ಮೊನ್ನೆಯಷ್ಟೇ ವರನ ಕಡೆಯವರಿಗೆ ಚಿಕನ್ ಊಟ ಬಡಿಸಿಲ್ಲ ಅಂತ ಮದುವೆಯೊಂದು ಕ್ಯಾನ್ಸಲ್ ಆಗಿದ್ದು ಸಾಕಷ್ಟು ಸುದ್ದಿಯಾಗಿತ್ತು. ಇದೀಗ ಮತ್ತೊಂದು ಮದುವೆ ಕಿಸ್ ವಿಚಾರಕ್ಕೆ ಕ್ಯಾನ್ಸಲ್ ಆಗಿದೆ. (ಸಾಂದರ್ಭಿಕ ಚಿತ್ರ)
2/ 8
ಹೌದು, ಮದುವೆಯಲ್ಲಿ ನೆರೆದಿದ್ದ 300 ಅತಿಥಿಗಳ ಮುಂದೆ ವರ ವೇದಿಕೆಯಲ್ಲಿ ತನ್ನ ಸಂಗಾತಿಗೆ ಕಿಸ್ ಮಾಡಿದ್ದಕ್ಕೆ ವಧು ಮದುವೆಯನ್ನೇ ನಿಲ್ಲಿಸಿದ್ದಾಳೆ. ಇದೇನಪ್ಪಾ ಇಷ್ಟು ಸಣ್ಣ ವಿಚಾರಕ್ಕೆ ಮದುವೆ ಕ್ಯಾನ್ಸಲ್ ಮಾಡಿದ್ರಾ ಅಂತ ಶಾಕ್ ಆಗಬೇಡಿ. (ಸಾಂದರ್ಭಿಕ ಚಿತ್ರ)
3/ 8
ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವರನು ವೇದಿಕೆಯಲ್ಲೇ ತನ್ನ ಸಂಗಾತಿಗೆ ಚುಂಬಿಸಿದ ಎಂಬ ಕಾರಣಕ್ಕೆ ವಧುವು ತನ್ನ ಮದುವೆಯನ್ನೇ ರದ್ದುಗೊಳಿಸಿದ್ದಾಳೆ ಎಂದು ತಿಳಿದು ಬಂದಿದೆ. (ಸಾಂದರ್ಭಿಕ ಚಿತ್ರ)
4/ 8
ಸಾಮಾನ್ಯವಾಗಿ ದಂಪತಿಗಳು ಹಾರವನ್ನು ಬದಲಾಯಿಸಿಕೊಂಡ ನಂತರದಲ್ಲಿ ಅನಿರೀಕ್ಷಿತ ಹಾಗೂ ಆಶ್ಚರ್ಯಕರ ರೀತಿಯಲ್ಲಿ ವರನು ತನ್ನ ವಧುವಿಗೆ ಕಿಸ್ ಕೊಟ್ಟನು. (ಸಾಂದರ್ಭಿಕ ಚಿತ್ರ)
5/ 8
ಇದರಿಂದ ಕುಪಿತಗೊಂಡ ವಧು ತಕ್ಷಣವೇ ವೇದಿಕೆಯಿಂದ ಹೊರನಡೆದರು, ನಂತರ ಪೊಲೀಸರಿಗೆ ಕರೆ ಮಾಡಿದರು. ಸ್ವತಃ ಪೊಲೀಸರೇ ರಾಜಿಗೆ ಮುಂದಾದರೂ ವಧು ಕೋಪಗೊಂಡು ಮದುವೆ ನಿರಾಕರಿಸಿದ್ದಾರೆ. (ಸಾಂದರ್ಭಿಕ ಚಿತ್ರ)
6/ 8
23 ವರ್ಷದ ವಧು ಪದವೀಧರೆ ಆಗಿದ್ದಾರೆ. ವರನು ತನ್ನ ಸ್ನೇಹಿತರೊಂದಿಗೆ ಬೆಟ್ ಗೆಲ್ಲಲು ತನಗೆ ಕಿಸ್ ಕೊಟ್ಟಿದ್ದಾನೆ ಎಂಬುದನ್ನು ವಧುಗೆ ತಿಳಿದುಬಂದಿದೆ. ವರನ ನಡುವಳಿಕೆ ಬಗ್ಗೆ ವಧುವಿಗೆ ಅನುಮಾನ ಶುರುವಾಗಿದೆ. ಹೀಗಾಗಿ ಮದುವೆನ ಬೇಡ ಎಂದಿದ್ದೇನೆ ಎಂದಿದ್ದಾರೆ ವಧು. (ಸಾಂದರ್ಭಿಕ ಚಿತ್ರ)
7/ 8
ಪೊಲೀಸರು ಮಧ್ಯಸ್ಥಿಕೆ ವಹಿಸಿ ರಾಜಿ ಸಂಧಾನ ಮಾಡುವುದಕ್ಕೆ ಮುಂದಾದರೂ ಸಹಿತ ವಧು ಮದುವೆಗೆ ನಿರಾಕರಿಸಿದ್ದಾಳೆ ಎಂದು ತಿಳಿದು ಬಂದಿದೆ. (ಸಾಂದರ್ಭಿಕ ಚಿತ್ರ)
8/ 8
ಈ ದಂಪತಿಗಳು ಸಾಂಪ್ರದಾಯಕವಾಗಿ ಮದುವೆ ಆಗಿದ್ದು ಆಗಿದೆ. ಈ ಘಟನೆ ಸಂಭವಿಸುವ ವೇಳೆಗೆ ಆಚರಣೆಗಳು ನಡೆಯುತ್ತಿದ್ದವು, ಆದರೆ ಇದೇ ಸಂದರ್ಭದಲ್ಲಿ 26 ವರ್ಷದ ವರ ವಿವೇಕ್ ಅಗ್ನಿಹೋತ್ರಿ ತೋರಿದ ವರ್ತನೆಯು ಇಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಗಿ ಬಿಟ್ಟಿದೆ. (ಸಾಂದರ್ಭಿಕ ಚಿತ್ರ)