Tauktae: ಚಂಡಮಾರುತಕ್ಕೆ ಹೆಸರಿಡುವವರು ಯಾರು? ತೌಕ್ತೆ ಎಂದು ಹೆಸರೇಗೆ ಬಂತು? ಇಲ್ಲಿದೆ ಮಾಹಿತಿ
Tauktae Cyclone: ಚಂಡಮಾರುತವನ್ನು ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಅಟ್ಲಾಂಟಿಕ್ ಪ್ರದೇಶದಲ್ಲಿ ಹರಿಕೇನ್, ಪೆಸಿಫಿಕ್ ತೀರದಲ್ಲಿ ಟೈಫೂನ್ ಮತ್ತು ಹಿಂದೂ ಮಹಾ ಸಾಗರದ ಭಾಗದಲ್ಲಿ ಸೈಕ್ಲೋನ್ ಎಂದು ಕರೆಯುತ್ತಾರೆ.
ಪ್ರತಿ ಬಾರಿ ಚಂಡಮಾರುತಕ್ಕೆ ಹೊಸ ಹೊಸ ಹೆಸರುಗಳಿಂದ ಕರೆಯುತ್ತಾರೆ. ಈ ಬಾರಿಯ ಅಪ್ಪಳಿಸಿದ ಚಂಡಮಾರುತಕ್ಕೆ ತೌಕ್ತೆ ಎಂದು ಹೆಸರಿಡಲಾಗಿದೆ. ಈ ಹೆಸರು ಸಾಕಷ್ಟು ಜನರ ಕುತೂಹಲಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಚಂಡಮಾರುತಕ್ಕೆ ಇಂತಹ ಹೆಸರಿಡುವವರು ಯಾರು? ಎಂಬ ಪ್ರಶ್ನೆ ಅನೇಕರಲ್ಲಿ ಹುಟ್ಟಿಕೊಂಡಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
2/ 10
ಚಂಡಮಾರುತ ಹವಾಮಾನಕ್ಕೆ ಸಂಬಂಧಿಸಿದ ಘಟನೆಯಾಗಿದ್ದು ಗಾಳಿಯ ಒತ್ತಡ ಕಡಿಮೆ ಇರುವ ಪ್ರದೇಶದತ್ತ ಗಾಳಿಯು ತಿರುಗುತ್ತಾ ಬರುವುದನ್ನು ಚಂಡಮಾರುತ ಎಂದು ಹೇಳುತ್ತಾರೆ. ಇಲ್ಲಿ ಗಾಳಿಯು ಪ್ರದಕ್ಷಿಣೆ ಅಥವಾ ಅಪ್ರದಕ್ಷಿಣೆಯಾಗಿ ತಿರುಗುತ್ತಿರುತ್ತದೆ.
3/ 10
ಕಡಿಮೆ ಒತ್ತಡವೆಂದರೆ ಆ ಪ್ರದೇಶದಲ್ಲಿ ಗಾಳಿ ಕಡಿಮೆ ಪ್ರಮಾಣದಲ್ಲಿರುತ್ತದೆ ಅಲ್ಲಿ ಸಾಂದ್ರತೆ ಕಡಿಮೆಯಾಗಿ ತೂಕ ಕಡಿಮೆಯಾಗುವುದು. ಆಗ ಉಳಿದ ಕಡೆಯಿಂದ ಗಾಳಿ ಅಲ್ಲಿಗೆ ರಭಸದಲ್ಲಿ ನುಗ್ಗುವುದು. ಗಾಳಿಯ ಚಲನೆ ಸುರುಳಿಯಾಕಾರ ಹೊಂದುವುದು. ಇದರಿಂಡ ಚಂಡಮಾರುತ ಉಂಟಾಗುತ್ತದೆ.
4/ 10
ಚಂಡಮಾರುತವನ್ನು ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಅಟ್ಲಾಂಟಿಕ್ ಪ್ರದೇಶದಲ್ಲಿ ಹರಿಕೇನ್, ಪೆಸಿಫಿಕ್ ತೀರದಲ್ಲಿ ಟೈಫೂನ್ ಮತ್ತು ಹಿಂದೂ ಮಹಾ ಸಾಗರದ ಭಾಗದಲ್ಲಿ ಸೈಕ್ಲೋನ್ ಎಂದು ಕರೆಯುತ್ತಾರೆ.
5/ 10
ಚಂಡಮಾರುತಕ್ಕೆ ಚೆಂದದ ಮತ್ತು ವಿಭಿನ್ನವಾದ ಹೆಸರನ್ನಿಟ್ಟಿರುತ್ತಾರೆ. ತಿತ್ಲಿ, ಹುಡ್ ಹುಡ್, ನಾದಾ, ಗಜಾ, ಅಂಫಾನ್, ವಾರ್ಧಾ, ನಿವಾರ್, ಬುರೇವಿ, ತೌಕ್ತೆ ಹೀಗೆ ಪ್ರತಿ ಚಂಡಮಾರುತಕ್ಕೆ ಒಂದೊಂದು ಹೆಸರು ಇಡಲಾಗುತ್ತದೆ.
6/ 10
ಜಾಗತಿಕ ಮಟ್ಟದಲ್ಲಿ ಉಷ್ಣವಲಯದ ಚಂಡಮಾರುತಗಳಿಗೆ ವಿಶ್ವ ಹವಾಮಾನ ಸಂಸ್ಥೆ (World Meteorological Organization) ಆಶ್ರಯದಲ್ಲಿರುವ ಜಗತ್ತಿನ 11 ಎಚ್ಚರಿಕೆ ಕೇಂದ್ರಗಳ ಪೈಕಿ ಯಾವುದಾದರೂ ಒಂದು ಕೇಂದ್ರ ಅಧಿಕೃತ ಹೆಸರು ಇಡುತ್ತದೆ.
7/ 10
ಮೊದಲು ಚಂಡಮಾರುತಕ್ಕೆ ಇಡಬಹುದಾದ ಎಲ್ಲ ಸಂಭಾವ್ಯ ಹೆಸರುಗಳನ್ನು ಪೆಸಿಫಿಕ್ ಪ್ರದೇಶದಲ್ಲಿರುವ ವಿಶ್ವ ಹವಾಮಾನ ಸಂಸ್ಥೆಯ ಪ್ರಾದೇಶಿಕ ಉಷ್ಣವಲಯ ಚಂಡಮಾರುತ ಸಮಿತಿಗೆ ಸಲ್ಲಿಸಬೇಕು. ಈ ಸಮಿತಿಯು ಹೆಸರುಗಳನ್ನು ತಿರಸ್ಕರಿಸಬಹುದು ಅಥವಾ ಅದರಲ್ಲಿ ಬದಲಾವಣೆ ಮಾಡಬಹುದು ಇಲ್ಲವೇ ತಾನೇ ಹೆಸರು ಇಡಬಹುದು.
8/ 10
ಚಂಡಮಾರುತ ಅಪ್ಪಳೀಸುದಕ್ಕು ಮೊದಲು ಆ ಪ್ರದೇಶದಲ್ಲಿರುವ ವಿವಿಧ ರಾಷ್ಟ್ರಗಳು ಈ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತವೆ. ಹೆಚ್ಚು ಮತ ಗಳಿಸಿದ ಹೆಸರನ್ನು ಆಯ್ಕೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಇಂಗ್ಲಿಷ್ ವರ್ಣಮಾಲೆಯ ಅನುಕ್ರಮದಲ್ಲಿ ಹೆಸರು ಇಡಲಾಗುತ್ತದೆ. ಉದಾಹರಣೆಗೆ ವರ್ಷದಲ್ಲಿ ಮೊದಲು ಅಪ್ಪಳಿಸುವ ಚಂಡಮಾರುತಕ್ಕೆ ‘ಎ’ ಅಕ್ಷರದಿಂದ ಆರಂಭವಾಗುವ ಹೆಸರು ಇಡುತ್ತಾರೆ.
9/ 10
ಇನ್ನು ಹಿಂದೂ ಮಹಾ ಸಾಗರದಿಂದ ಸುತ್ತುವರಿದಿರುವ ರಾಷ್ಟ್ರಗಳು ಅಪ್ಪಳಿಸುವ ಚಂಡಮಾರುತಕ್ಕೆ 2004ರಿಂದ ಹೆಸರಿಡುತ್ತಿವೆ. ವಿಶ್ವ ಪವನಶಾಸ್ತ್ರ ಸಂಸ್ಥೆ(WMO) ಚಂಡಮಾರುತಗಳಿಗೆ ಹೆಸರಿಡುವ ಕ್ರಮವನ್ನು ಜಾರಿಗೆ ತಂದಿದೆ.
10/ 10
ಭಾರತದಲ್ಲಿ ಕಾಣಿಸಿಕೊಂಡ ನಾಡಾ ಚಂಡಮಾರುತಕ್ಕೆ ಒಮಾನ್ ದೇಶ ಹೆಸರು ನೀಡಿತ್ತು. ಈ ಭಾರಿಯ ಚಂಡಮಾರುತಕ್ಕೆ ಮಯನ್ನಾರ್ ದೇಶ ತೌಕ್ತೆ ಎಂದು ಹೆಸರಿಟ್ಟಿದೆ (ಟೌಟೆ ಎಂದು ಕರಿಯುವುದು). ಬರ್ಮಿಸ್ ಭಾಷೆಯಲ್ಲಿ ತೌಕ್ತೆ ಎಂದರೆ ವಿಷಕಾರಿ ಹಲ್ಲಿ ಎಂಬ ಅರ್ಥವಿದೆ.