Driving License: ಈ ದೇಶಗಳಲ್ಲಿ ನೀವು ಭಾರತದ ಲೈಸೆನ್ಸ್​​ಗಳನ್ನು ಬಳಸ್ಬಹುದು!

ಯಾವುದೇ ವಾಹನವನ್ನು ಓಡಿಸಬೇಕಾದ್ರೆ ಡ್ರೈವಿಂಗ್ ಲೈಸೆನ್ಸ್ ಅನ್ನೋದು ಬಹುಮುಖ್ಯ. ಆದರೆ ಈ ದೇಶಗಳಲ್ಲಿ ವಾಹನ ಚಲಾಯಿಸ್ಬೇಕಾದ್ರೆ ನೀವು ಭಾರತದ ಲೈಸೆನ್ಸ್​ ಅನ್ನೇ ಬಳಸ್ಬಹುದು.

First published:

  • 19

    Driving License: ಈ ದೇಶಗಳಲ್ಲಿ ನೀವು ಭಾರತದ ಲೈಸೆನ್ಸ್​​ಗಳನ್ನು ಬಳಸ್ಬಹುದು!

    ಇನ್ಮುಂದೆ ವಿದೇಶದಲ್ಲಿ ಪ್ರಯಾಣಿಸುವಾಗ ಸಾರ್ವಜನಿಕ ಸಾರಿಗೆಯನ್ನು ತೆಗೆದುಕೊಳ್ಳದೆ ನೀವು ಸ್ವಂತ ಗಾಡಿಯನ್ನೇ ಆರಾಮದಲ್ಲಿ ಓಡಿಸಬಹುದು. ನೀವು ಭೇಟಿ ನೀಡುವ ದೇಶದಲ್ಲಿ ಕ್ಯಾಬ್ ಅನ್ನು ಬಾಡಿಗೆಗೆ ಪಡೆಯುವುದಲ್ಲದೇ, ಭಾರತೀಯ ಲೈಸೆನ್ಸ್​ನಲ್ಲಿ ಅಲ್ಲಿ ನೀವು ಕ್ಯಾಬ್ ಓಡಿಸಬಹುದು.

    MORE
    GALLERIES

  • 29

    Driving License: ಈ ದೇಶಗಳಲ್ಲಿ ನೀವು ಭಾರತದ ಲೈಸೆನ್ಸ್​​ಗಳನ್ನು ಬಳಸ್ಬಹುದು!

    ಹೆಚ್ಚಿನ ದೇಶಗಳು ನೀವು ಬಾಡಿಗೆಗೆ ವಾಹನಗಳನ್ನು ಓಡಿಸಲು ಇಂಟರ್ನ್ಯಾಷನಲ್ ಡ್ರೈವಿಂಗ್ ಪರ್ಮಿಟ್ (IDP) ಅನ್ನು ಹೊಂದಿರಬೇಕು ಎಂದು ಹೇಳುತ್ತವೆ. ಅದರಲ್ಲೂ ಕೆಲವು ದೇಶಗಳಲ್ಲಿ ಭಾರತೀಯ ಲೈಸೆನ್ಸ್​ ಮೂಲಕವೇ ಯಾವುದೇ ವಾಹನವನ್ನು ಓಡಿಸಬಹುದು. ಹಾಗಿದ್ರೆ ಯಾವೆಲ್ಲಾ ದೇಶಗಳಲ್ಲಿ ಭಾರತೀಯ ಡ್ರೈವಿಂಗ್ ಲೈಸೆನ್ಸ್​ ಬಳಸ್ಬಹುದು ಎಂದು ಈ ಲೇಖನದಲ್ಲಿದೆ ಓದಿ.

    MORE
    GALLERIES

  • 39

    Driving License: ಈ ದೇಶಗಳಲ್ಲಿ ನೀವು ಭಾರತದ ಲೈಸೆನ್ಸ್​​ಗಳನ್ನು ಬಳಸ್ಬಹುದು!

    ಜರ್ಮನಿ: ನೀವು ಈ ದೇಶದಲ್ಲಿ ಭಾರತೀಯ ಪರವಾನಗಿಯೊಂದಿಗೆ ಯಾವುದೇ ರೀತಿಯ ಕಾರು ಅಥವಾ ದ್ವಿಚಕ್ರ ವಾಹನವನ್ನು ಓಡಿಸಬಹುದು. ಅದು ಭಾರತದಂತೆ ಎಡಭಾಗದ ಲೇನ್ ಅಲ್ಲದಿದ್ದರೂ ಬಲಬದಿಯ ಲೇನ್ ಆಗಿದ್ದರೂ ಸಹ ಅಲ್ಲಿ ಭಾರತೀಯ ಲೈಸೆನ್ಸ್ ಬಳಸ್ಬಬುದು. ನಿಮ್ಮ ಚಾಲಕರ ಪರವಾನಗಿ ಮಾಹಿತಿಯು ಸ್ಥಳೀಯ ಭಾಷೆಯಲ್ಲಿದ್ದರೆ, ನೀವು ಜರ್ಮನಿಯ ಸ್ಥಳೀಯ ಅಧಿಕಾರಿಗಳಿಗೆ ಪ್ರಮಾಣಪತ್ರವನ್ನು ನೀಡಬೇಕು ಮತ್ತು ನೀವು ಟ್ರಾವೆಲ್ ಮಾಡುವ ಮೊದಲು ಅದನ್ನು ಜರ್ಮನ್ ಭಾಷೆಗೆ ಅನುವಾದಿಸಬೇಕು. ನೀವು ಆರು ತಿಂಗಳವರೆಗೆ ಜರ್ಮನಿಯಲ್ಲಿ ಚಾಲನೆ ಮಾಡಲು ದೇಶದ ಪರವಾನಗಿಯನ್ನು ಬಳಸಬಹುದು.

    MORE
    GALLERIES

  • 49

    Driving License: ಈ ದೇಶಗಳಲ್ಲಿ ನೀವು ಭಾರತದ ಲೈಸೆನ್ಸ್​​ಗಳನ್ನು ಬಳಸ್ಬಹುದು!

    ಇಂಗ್ಲೆಂಡ್: ನೀವು ಭಾರತೀಯ ಚಾಲನಾ ಪರವಾನಗಿಯನ್ನು ಹೊಂದಿದ್ದರೆ, ನೀವು ಇಂಗ್ಲೆಂಡ್, ಸ್ಕಾಟ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಒಂದು ವರ್ಷದ ಅವಧಿಗೆ ಚಾಲನೆ ಮಾಡಬಹುದು. ಮತ್ತು ಇದು ಎಡ ಲೇನ್ ರಸ್ತೆಯಾಗಿರುವುದರಿಂದ ವಾಹನ ಚಲಾಯಿಸಲು ಯಾವುದೇ ತೊಂದರೆ ಇರುವುದಿಲ್ಲ. ಗಮನಿಸಬೇಕಾದ ಏಕೈಕ ವಿಷಯವೆಂದರೆ ನಿಮ್ಮ ಪರವಾನಗಿಯಲ್ಲಿ ನಮೂದಿಸಲಾದ ವಾಹನದ ಪ್ರಕಾರವನ್ನು ಮಾತ್ರ ನೀವು ಓಡಿಸಬಹುದು.

    MORE
    GALLERIES

  • 59

    Driving License: ಈ ದೇಶಗಳಲ್ಲಿ ನೀವು ಭಾರತದ ಲೈಸೆನ್ಸ್​​ಗಳನ್ನು ಬಳಸ್ಬಹುದು!

    ಆಸ್ಟ್ರೇಲಿಯಾ: ಆಸ್ಟ್ರೇಲಿಯಾ ಕೂಡ ಎಡ ಲೇನ್ ಬಳಕೆಯ ರಸ್ತೆಯನ್ನು ಹೊಂದಿದೆ. ಆದ್ದರಿಂದ, ನೀವು ಆ ದೇಶದಲ್ಲಿ ಮುಕ್ತವಾಗಿ ಚಾಲನೆ ಮಾಡಬಹುದು. ಆದರೆ ಭಾರತದ ಪ್ರವಾಸಿಗರಿಗೆ ದೇಶದ ಉತ್ತರ ಭಾಗಗಳಲ್ಲಿ ವಾಹನ ಚಲಾಯಿಸಲು ಅವಕಾಶವಿಲ್ಲ ಮತ್ತು, ಬ್ರಿಟನ್‌ನಲ್ಲಿರುವಂತೆ, ಇಲ್ಲಿ ನಿಮ್ಮ ಚಾಲನಾ ಪರವಾನಗಿಯಲ್ಲಿ ನಿರ್ದಿಷ್ಟಪಡಿಸಿದ ವಾಹನದ ಪ್ರಕಾರವನ್ನು ಮಾತ್ರ ನೀವು ಓಡಿಸಬಹುದು.

    MORE
    GALLERIES

  • 69

    Driving License: ಈ ದೇಶಗಳಲ್ಲಿ ನೀವು ಭಾರತದ ಲೈಸೆನ್ಸ್​​ಗಳನ್ನು ಬಳಸ್ಬಹುದು!

    ದಕ್ಷಿಣ ಆಫ್ರಿಕಾ: ನಿಮ್ಮ ಫೋಟೋ ಮತ್ತು ಸಹಿಯೊಂದಿಗೆ ಇಂಗ್ಲಿಷ್‌ನಲ್ಲಿ ಮುದ್ರಿತ ಮಾನ್ಯವಾದ ಚಾಲನಾ ಪರವಾನಗಿಯನ್ನು ಹೊಂದಿದ್ದರೆ ನೀವು ದಕ್ಷಿಣ ಆಫ್ರಿಕಾದಲ್ಲಿ ಎಲ್ಲಿ ಬೇಕಾದರೂ ಚಾಲನೆ ಮಾಡಬಹುದು. ಆದರೆ ಕಾರು ಬಾಡಿಗೆ ಕಂಪನಿಗಳು ಚಾಲಕರ ಲೈಸೆನ್ಸ್​ ಪರಿಶೀಲನೆಗಾಗಿ ಕೇಳಬಹುದು ಎಂಬುದನ್ನು ನೆನಪಿನಲ್ಲಿಡಿ. ಆದ್ದರಿಂದ ನೀವು ಅಲ್ಲಿಗೂ ಲೈಸೆನ್ಸ್​ ಕೊಂಡೊಯ್ಯುವುದು ಉತ್ತಮ.

    MORE
    GALLERIES

  • 79

    Driving License: ಈ ದೇಶಗಳಲ್ಲಿ ನೀವು ಭಾರತದ ಲೈಸೆನ್ಸ್​​ಗಳನ್ನು ಬಳಸ್ಬಹುದು!

    ನ್ಯೂಜಿಲೆಂಡ್: ನ್ಯೂಜಿಲೆಂಡ್‌ನಲ್ಲಿ, ಭಾರತೀಯ ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರು ಒಂದು ವರ್ಷದ ಅವಧಿಗೆ ಯಾವುದೇ ನಿರ್ಬಂಧಗಳಿಲ್ಲದೆ ವಾಹನಗಳನ್ನು ಡ್ರೈವಿಂಗ್​ ಮಾಡಬಹುದು. ನಿಮ್ಮ ಡ್ರೈವಿಂಗ್ ಲೈಸೆನ್ಸ್ ಇಂಗ್ಲಿಷ್ ಹೊರತುಪಡಿಸಿ ಬೇರೆ ಭಾಷೆಯಲ್ಲಿದ್ದರೆ, ನೀವು ಅದನ್ನು ನ್ಯೂಜಿಲ್ಯಾಂಡ್ ಟ್ರಾನ್ಸ್‌ಪೋರ್ಟ್ ಏಜೆನ್ಸಿಯಿಂದ ಭಾಷಾಂತರಿಸಬೇಕು ಮತ್ತು ಸೀಲ್ ಸಹ ಹಾಕಿಕೊಳ್ಳಬೇಕು..

    MORE
    GALLERIES

  • 89

    Driving License: ಈ ದೇಶಗಳಲ್ಲಿ ನೀವು ಭಾರತದ ಲೈಸೆನ್ಸ್​​ಗಳನ್ನು ಬಳಸ್ಬಹುದು!

    ಸ್ವೀಡನ್: ನೀವು ಒಂದು ವೇಳೆ ಸ್ವೀಡನ್‌ನಲ್ಲಿ ಸ್ವಂತ ಕಾರನ್ನು ಓಡಿಸಲು ಬಯಸಿದರೆ, ನಿಮ್ಮ ಲೈಸೆನ್ಸ್​ ಅನ್ನು ಇಂಗ್ಲಿಷ್, ಫ್ರೆಂಚ್, ಜರ್ಮನ್, ಸ್ವೀಡಿಷ್, ಡ್ಯಾನಿಶ್, ನಾರ್ವೇಜಿಯನ್ ಭಾಷೆಗಳಲ್ಲಿ ಮುದ್ರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಅದರೊಂದಿಗೆ ಭಾವಚಿತ್ರ ಮತ್ತು ಇನ್ನೊಂದು ಅಧಿಕೃತ ಗುರುತಿನ ಚೀಟಿಯನ್ನು ಒಳಗೊಂಡಿರಬೇಕು. ಹೀಗಿದ್ರೆ ಆರಾಮದಲ್ಲಿ ನೀವು ವಾಹನಗಳನ್ನು ಚಾಲನೆ ಮಾಡ್ಬಹುದು.

    MORE
    GALLERIES

  • 99

    Driving License: ಈ ದೇಶಗಳಲ್ಲಿ ನೀವು ಭಾರತದ ಲೈಸೆನ್ಸ್​​ಗಳನ್ನು ಬಳಸ್ಬಹುದು!

    USA: ನಿಮ್ಮ ಭಾರತೀಯ ಪರವಾನಗಿಯನ್ನು ಬಳಸಿಕೊಂಡು ನೀವು USA ನಲ್ಲಿ ನಿಜವಾಗಿಯೂ ಚಾಲನೆ ಮಾಡಬಹುದು. ಆದರೆ ನಿಯಮಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರಬಹುದು ಎಂಬುದನ್ನು ನೆನಪಿನಲ್ಲಿಡಿ. ಆದ್ದರಿಂದ, ನೀವು ರಸ್ತೆಗೆ ಬರುವ ಮೊದಲು, ರಾಜ್ಯದ ಮೋಟಾರು ವಾಹನಗಳ ಇಲಾಖೆಯೊಂದಿಗೆ ನಿಯಮಗಳನ್ನು ಪರಿಶೀಲಿಸಿ. ಕೆಲವು ರಾಜ್ಯಗಳು ನೀವು ಅಂತರರಾಷ್ಟ್ರೀಯ ಚಾಲನಾ ಪರವಾನಗಿಯನ್ನು ಹೊಂದಬೇಕೆಂದು ಒತ್ತಾಯಿಸುತ್ತವೆ. ಆದ್ದರಿಂದ ಇದನ್ನು ಗಮನದಲ್ಲಿಟ್ಟುಕೊಳ್ಳಿ.

    MORE
    GALLERIES