ಕೊರೋನಾ ಅವಾಂತರದಿಂದಾಗಿ ಅನೇಕ ಉದ್ಯಮಗಳು ನೆಲಕಚ್ಚಿ ಹೋಗಿವೆ. ಮತ್ತೊಂದೆಡೆ ನೌಕಕರು ಕೆಲಸವಿಲ್ಲದೆ ಒದ್ಡಾಡುವ ಪರಿಸ್ಥಿತಿ ಬಂದೊಗಿದೆ. ಹೀಗಿರುವ ಅನೇಕರು ಮನೆಯಲ್ಲಿಯೇ ಕುಳಿತು ಉದ್ಯೋಗ ಆರಂಭಿಸುತ್ತಿದ್ದಾರೆ. ತಿಂಗಳ ಖರ್ಚಿಗೆ ಆಗುವಂತೆ ದುಡಿಯಲು ಮುಂದಾಗುತ್ತಿದ್ದಾರೆ. ಅದರಂತೆ ಇಲ್ಲೊಬ್ಬಳು ತಾಯಿ ಲಾಕ್ಡೌನ್ನಿಂದ ಬೇಸರಗೊಂಡು ಏನು ಮಾಡಿದಳು ಗೊತ್ತಾ?
2/ 9
ಲಾಕ್ಡೌನ್ನಿಂದ ಬೇಸರಗೊಂಡ ತಾಯಿಯೊಬ್ಬಳು ಮನೆಯಲ್ಲಿಯೇ ಕುಳಿತು ಉದ್ಯೋಗ ಆರಂಭಿಸುತ್ತಾಳೆ. ತನ್ನ ಎದೆ ಹಾಲಿನಿಂದ ಆಭರಣಗಳಿನ್ನು ತಯಾರಿಸಲು ಮುಂದಾಗುತ್ತಾಳೆ. ಅದರಿಂದ ತಿಂಗಳ ಆದಾಯ ಗಳಿಸುತ್ತಾ ಬಂದಿದ್ದಾಳೆ.
3/ 9
30 ವರ್ಷದ ಹಾಥಾರ್ನ್ ನಾಲ್ಕು ಮಕ್ಕಳನ್ನು ಹೊಂದಿದ್ದಾಳೆ. ಕಳೆದ ವರ್ಷ ಲಾಕ್ಡೌನ್ ಸಮಯದಲ್ಲಿ ತನ್ನ ತವರು ಮನೆಯಲ್ಲಿಯೇ ಬಾಕಿ ಆದ ಹಾಥಾರ್ನ್ ಎದೆಹಾಲು ಬಳಸಿ ದುಡಿಯಲು ಮುಂದಾಗುತ್ತಾಳೆ.
4/ 9
ಹಾಥಾರ್ನ್ ತನ್ನ ಎದೆಹಾಲಿನಿಂದ ನೆಕ್ಲೇಸ್, ಉಂಗುರ, ಕಿವಿಯೋಲೆ ಮತ್ತು ಪೆಂಡೆಂಟ್ ವಿನ್ಯಾಸವನ್ನು ಮಾಡುತ್ತಿದ್ದಾಳೆ.
5/ 9
ಹಾಥಾರ್ನ್ ಈ ಬಗ್ಗೆ ಮಾತನಾಡಿದ್ದು, ಕಾರಂಟೈನ್ ಸಮಯದಲ್ಲಿ ಹುಚ್ಚನಾಗಿದ್ದೆ, ಈ ಸಮಯದಲ್ಲಿ ಮನೆಯಲ್ಲಿದ್ದುಕೊಂಡು ಏನಾದರು ಮಾಡಬೇಕು ಎಂದು ಬಯಸಿದೆ. ಬೆಳೆಗ್ಗೆಯಿಂದ ರಾತ್ರಿ ತನಕ ಮಕ್ಕಳ ನೋಡಿಕೊಳ್ಳುವುದೇ ಸಮಯಹಿಡಯುತ್ತಿತ್ತು. ಒಂದು ದಿನ ನನ್ನ ಪತಿ ಬಳಿ ನಾನು ಏನಾದರು ಮಾಡಬೇಕು ಎಂದು ಹೇಳಿಕೊಂಡೆ
6/ 9
ಹೊಸ ವರ್ಷದ ಸಮಯದಲ್ಲಿ ನನ್ನ ಎದೆ ಹಾಲು ಬಳಸಿ ಆಭರಣಗಳಿಗೆ ವಿನ್ಯಾಸ ಮಾಡಲು ಬಯಸಿದೆ. ಆದರೆ ಅದಕ್ಕೂ ಮುನ್ನ ಸಾಕಷ್ಟು ಸಂಶೋಧನೆ ಮಾಡಿದ್ದೇನೆ. ಸದ್ಯ ಎದೆ ಹಾಲಿನಿಂದ ನೆಕ್ಲೇಸ್, ಪೆಂಡೆಂಟ್ ವಿನ್ಯಾಸ ಮಾಡುತ್ತಿದ್ದೇನೆ. ಮಾತ್ರವಲ್ಲ, ಬೇರೆ ತಾಯಂದಿರಿಂದಲೂ ಹಾಲು ಖರೀದಿಸುತ್ತಿದ್ದೇನೆ.
7/ 9
ನೆಕ್ ಪೀಸ್ಗಾಗಿ ಹಾಥಾರ್ನ್ 10 ಮಿಲಿಲೀಟರ್ ಹಾಲಿನ ಮೂರನೇ ಒಂದು ಭಾಗವನ್ನು ಬಳಸುತ್ತಾರಂತೆ. ಎದೆ ಹಾಲನ್ನು ಕುದಿಸಿ ನಂತರ ಕೆಲವು ಪುಡಿಗಳನ್ನು ಸೇರಿಸಿ ಒಣಗಳು ಬಿಡುತ್ತಾಳೆ. ಒಣಗಿದ ನಂತ ಚಪ್ಪಟೆ ಕಾರದಲ್ಲಿ ಸಿಗುತ್ತದೆ. ಅಷ್ಟು ಮಾತ್ರವಲ್ಲ, ಕೂದಲು, ಮಗುವಿನ ಹಲ್ಲು ಬಳಸಿ ವಿನ್ಯಾಸ ಮಾಡಿದ್ದಾಳೆ.
8/ 9
ಎದೆ ಹಾಲಿನಿಂದ ಆಭರಣಗಳನ್ನು ತಯಾರಿಸುವ ತಾಯಂದಿರಲ್ಲಿ ಈಕೆ ಮೊದಲಲ್ಲ. ಇದಕ್ಕೂ ಮೊದಲು ಅಂದರೆ 2016ರಲ್ಲಿ ನ್ಯೂಜೆರ್ಸಿಯ ತಾಯಿಯೊಬ್ಬಳು ಎದೆ ಹಾಲಿನಿಂದ ಪೆಂಡೆಂಟ್ ವಿನ್ಯಾಸ ಮಾಡಲು ಮುಂದಾದಳು.
9/ 9
ಸದ್ಯ ಅನೇಕ ಮಹಿಳೆಯರು ಹೊಸ ಉದ್ಯಮದತ್ತ ತಿರುಗಿದ್ದಾರೆ. ಮನೆಯಲ್ಲಿಯೇ ಕುಳಿತು ದುಡಿಯುತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ ಗಂಡಂದಿರೊಂದಿಗೆ ಸಮವಾಗಿ ದುಡಿಯುತ್ತಿದ್ದಾರೆ.