ಪಾಪಸ್ ಕಳ್ಳಿ ಸಸ್ಯಗಳು ಸಾಮಾನ್ಯವಾಗಿ ಉಷ್ಣ ದೇಶಗಳಲ್ಲಿ ಬೆಳೆಯುತ್ತದೆ. ಉದಾಹರಣೆಗೆ ಅಮೆರಿಕದ ಅರಿಜೋನಾದ ಗ್ರಾಂಡ್ ಕ್ಯಾನ್ಯನ್, ಅಲ್ಲಿ ನೀರಿಲ್ಲ. ಈ ಸಸ್ಯಗಳು ಪ್ರಸ್ತುತ ಸ್ವಿಟ್ಜರ್ಲೆಂಡ್‌ನ ಆಲ್ಪ್ಸ್‌ನಲ್ಲಿ ವೇಗವಾಗಿ ಹರಡುತ್ತಿವೆ. ಇದರಿಂದ ವಿಜ್ಞಾನಿಗಳು ಆತಂಕಗೊಂಡಿದ್ದಾರೆ. ಯಾಕೆಂದರೆ ಇದೊಂದು ತಂಪು ಪ್ರದೇಶ. ಆದರೂ ಕೂಡ ಪಾಪಸ್ ಕಳ್ಳಿ ಅಷ್ಟೊಂದು ಬೆಳೆಯುತ್ತಾ ಇದ್ಯಲಾ ಅಂತ.
ಬಿಸಿ ವಾತಾವರಣವನ್ನು ಇಷ್ಟಪಡುವ ಈ ಕ್ಯಾಕ್ಟಸ್ ಸಸ್ಯಗಳು ಸಂಪೂರ್ಣವಾಗಿ ವಿಭಿನ್ನವಾದ ಶೀತ ವಾತಾವರಣಕ್ಕೆ ವೇಗವಾಗಿ ಹರಡುವುದು ಒಳ್ಳೆಯ ಲಕ್ಷಣವಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ. ವಾಸ್ತವವಾಗಿ, ಈ ಸಸ್ಯಗಳು 18 ನೇ ಶತಮಾನದಿಂದಲೂ ಇಳಿಜಾರು ಪ್ರದೇಶದಲ್ಲಿ ಬೆಳೆಯುತ್ತಿತ್ತು. ಆದರೆ ಈಗ ಅವು ವೇಗವಾಗಿ ವಿಸ್ತರಿಸುತ್ತಿವೆ. ಸ್ವಿಟ್ಜರ್ಲೆಂಡ್ ಜೊತೆಗೆ ಇಟಲಿಯಲ್ಲಿಯೂ ಹರಡುತ್ತಿದೆ.