸೆ ಕೊಡಿಸುವ ಜೊತೆಗೆ ಅಪ್ಪ ಅಮ್ಮನ ಜೊತೆ ಅಮ್ಮನ ಆಶಯದಂತೆ ಹೋಳಿ ಆಚರಿಸಿದ್ದಾರೆ. ಅನಾರೋಗ್ಯದ ಅಮ್ಮನ ಮೊಗದಲ್ಲಿ ನಗು ತರಿಸಿದ ಮಗಳು ನಿಜಕ್ಕೂ ಗ್ರೇಟ್ ಅಲ್ವಾ?
7/ 7
ಈ ಮಾನವೀಯ ದೃಶ್ಯವು ಹೋಳಿ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಸೊಗಸಾಗಿ ಹಾಡು ಹೇಳಿದ ಮಗಳು ತನ್ನ ತಾಯಿಯ ಮುಖದಲ್ಲಿ ನಗು ತರಿಸಿದ್ದಾರೆ. ತಾಯಿಗೂ ಸ್ವಲ್ಪ ಹೋಳಿ ಬಣ್ಣವನ್ನು ಹಚ್ಚಿದ್ದಾರೆ.
First published:
17
Emotional Story: ಐಸಿಯುನಲ್ಲಿರುವ ಅಮ್ಮನ ಜೊತೆ ಹಾಡು ಹೇಳಿ, ಹೋಳಿ ಆಡಿದ ಮಗಳು; ಎಂಥವರಿಗಾದ್ರೂ ಹೃದಯ ಕರಗದೇ ಇರದು!