ಇದೊಂದು ವಿಚಿತ್ರ ಘಟನೆ. ಶ್ರೀಲಂಕಾದಲ್ಲಿ ನಡೆದಿದೆ. ಡ್ರಗ್ಸ್ ಮತ್ತು ಸಿಮ್ ಕಾರ್ಡ್ ಕಳ್ಳ ಸಾಗಾಣಿಕೆ ಆರೋಪದಡಿ ಬೆಕ್ಕು ಜೈಲು ಪಾಲಾಗಿತ್ತು. ಆದರೀಗ ಜೈಲಿನಿಂದ ಬೆಕ್ಕು ಪರಾರಿಯಾಗಿದೆ!.
2/ 9
ಇತ್ತೀಚೆಗೆ ಬೆಕ್ಕಿನ ಕುತ್ತಿಗೆಗೆ ಕಟ್ಟಿದ್ದ ಸಣ್ಣ ಪ್ಲಾಸ್ಟಿಕ್ ಚೀಲದಲ್ಲಿ ಸುಮಾರು ಎರಡು ಗ್ರಾಂ ಹೆರಾಯಿನ್ ಮತ್ತು ಮೆಮೆರಿ ಚಿಪ್, ಸಿಮ್ ಕಾರ್ಡ್ ಪತ್ತೆಯಾಗಿತ್ತು.
3/ 9
ಹಾಗಾಗಿ ಬೆಕ್ಕನ್ನು ಪೊಲೀಸರು ವಶಪಡಿದುಕೊಂಡು ವೆಲಿಕಡ ಜೈಲಿನಲ್ಲಿ ಇರಿಸಿಕೊಂಡಿದ್ದರು.ಆದರೀಗ ಬೆಕ್ಕು ಜೈಲಿನಿಂದ ಎಸ್ಕೇಪ್ ಆಗಿದೆ
4/ 9
ಶ್ರೀಲಂಕಾದ ಸ್ಥಳೀಯ ಮಾಧ್ಯಮವೊಂದು ಈ ಬಗ್ಗೆ ವರದಿ ಮಾಡಿದ್ದು. ಸದ್ಯ ಈ ವಿಚಾರ ಎಲ್ಲೆಡೆ ವೈರಲ್ ಆಗಿದೆ.
5/ 9
ಶ್ರೀಲಂಕಾ ವೆಲಿಕಡ ಜೈಲಿನ ಒಳಗಡೆ ಮಾದಕ ದ್ರವ್ಯ, ಮೊಬೈಲ್ ಫೋನ್ ಮತ್ತು ಚಾರ್ಜರ್ ಸಾಗಾಣಿಗೆ ಹೆಚ್ಚಾಗುತ್ತಿದೆ. ಈ ವಿಚಾರ ಅಧಿಕಾರಿಗಳ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
6/ 9
ಹೀಗಿರುವಾಗ ಡ್ರಗ್ಸ್ ಸಾಗಾಣಿಕೆಯಿಂದ ಸೆರೆಮನೆ ಬಂಧಿಯಾಗಿದ್ದ ಬೆಕ್ಕು ತಪ್ಪಿಸಿಕೊಂಡಿದೆ. ಆದರೆ ಅಧಿಕಾರಿ ಈ ಬಗ್ಗೆ ಯಾವುದೇ ವಿಚಾರವನ್ನು ಹೇಳಿಕೊಂಡಿಲ್ಲ.
7/ 9
ಮತ್ತೊಂದೆಡೆ ಮಾದಕ ದ್ರವ್ಯ ಸಾಗಣೆಗಾಗಿ ಪ್ರಾಣಿ ಪಕ್ಷಿಗಳನ್ನು ಬಳಸುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.
8/ 9
ಇತ್ತೀಚೆಗೆ ಕೊಲಂಬೊದ ಉಪನಗರದಲ್ಲಿ ಡ್ರಗ್ಸ್ ವಿತರಿಸಲು ಹದ್ದನ್ನು ಬಳಸಿದ್ದರು. ಘಟನೆಗೆ ಸಂಬಂಧಿಸಿದಂತೆ ಹದ್ದನ್ನು ಪೋಲಿಸರು ವಶಪಡಿಸಿಕೊಂಡಿದ್ದರು.