Pets In Train: ನಿಮ್ಮ ಸಾಕುಪ್ರಾಣಿ ಜೊತೆ ಟ್ರೈನ್​ನಲ್ಲಿ ಹೋಗ್ಬೋದಾ? ಇದಕ್ಕೂ ಇದೆ ಕೆಲ ನಿಯಮಗಳು

ಹೆಚ್ಚಿನವರು ಸ್ವಂತ ವಾಹನಗಳಲ್ಲಿ ಹೋಗ್ಬೇಕಾದ್ರೆ ಮನೆಯಲ್ಲಿರುವ ಸಾಕುಪ್ರಾಣಿಗಳನ್ನು ಕೊಂಡೊಯ್ಯುತ್ತಾರೆ. ಆದ್ರೆ ಹೆಚ್ಚಿನವರಿಗೆ ರೈಲುಗಳಲ್ಲಿ ಸಾಕುಪ್ರಾಣಿಗಳನ್ನು ಕೊಂಡೊಯ್ಯಬಹುದಾ ಎಂದು ಗೊತ್ತೇ ಇಲ್ಲ. ಹಾಗಿದ್ರೆ ಇದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.

First published:

  • 17

    Pets In Train: ನಿಮ್ಮ ಸಾಕುಪ್ರಾಣಿ ಜೊತೆ ಟ್ರೈನ್​ನಲ್ಲಿ ಹೋಗ್ಬೋದಾ? ಇದಕ್ಕೂ ಇದೆ ಕೆಲ ನಿಯಮಗಳು

    ಸಾಕುಪ್ರಾಣಿ ಮಾಲೀಕರು ವಿದೇಶಕ್ಕೆ ತೆರಳಿದಾಗ ತಮ್ಮ ಸಾಕುಪ್ರಾಣಿಗಳೊಂದಿಗೆ ಏನು ಮಾಡಬೇಕೆಂದು ಸಾಮಾನ್ಯವಾಗಿ ತಿಳಿದುಕೊಳ್ಳಲು ಮುಂದಾಗುತ್ತಾರೆ. ಸ್ವಂತ ವಾಹನದಲ್ಲಿಹೋಗ್ಬೇಕಾದ್ರೆ ನಮ್ಮನೆಯ ಪ್ರಾಣಿಗಳನ್ನು ಹೇಗೆ ಬೇಕಾದ್ರು ತೆಗೆದುಕೊಂಡು ಹೋಗ್ಬಹುದು. ಆದ್ರೆ ಸಾರ್ವಜನಿಕ ವಾಹನಗಳಲ್ಲಿ ಹೋಗ್ಬೇಕಾದ್ರೆ ಕೆಲವೊಂದು ನಿಯಮಗಳಿವೆ. ಅದನ್ನು ತಿಳಿದುಕೊಳ್ಳೋದು ಮುಖ್ಯ.

    MORE
    GALLERIES

  • 27

    Pets In Train: ನಿಮ್ಮ ಸಾಕುಪ್ರಾಣಿ ಜೊತೆ ಟ್ರೈನ್​ನಲ್ಲಿ ಹೋಗ್ಬೋದಾ? ಇದಕ್ಕೂ ಇದೆ ಕೆಲ ನಿಯಮಗಳು

    ವಿಮಾನಯಾನದ ನಿಯಮಗಳ ಪ್ರಕಾರ, ಪ್ರಯಾಣಿಕರಿಗೆ ಕ್ಯಾಬಿನ್‌ನಲ್ಲಿ ನಿರ್ದಿಷ್ಟ ಗಾತ್ರದವರೆಗೆ ಸಾಕುಪ್ರಾಣಿಗಳನ್ನು ಸುರಕ್ಷಿತವಾಗಿ ಸಾಗಿಸಲು ಅನುವು ಮಾಡಿಕೊಡುತ್ತದೆ. ಅವುಗಳನ್ನು ಆಸನಗಳ ಹತ್ತಿರ ಇಡುವ ಸೌಲಭ್ಯವೂ ಇದೆ.

    MORE
    GALLERIES

  • 37

    Pets In Train: ನಿಮ್ಮ ಸಾಕುಪ್ರಾಣಿ ಜೊತೆ ಟ್ರೈನ್​ನಲ್ಲಿ ಹೋಗ್ಬೋದಾ? ಇದಕ್ಕೂ ಇದೆ ಕೆಲ ನಿಯಮಗಳು

    ಆದರೆ ವಿಮಾನದಲ್ಲಿದ್ದಂತೆ ರೈಲಿನಲ್ಲಿ ಅಂತಹ ಅನುಮತಿ ಇಲ್ಲ. ರೈಲುಗಳಲ್ಲಿ ಸಾಕುಪ್ರಾಣಿಗಳೊಂದಿಗೆ ಪ್ರಯಾಣಿಸುವ ಬಗ್ಗೆ ಪ್ರತಿದಿನ ಹಲವಾರು ದೂರುಗಳು ಬರುತ್ತಿವೆ. ನಾಯಿಗಳೊಂದಿಗೆ ರೈಲು ಪ್ರಯಾಣವನ್ನು ತಡೆಯಲು ಭಾರತೀಯ ರೈಲ್ವೆ ಹೊಸ ನಿಯಮಗಳನ್ನು ಪರಿಚಯಿಸಿದೆ. ಅದರ ವಿವರಗಳನ್ನು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.

    MORE
    GALLERIES

  • 47

    Pets In Train: ನಿಮ್ಮ ಸಾಕುಪ್ರಾಣಿ ಜೊತೆ ಟ್ರೈನ್​ನಲ್ಲಿ ಹೋಗ್ಬೋದಾ? ಇದಕ್ಕೂ ಇದೆ ಕೆಲ ನಿಯಮಗಳು

    ಹೊಸ ನಿಯಮಗಳ ಪ್ರಕಾರ ನಾಯಿಗಳನ್ನು ರೈಲಿನಲ್ಲಿ ಪ್ರಥಮ ದರ್ಜೆ ಹೊರತುಪಡಿಸಿ ಬೇರೆ ಯಾವುದೇ ವರ್ಗದಲ್ಲಿ ಸಾಗಿಸುವಂತಿಲ್ಲ. ವಿಶೇಷವಾಗಿ ಪ್ರಯಾಣಿಕರು ಪ್ರಥಮ ದರ್ಜೆಯಲ್ಲಿ ನಾಲ್ಕು ಬರ್ತ್‌ಗಳು ಅಥವಾ ಒಂದು ಕಂಪಾರ್ಟ್‌ಮೆಂಟ್ ಅನ್ನು ಬುಕ್ ಮಾಡಿದರೆ, ಈ ಕೊಡುಗೆ ಮಾತ್ರ ಲಭ್ಯವಿರುತ್ತದೆ.ಒಂದು ನಾಯಿಗೆ ಅದರ PNR ಸಂಖ್ಯೆಯೊಂದಿಗೆ ಅದನ್ನು ಸಾಗಿಸಲು ಅನುಮತಿಸಲಾಗುತ್ತದೆ.

    MORE
    GALLERIES

  • 57

    Pets In Train: ನಿಮ್ಮ ಸಾಕುಪ್ರಾಣಿ ಜೊತೆ ಟ್ರೈನ್​ನಲ್ಲಿ ಹೋಗ್ಬೋದಾ? ಇದಕ್ಕೂ ಇದೆ ಕೆಲ ನಿಯಮಗಳು

    ಅದೇ ರೀತಿ ನಾಯಿಯನ್ನು ನೇರವಾಗಿ ರೈಲಿನಲ್ಲಿ ತುಂಬುವಂತಿಲ್ಲ.ರೈಲು ಹೊರಡುವ ಮೂರು ಗಂಟೆ ಮೊದಲು ನಾಯಿಯನ್ನು ಲಗೇಜ್ ಕಚೇರಿಗೆ ತರಬೇಕು. ಅಧಿಕಾರಿಗಳು ಪರಿಶೀಲಿಸಿ ಅನುಮತಿ ನೀಡಿದ ನಂತರವೇ ಗಾಡಿಗೆ ತುಂಬಬೇಕು. ಪ್ರಥಮ ದರ್ಜೆ ಹೊರತುಪಡಿಸಿ ಬೇರೆ ಕ್ಲಾಸ್​​ನಲ್ಲಿ ಪ್ರಯಾಣಿಸುವಾಗ ಸಿಕ್ಕಿಬಿದ್ದರೆ ದಂಡ ವಿಧಿಸಲಾಗುತ್ತದೆ. ತಪ್ಪಿದ್ರೆ ಬಂಧನವೂ ಆಗಬಹುದು.

    MORE
    GALLERIES

  • 67

    Pets In Train: ನಿಮ್ಮ ಸಾಕುಪ್ರಾಣಿ ಜೊತೆ ಟ್ರೈನ್​ನಲ್ಲಿ ಹೋಗ್ಬೋದಾ? ಇದಕ್ಕೂ ಇದೆ ಕೆಲ ನಿಯಮಗಳು

    ಸಾಮಾನು ಕಾಯ್ದಿರಿಸುವ ಕಚೇರಿಯಲ್ಲಿ ನಾಯಿಯ ತಳಿ, ಬಣ್ಣ ಮತ್ತು ಲಿಂಗವನ್ನು ನಮೂದಿಸಬೇಕು. ವೈದ್ಯರ ಪ್ರಮಾಣಪತ್ರ ಸಹ ಕಡ್ಡಾಯವಾಗಿದೆ. ಪ್ರಯಾಣಿಕರು ತಮ್ಮ ಸ್ವಂತ ಆಹಾರ ಮತ್ತು ನೀರನ್ನು ಒದಗಿಸಬೇಕು. ಸ್ಥಳೀಯ ಪ್ಯಾಸೆಂಜರ್ ರೈಲುಗಳಲ್ಲಿ ನಾಯಿಗಳೊಂದಿಗೆ ಪ್ರಯಾಣಿಸುವುದನ್ನು ರೈಲ್ವೆ ನಿಷೇಧಿಸಿದೆ

    MORE
    GALLERIES

  • 77

    Pets In Train: ನಿಮ್ಮ ಸಾಕುಪ್ರಾಣಿ ಜೊತೆ ಟ್ರೈನ್​ನಲ್ಲಿ ಹೋಗ್ಬೋದಾ? ಇದಕ್ಕೂ ಇದೆ ಕೆಲ ನಿಯಮಗಳು

    ಭಾರತೀಯ ರೈಲ್ವೇ ಕಾಯಿದೆಯ ಸೆಕ್ಷನ್ 77-ಎ ಪ್ರಕಾರ, ಪ್ರಾಣಿಗಳಿಗೆ ಮೀಸಲಾದ ಕಂಪಾರ್ಟ್‌ಮೆಂಟ್‌ಗಳಲ್ಲಿ ಸಾಕುಪ್ರಾಣಿಗಳು ರೈಲುಗಳಲ್ಲಿ ಪ್ರಯಾಣಿಸಬಹುದು. ಅದಕ್ಕೆ ನಿರ್ದಿಷ್ಟ ಮೊತ್ತವನ್ನು ಸಹ ಪಾವತಿಸಬೇಕಾಗುತ್ತದೆ. ಆದಾಗ್ಯೂ, ಪ್ರಾಣಿಗಳಿಗೆ ಹಾನಿಯ ಯಾವುದೇ ಜವಾಬ್ದಾರಿಯನ್ನು ರೈಲ್ವೆ ಅಧಿಕಾರಿಗಳು ಸ್ವೀಕರಿಸುವುದಿಲ್ಲ. ನಷ್ಟಗಳಲ್ಲಿ ಪ್ರಾಣಿಗಳ ಸಾವು, ರೋಗ, ಆಹಾರ ಅಥವಾ ನೀರಿನ ಪೂರೈಕೆಯ ನಷ್ಟ, ಮಿತಿಮೀರಿದ ಸಂಗ್ರಹಣೆ ಇತ್ಯಾದಿಗಳು ಸೇರಿವೆ. ರೈಲು ಅಪಘಾತದಲ್ಲಿ ಜಾನುವಾರುಗಳು ಸತ್ತರೂ ಪರಿಹಾರ ಸಿಗುವುದಿಲ್ಲ ಎಂದು ಹೇಳಲಾಗಿದೆ.

    MORE
    GALLERIES