ಎಲ್ಲೆಡೆ ಲಾಕ್ಡೌನ್ ಮಾಡಿ ಸುಮ್ಮನೆ ಮನೆಯಲ್ಲೇ ಕೂರುವ ಹಾಗೆ ಮಾಡಿಬಿಟ್ಟಿತ್ತು ಈ ಕೊರೋನ. ಅದಲ್ಲದೇ ಎಲ್ಲಿ ಹೋಗೋದಾದ್ರೂ ಕೂಡ ಮಾಸ್ಕ್ ಕಡ್ಡಾಯವಾಗಿಬಿಟ್ಟಿತ್ತು. ಇದಕ್ಕೆಲ್ಲಾ ಮೂಲ ಕಾರಣವಾಗಿರೋದು ಚೀನಾ ಅಲ್ವಾ? ಹಾಗಾಗಿಯೇ ನಮಗೂ ಅವರಿಗೂ ಸಂಬಂಧವೆಲ್ಲವೂ ಕಟ್ . ಹಾಗೆಯೇ ಚೀನಾದಲ್ಲಿಯೂ ಕೇಸ್ಗಳು ಏರುತ್ತಲೇ ಇತ್ತು. ಇದರಿಂದ ಅಲ್ಲಿನ ನಿಯಮಗಳು ಕೂಡ ಬಿಗಿಬಂದಸ್ತು ಮಾಡಲಾಗಿತ್ತು.
ಭಯಂಕರವಾಗಿ ಹೆಚ್ಚಾಗಿದ್ದ ಈ ಮಹಾಮಾರಿ ಇದೀಗ ಸ್ವಲ್ಪ ಕೂಲ್ ಆಗ್ತಾ ಇದೆ ಅನ್ನುವಷ್ಟರಲ್ಲಿ ಮತ್ತೆ ಅಣ್ಣನ ಆಗಮನವಾಗಿದೆ. ತಂಗಿಯನ್ನು ನೋಡಲು ಅಣ್ಣ ಮನೆಗೆ ಬಂದ ಹಾಗೆ ಆಗೊಮ್ಮೆ ಈಗೊಮ್ಮೆ ಈ ಕೊರೋನ ಬರ್ತಾನೇ ಇರುತ್ತೆ ನೋಡಿ. ಇದರ ನಡುವೆ ಕೊರೋನವನ್ನು ಹುಟ್ಟುಹಾಕಿದ ಚೀನಾದಲ್ಲಿ ಹೊಸ ಡೇಟಿಂಗ್ ನಿಯಮವನ್ನು ಮಾಡಲಾಗಿದೆ. ಇದಂತೂ ಕೊರೋನಾ ನಿಯಮಗಳ ತದ್ವಿರುದ್ಧವಾದ ಡೇಟಿಂಗ್ ಸಂಸ್ಕ್ರತಿ ಅಂತ ಹೇಳಿದ್ರೂ ತಪ್ಪಾಗೋಲ್ಲ ಬಿಡಿ. ಯಾಕೆ ಅಂತ ಕೇಳ್ತೀರಾ? ಮುಂದೆ ಓದಿ.