ಅರ್ಮೇನಿಯ: ಈ ದೇಶವನ್ನು ನೀವು ಹೆಚ್ಚಾಗಿ ಕೇಳಿರೋದಿಲ್ಲ. ಈ ದೇಶಕ್ಕೆ ಟ್ರಿಪ್ ಹೋಗೋದು ಸಖತ್ ರೇರ್. ಈ ದೇಶವು ಮಧ್ಯಕಾಲೀನ ವಾಸ್ತುಶಿಲ್ಪಕ್ಕೆ ಸಾಕಷ್ಟು ಪ್ರಸಿದ್ಧವಾಗಿದೆ ಅಂತ ಹೇಳಬಹುದು. ಇಲ್ಲಿಗೆ ಹೋದ್ರೆ ನಿಮ್ಮ ಪೈಸಾ ವಸೂಲ್ ಆಗೋದಂತೂ ಪಕ್ಕಾ ಬಿಡಿ. ದ್ರಾಕ್ಷಿಗಳ ತೋಟ, ಸಾಹಸ ಚಟುವಟಿಕೆಗಳಿಗೆ ಈ ದೇಶ ಸಖತ್ ಫೇಮಸ್. ವಿಶ್ವದ ಅತಿ ಉದ್ದದ ಡಬಲ್-ಟ್ರ್ಯಾಕ್ ಕೇಬಲ್ ಕಾರನ್ನು ಸಹ ನೀವು ಎಂಜಾಯ್ ಮಾಡ್ಬೋದು.
ವಿಯೆಟ್ನಾಂ: ಇದೊಂದು ಬ್ಯೂಟಿಫುಲ್ ದೇಶವಾಗಿದೆ. ಅತೀ ಕಡಿಮೆ ಬೆಲೆಯಲ್ಲಿ ನೀವಿಲ್ಲಿಗೆ ಟ್ರಿಪ್ ಹೋಗಬಹುದು. ಇತ್ತೀಚಿಗಿನ ಟ್ರಾವೆಲ್ ವ್ಲಾಗರ್ಸ್ಗಳು ಹೆಚ್ಚಾಗೀ ವಿಯೆಟ್ನಾಂಗೆ ಹೋಗಲು ಇಷ್ಟ ಪಡುತ್ತಾರೆ. ಇಲ್ಲಿ ಹವಮಾನ ಯಾವಾಗ್ಲೂ ಬದಲಾಗುತ್ತಾ ಇರುತ್ತದೆ. ಹನಿಮೂನ್‌ಗೆ ಹೋದ್ರೆ ನೀವು ಇಲ್ಲಿ ಹಲವಾರು ಸ್ಥಳಗಳನ್ನು ನೋಡಬಹುದು. ದೇವಾಲಯಗಳು, ಕಡಲತೀರಗಳು, ಪ್ರಕೃತಿಯಿಂದ ಆಶೀರ್ವದಿಸಲ್ಪಟ್ಟಿರುವ ಸ್ಥಳಗಳನ್ನು ನೋಡಬಹುದು. ಹನಿಮೂನ್‌ಗೆ ಸೂಕ್ತವಾದ ಸ್ಥಳಗಳು ಇಲ್ಲಿದ್ದು, ನಿಮ್ಮ ರೋಮ್ಯಾಂಟಿಕ್ ಅನ್ನು ಹೆಚ್ಚಿಸುತ್ತದೆ.