ಆಹಾರ ಸೇವಿಸಿದ ಬಳಿಕ ಹಣ್ಣುಗಳನ್ನು ಸೇವಿಸಬೇಕು ಎನ್ನತ್ತಾರೆ ವೈದ್ಯರು. ಹಣ್ಣುಗಳು ನಮಗೆ ಉತ್ತಮ ಆರೋಗ್ಯವನ್ನು ಒದಗಿಸುತ್ತದೆ. ಹೆಚ್ಚಿನ ಹಣ್ಣುಗಳು ವಿಟಮಿನ್ಗಳನ್ನು ಹೊಂದಿದ್ದು, ಇದೇ ಕಾರಣಕ್ಕೆ ದೇಹದ ಆರೋಗ್ಯ ವೃದ್ಧಿಸಲು ಹಣ್ಣು ತಿನ್ನಬೇಕು ಎನ್ನುತ್ತಾರೆ. ಆದರೆ ಪ್ರಪಂಚದಲ್ಲಿ ಸೇವನೆಗೆ ಯೋಗ್ಯವಾದ ಹಣ್ಣುಗಳು ಇರುವುದು ಒಂದಡೆಯಾದರೆ, ಮತ್ತೊಂದೆಡೆ ಸೇವನೆಗೆ ಯೋಗ್ಯವಾದ, ಆರೋಗ್ಯಕ್ಕೆ ಅಪಾಯಕಾರಿ ಮತ್ತು ವಿಷಕಾರಿ ಎಂದೆನಿಸಿಕೊಂಡ ಹಣ್ಣುಗಳು ಇವೆ. ಇದರ ಬಗ್ಗೆ ಮಾಹಿತಿ ಇಲ್ಲಿದೆ
ನಕ್ಷತ್ರ ಹಣ್ಣು: ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ ಮತ್ತು ಫೈಬರ್, ವಿಟಮಿನ್ ಸಿ ಸಮೃದ್ಧವಾಗಿದೆ. ಆದಾಗ್ಯೂ, ಮೂತ್ರಪಿಂಡದ ಸಮಸ್ಯೆಗಳಿದ್ದರೆ ಈ ಹಣ್ಣನ್ನು ತಿನ್ನುವ ಮೊದಲು ವೈದ್ಯರನ್ನು ಸಂಪರ್ಕಿಸುವುದದು ಒಳಿತು. ವಾಸ್ತವವಾಗಿ, ಹಳದಿ ನಕ್ಷತ್ರದ ಹಣ್ಣಿನಲ್ಲಿ ಹೆಚ್ಚಿನ ಮಟ್ಟದ ಆಕ್ಸಲೇಟ್ ಇದೆ, ಇದು ಮೂತ್ರಪಿಂಡದ ಸಮಸ್ಯೆಗಳಿರುವ ಜನರಿಗೆ ಅಪಾಯಕಾರಿ. ಇದನ್ನು ಅತಿಯಾಗಿ ತಿನ್ನುವುದರಿಂದ ಮೂತ್ರಪಿಂಡದ ಹಾನಿ, ಹೃದಯಾಘಾತ ಮತ್ತು ಸಾವಿಗೆ ಕಾರಣವಾಗಬಹುದು.
ಈ ಜಟ್ರೋಫಾ ಸಸ್ಯವು ಉಷ್ಣವಲಯದ ಅಥವಾ ಉಪ-ಉಷ್ಣವಲಯದ ಹವಾಮಾನದಲ್ಲಿ ಪ್ರಪಂಚದ ಬಹುತೇಕ ಎಲ್ಲಾ ಮೂಲೆಗಳಲ್ಲಿ ಕಂಡುಬರುತ್ತದೆ. ದುರದೃಷ್ಟವಶಾತ್, ಭಾರತದ ಅನೇಕ ಭಾಗಗಳಲ್ಲಿ, ಮಕ್ಕಳು ಈ ವಿಷಕಾರಿ ಹಣ್ಣಿ ಬಗ್ಗೆ ತಿಳಿಯದೆ ತಿನ್ನುತ್ತಾರೆ. ವಾಸ್ತವವಾಗಿ, ಈ ಸಿಹಿ ಹಳದಿ ಹಣ್ಣಿನಲ್ಲಿರುವ ಬೀಜಗಳು ಅಪಾಯಕಾರಿ ವಿಷವಾಗಿ ಕಾರ್ಯನಿರ್ವಹಿಸುತ್ತವೆ. ಜಟ್ರೋಫಾ ಬೀಜಗಳು ವಾಂತಿ, ಅತಿಸಾರ ಮತ್ತು ಮೂತ್ರಪಿಂಡದ ಹಾನಿಯಂತಹ ರೋಗಲಕ್ಷಣಗಳನ್ನು ಉಲ್ಬಣಗೊಳಿಸಬಹುದು. ಈ ಹಣ್ಣನ್ನು ತಿನ್ನುವುದು ಸಾವಿಗೆ ಕಾರಣವಾಗಬಹುದು.