ಮನೆ ಕೆಲಸ ಮಾಡುವವರಿಗೆ ಅಬ್ಬಬ್ಬಾ ಎಂದರೆ ಎಷ್ಟು ಸಂಬಳ ಸಿಗಬಹುದು? ಹತ್ತರಿಂದ ಎಪ್ಪತ್ತು ಸಾವಿರ. ಹೌದು ಭಾರತದಲ್ಲಿ ಸದ್ಯಕ್ಕಂತು ಮನೆ ನೋಡಿಕೊಳ್ಳುವವರಿಗೆ ನೀಡಲಾಗುವ ವೇತನ ಇಷ್ಟೇ. ಆದರೆ ಇಲ್ಲೊಂದು ಲೈಟ್ಹೌಸ್ ಅನ್ನು ನೋಡಿಕೊಳ್ಳುವುದಕ್ಕೆ ಬರೋಬ್ಬರಿ 92 ಲಕ್ಷ ರೂ. ಸಂಬಳ ನೀಡಲಾಗುವುದು ಎಂದು ತಿಳಿಸಿದೆ. ಇಂತಹದೊಂದು ವೇತನ ನೀಡುತ್ತಿರುವುದು ಭಾರತದಲ್ಲಿ ಅಲ್ಲ. ಬದಲಾಗಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಸಣ್ಣ ಬಂಗಲೆಯಲ್ಲಿ.
ಹಾಗೆಯೇ ಈ ಲೈಟ್ಹೌಸ್ನಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಕೆಲ ಅರ್ಹತೆಗಳನ್ನೂ ಕೂಡ ಹೊಂದಿರಬೇಕಾಗುತ್ತದೆ. ಈಸ್ಟ್ ಬ್ರದರ್ ಲೈಟ್ ಸ್ಟೇಷನ್ ವೆಬ್ಸೈಟ್ ಪ್ರಕಾರ ಇಲ್ಲಿನ ಕೆಲಸಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹಾಸ್ಪಿಟಾಲಿಟಿ ಇಂಡಸ್ಟ್ರಿಯಲ್ಲಿ ಅನುಭವ ಹೊಂದಿರಬೇಕು. ಅಲ್ಲದೆ ಅಮೆರಿಕನ್ ಕೋಸ್ಟ್ ಗಾರ್ಡ್ ಕಮರ್ಷಿಯಲ್ ಬೋಟ್ ಆಪರೇಟರ್ ಲೈಸೆನ್ಸ್ ಪಡೆದಿರಬೇಕಾಗುತ್ತದೆ.