ಪ್ರಸ್ತುತ ಎಲ್ಲ ಕೆಲಸಗಳನ್ನು ಆನ್‌ಲೈನ್‌ನಲ್ಲಿ ಮಾಡಲಾಗುತ್ತದೆ. ಅದ್ರಲ್ಲೂ ಡೇಟಿಂಗ್ ಆಪ್ಗಳು ಬಂದ ಮೇಲೆ ಗೊತ್ತಿಲ್ಲದವರ ಜೊತೆ ಮಾತನಾಡುವುದು, ಅವರ ಜೊತೆ ಪ್ರೀತಿಯಲ್ಲಿ ಬೀಳುವುದು ಮಾಮೂಲಿಯಾಗಿಬಿಟ್ಟಿದೆ. ಡೇಟಿಂಗ್ ಆ್ಯಪ್‌ಗಳಿಂದಾಗಿ ಭಾರತದಲ್ಲಿ ಜನರು ಇಂಗ್ಲಿಷ್ ಹುಡುಗಿಯರನ್ನು ಪ್ರೀತಿಸುತ್ತಿದ್ದಾರೆ. ಡೇಟಿಂಗ್ ಅಪ್ಲಿಕೇಶನ್‌ಗಳು ನಮಗೆ ಸ್ಥಳೀಯವಾಗಿ ಪರಿಚಯವಿಲ್ಲದ ಜನರನ್ನು ಪ್ರೀತಿಸಲು ಅವಕಾಶಗಳನ್ನು ಒದಗಿಸುತ್ತವೆ.
ಇದು ಡೇಟಿಂಗ್‌ನ ಮತ್ತೊಂದು ಕೋನವಾಗಿದೆ. ಜನರು ತಮ್ಮ ವಿವರಗಳನ್ನು ಇಲ್ಲಿ ತುಂಬುತ್ತಾರೆ ಮತ್ತು ಒಂದೇ ರೀತಿಯ ಆಸಕ್ತಿಗಳು, ಇಷ್ಟಗಳನ್ನು ಹೊಂದಿರುವ ವ್ಯಕ್ತಿಯೊಂದಿಗೆ ಅವರನ್ನು ಸಂಪರ್ಕಿಸಲು ಅಲ್ಗಾರಿದಮ್‌ಗಳ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಡೇಟಿಂಗ್ ಅಪ್ಲಿಕೇಶನ್‌ಗಳಿಂದ ಇದು ಸಾಧ್ಯ. ಇದೀಗ ಮಿಸ್ಟರ್ ಪರ್ಫೆಕ್ಟ್ ಸಿನಿಮಾ ಕಲ್ಪನೆಯನ್ನು ಅನುಸರಿಸಿ ತಮ್ಮ ಆಯ್ಕೆಯ ಸಂಗಾತಿಯನ್ನು ಹುಡುಕುತ್ತಿದ್ದಾರೆ.