ಕೊರೊನಾ ಪ್ರತಿಯೊಬ್ಬರ ಜೀವನವನ್ನು ತಿಂದು ಬಿಟ್ಟಿದೆ ಎಂದು ಹೇಳಿದ್ರೆ ತಪ್ಪಾಗಲಾರದು. ಸತತ 1 ವರ್ಷ ಎಲ್ಲರನ್ನೂ ಮನೆಯೊಳಗೆ ಕೈದಿಗಳನ್ನಾಗಿ ಮಾಡಿತ್ತು ಎನ್ನಬಹುದು.
2/ 9
ಮದುವೆ ಸಮಾರಂಭಗಳು, ಶಾಲಾ ಕಾಲೇಜುಗಳು ಎಲ್ಲವೂ ಬಂದ್ ಆಗಿತ್ತು. ಇನ್ನು ಎಲ್ಲಾ ದೊಡ್ಡ ಕಂಪೆನಿಗಳಿಂದ ವರ್ಕ್ ಫ್ರಮ್ ಹೋಮ್ ಅನ್ನೋ ಕಾನ್ಸೆಪ್ಟ್ ಆರಂಭವಾಯ್ತು. ಒಟ್ಟಿನಲ್ಲಿ ಜನರ ಜೀವನ ಶೈಲಿಯನ್ನೇ ಬದಲಾಯಿಸಿತ್ತು ಈ ಕೊರೊನಾ.
3/ 9
ಇದೇ ರೀತಿ ಕೊರೊನಾ ಮುಂದುವರಿದರೆ ಜನರು ಯಾವ ರೀತಿ ತಮ್ಮ ಜೀವನ ಶೈಲಿ ಬದಲಾಯಿಸಬಹುದು ಎಂದು ಡಿಜಿಟಲ್ ಕಲಾವಿದ ಮಾಧವ್ ಕೊಹ್ಲಿ ಚಿತ್ರಗಳ ಮೂಲಕ ಅಂದಾಜಿಸಿದ್ದಾರೆ. ಈ ಬಿಕ್ಕಟ್ಟಿನ ಕೆಲವ ಚಿತ್ರಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಭವಿಷ್ಯದಲ್ಲಿ ಜನ ಹೇಗೆ ಕಾಣಿಸುತ್ತಾರೆಂದು ನೋಡಬಹುದು.
4/ 9
ಕೊರೊನಾ ಹಾವಳಿ ಆರಂಭವಾದಾಗಿನಿಂದ, ಪ್ರತಿಯೊಬ್ಬರ ಮುಖದಲ್ಲೂ ವಿಭಿನ್ನ ಮಾಸ್ಕ್ ಕಾಣಿಸಿಕೊಂಡವು. ಹೀಗಿರುವಾಗ ಭವಿಷ್ಯದಲ್ಲಿ ಎಲ್ಲರ ಮುಖದಲ್ಲೂ ಇನ್ನೂ ದೊಡ್ಡ ಮಾಸ್ಕ್ ಕಾಣಿಸುತ್ತವೆ, ಯಾಕೆಂದರೆ ಈ ಕೊರೊನಾ ನಮ್ಮನ್ನು ಬಿಡೋದಿಲ್ಲ ಎಂಬ ಕಲ್ಪನೆಯಲ್ಲಿ ಇದಕ್ಕೆ ಸಮನಾದ ಚಿತ್ರಗಳನ್ನು ಬಿಡಿಸಿದ್ದಾರೆ.
5/ 9
ಪೊಲೀಸರು ತಮ್ಮ ಸಮವಸ್ತ್ರದ ಜೊತೆಗೆ ಅದಕ್ಕೆ ಹೋಲಿಕೆಯಾಗುವ ಮಾಸ್ಕ್ ಹಾಕಿಕೊಂಡ ಚಿತ್ರಗಳೂ ಇವೆ. ಟ್ರಾಫಿಕ್ ಹೊಗೆಯಿಂದ ರಕ್ಷಿಸಿಕೊಳ್ಳುವ ಜೊತೆ ಕೊರೊನಾವನ್ನು ಓಡಿಸಲು ಪೊಲೀಸರಿಗೆ ಸಹಕಾರಿಯಾಗುತ್ತದೆ ಎಂಬಂತೆ ಚಿತ್ರದಲ್ಲಿ ತೋರಿಸಲಾಗಿದೆ.
6/ 9
ಮಕ್ಕಳು ಇನ್ನು ಮುಂದೆ ಆಟವಾಡಲು ಹೊರಗೆ ಹೋಗುವಾಗಲೂ ಮಾಸ್ಕ್ ಧರಿಸಬೇಕಾಗುತ್ತದೆ. ಈ ಕೊರೊನಾ ಅತಿಥಿಯಂತೆ ಆಗಾಗ ಬಂದು ಹೋಗುತ್ತದೆ. ಮಕ್ಕಳ ಮೇಲೆ ಹೆಚ್ಚು ದಾಳಿ ಮಾಡುವುದರಿಂದ ಭವಿಷ್ಯದಲ್ಲಿ ಜೀವನ ಈ ಚಿತ್ರದಲ್ಲಿರುವಂತಿರಬಹುದು ಎಂಬ ವಿವರಣೆ ನೀಡಿದ್ದಾರೆ.
7/ 9
ತರಕಾರಿಗಳನ್ನು ತರಲು ಮಾರುಕಟ್ಟೆಗೆ ಹೋಗುವಾಗ ಗಗನಯಾತ್ರಿಗಳಂತೆ ತಯಾರಾಗಬೇಕಾಗುತ್ತದೆ. ಹಾಗೆಯೇ ಮನೆಗೆ ಬಂದಾಗಲೂ ನೇರವಾಗಿ ಒಳಗೆ ಹೋಗುವಂತಿಲ್ಲ. ಅದಕ್ಕೂ ಮುನ್ನ ಹೊರಗೆಯೇ ಈ ಬಟ್ಟೆಗಳನ್ನು ಕಳಚಿಟ್ಟು ಹೋಗಬೇಕು.
8/ 9
ಫಿಟ್ ಆಗಲು ಬೆಳಗ್ಗೆ ಜಾಗಿಂಗ್ ಅಥವಾ ಸೈಕ್ಲಿಂಗ್ ಮಾಡುವ ಸಮಯದಲ್ಲೂ ಮುಂದಿನ ದಿನಗಳಲ್ಲಿ ಇದೇ ಈ ರೀತಿಯಾಗಿ ಮಾಸ್ಕ್ ಧರಿಸಬೇಕಾದ ಸಂದರ್ಭ ಬರಬಹುದು ಎಂಬುವುದನ್ನೂ ಚಿತ್ರದಲ್ಲಿ ಬಿಂಬಿಸಿದ್ದಾರೆ. ಸೈಕ್ಲಿಂಗ್ನಿಂದ ಜೀವನ ಹಾಳಾಗುತ್ತಾ ಎಂಬ ಶೀರ್ಷಿಕೆ ನೀಡಿದ್ದಾರೆ.
9/ 9
ಇನ್ನು ಕೊರೊನಾ ಬಂತು ಅಂತ ಮದುವೆ ಆಗದೇ ಇರಲು ಆಗೋಲ್ಲ. ಆದ್ರೆ ಮದುವೆ ಮನೆಯಲ್ಲಿ ವಧು ವರರ ಫೋಟೋಶೂಟ್ಗಳನ್ನು ಮಾಡಿಸುವುದನ್ನು ಮುಂದಿನ ದಿನಗಳಲ್ಲಿ ನಾವು ಹೀಗೆ ಕಾಣಬಹುದು ಎಂದು ಹೇಳಿದ್ದಾರೆ.