ದೀಪಿಕಾ ಹಾಗೂ ರಣ್ವೀರ್ ಸಿಂಗ್ ಬಹುಕಾಲದಿಂದ ಒಟ್ಟಾಗಿದ್ದಾರೆ. ಕೆಲವೊಮ್ಮೆ ಇಬ್ಬರೂ ತಮ್ಮಿಬ್ಬರ ನಡುವಿನ ಸಂಬಂಧವನ್ಗನು ಒಪ್ಪಿಕೊಂಡರೆ ಮತ್ತೆ ಕೆಲವು ಬಾರಿ ಇದು ಸುಳ್ಳು ಎನ್ನುತ್ತಾರೆ. ಇನ್ನು ಮಾಧ್ಯಮಗಳಲ್ಲೂ ಇಬ್ಬರ ಲವ್ ಅಫೇರ್ ಒಮ್ಮೆ ಸದ್ದು ಮಾಡಿದರೆ, ಕೆಲವೇ ದಿನಗಳಲ್ಲಿ ಬ್ರೇಕ್ಅಪ್ ಆಗಿರುವ ವಿಚಾರ ಸದ್ದು ಮಾಡುತ್ತದೆ. ಜನವರಿ 5 ಇಂದು ದೀಪಿಕಾರವರ ಹುಟ್ಟು ಹಬ್ಬ, ಈ ಹಿನ್ನೆಲೆಯಲ್ಲಿ ಇಬ್ಬರೂ ಇಂದು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಮುಂದಿನ ಸ್ಲೈಡ್ಗಳಲ್ಲಿ ಈ ಪ್ರೇಮ್ ಕಹಾನಿ ಹಾಗೂ ನಿಶ್ಚಿತಾರ್ಥದ ಸಂಪೂರ್ಣ ವಿವರ
ಹೊಸ ವರ್ಷವನ್ನು ದೀಪಿಕಾ ಹಾಗೂ ರನ್ವೀರ್ ಸಿಂಗ್ ಇಬ್ಬರೂ ಶ್ರೀಲಂಕಾದಲ್ಲಿ ಆಚರಿಸಿದ್ದಾರೆ. ಇದಾದ ಬಳಿಕ ಇಂದು ತನ್ನ ಹುಟ್ಟು ಹಬ್ಬವನ್ನೂ ದೀಪಿಕಾ ರಣ್ವೀರ್ರೊಂದಿಗೆ ಆಚರಿಸುತ್ತಾರೆ ಎಂದು ತಿಳಿದು ಬಂದಿದೆ. ಆದರೆ ಇಷ್ಟಾಗಿದ್ದರೆ ವಿಶೇಷವಅಗುತ್ತಿರಲಿಲ್ಲ ಆದರೆ ಇಬ್ಬರೂ ವಿರಾಟ್ ಹಾಗೂ ಅನುಷ್ಕಾರಂತೆ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆಂದು ಹೇಳಲಾಗುತ್ತಿದೆ.