ಖ್ಯಾತ ಸ್ಟಂಟ್ ಮಾಸ್ಟರ್ ಬಾಬಿ ಲೀಚ್ ಕೆನಡಾದ ನಯಾಗರ ಜಲಪಾತದಿಂದ ಬಿದ್ದು ಬದುಕುಳಿದಿದ್ದರು. ಇದು ಅದೃಷ್ಟವೋ ಅಥವಾ ಪುಣ್ಯವೋ ಗೊತ್ತಿಲ್ಲ. ಸಾಮಾನ್ಯವಾಗಿ ಜಲಪಾತದಿಂದ ಬಿದ್ದವರು ಬದುಕುಳಿದ ಸಂಗತಿ ತೀರಾ ಕಡಿಮೆ. ಆದರೆ ಬಾಲಿ ಲೀಚ್ ಅತಿ ಎತ್ತರದ ಜಲಪಾತವಾದ ನಯಾಗರ ದಿಂದ ಧುಮುಕಿದ್ದರು.
2/ 11
ಮತ್ತೊಂದು ವಿಚಾರವೆಂದರೆ ನಯಾಗರ ಜಲಪಾತಕ್ಕೆ ಬಿದ್ದು ಬದುಕುಳಿದ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆ ಇವರ ಮೇಲಿದೆ. ಆದರೆ ಬಾಬಿ ಲೀಚ್ ಸತ್ತಿದ್ದು ಹೇಗೆ ಗೊತ್ತಾ?.
3/ 11
ಮೊದಲೇ ಹೇಳಿದ ಹಾಗೆ ಬಾಬಿ ಲೀಚ್ ಸ್ಟಂಟ್ ಮಾಸ್ಟರ್. ಎಲ್ಲವನ್ನು ಸಾಹಸ ಮಾಡಿ ತೀರಿಸುವ ಧೈರ್ಯ ಅವರಿಗಿತ್ತು. ಏನೇ ಆದರು ಏನೇ ಹೋದರು ಎದೆಗುಂದದೆ ಹೋರಾಡಿ ಸಾಹಸ ಮಾಡುವ ಕಲೆ ಮೈಗೂಡಿಸಿಕೊಂಡಿದ್ದರು.
4/ 11
ಆದರೆ ತನ್ನ 53ನೇ ವಯಸ್ಸಿನಲ್ಲಿ ಇಂತಹ ಸಾಹಸ ಮಾಡಲು ಅವರಿಗಿದ್ದ ಧೈರ್ಯವೇ ಸರಿ. ಅದರಂತೆ ಜುಲೈ 25, 1911ರಂದು ದೊಡ್ಡ ಗಾತ್ರದ ಬ್ಯಾರಲ್ (ರ್ಯಾಪ್ಟಿಂಗ್ನಂತಿರುವ) ಬಳಸಿ ಅದರ ಮೇಲೆ ಕುಳಿತುಕೊಂಡು ನಯಾಗರ ಜಲಪಾತದಿಂದ ಹಾರಿದ್ದರು ಬಾಬಿ ಲೀಚ್.
5/ 11
ಆದರೆ ಹಾರಿ ಸಾಧನೆ ಮಾಡಿರೊದೆನೋ ನಿಜ. ಈ ಸಾಧನೆಗಾಗಿ ಆರು ತಿಂಗಳ ಕಾಲ ಆಸ್ಪತ್ರೆ ಸೇರಬೇಕಾದ ಪರಿಸ್ಥಿತಿ ಅವರಿಗೆ ಬಂದಿತ್ತು.
6/ 11
ಏಕೆಂದರೆ ಜಲಪಾತದಿಂದ ಹಾರಿದ ರಭಸಕ್ಕೆ ಅವರ ಕಾಲು ಮತ್ತು ದವಡೆಗೆ ಗಾಯವಾಗಿತ್ತು. ಆಸ್ಪತ್ರೆಯ ಚಿಕಿತ್ಸೆ ಪಡೆದುಕೊಂಡು ನಂತರ ಬಾಬಿ ಲೀಚ್ ಗುಣಮುಖರಾಗುತ್ತಾರೆ.
7/ 11
ಅಂದಹಾಗೆಯೇ, ಬಾಬಿ ಲೀಚ್ಗೂ ಮುನ್ನ ಅನಿ ಟೇಲರ್ ಎಂಬವರು ನಯಾಗರ ಫಾಲ್ನಿಂದ ಅಕ್ಟೋಬರ್ 24, 1901ರಂದು ಹಾರಿ ಸಾಹಸ ಮೆರೆದಿದ್ದರು. ಅದರ ನಂತರ ಬಾಲಿ ಲೀಚ್ ಎರಡನೇ ಪ್ರಯತ್ನ ಮಾಡಿದವರು.
8/ 11
ವಿಚಿತ್ರ ಎಂದರೆ ಬಾಲಿ ಲೀಚ್ ಸಾವನ್ನಪ್ಪಿದ್ದ ಹೇಗೆ ಗೊತ್ತಾ?. ಜಲಪಾತದಿಂದ ಹಾರಿ ಬದುಕುಳಿದ ಈ ವ್ಯಕ್ತಿ ಕಿತ್ತಾಳೆ ಹಣ್ಣಿನ ಸಿಪ್ಟೆಗೆ ಮೆಟ್ಟಿ ಜಾರಿ ಬಿದ್ದು ಸಾವನ್ನಪ್ಪಿದ್ದರು.
9/ 11
ಹೌದು. ಆಗ ಬಾಬಿ ಲೀಚ್ಗೆ 68 ವರ್ಷ ವಯಸ್ಸಾಗಿತ್ತು. ಆ ಸಮಯದಲ್ಲಿ ಕಿತ್ತಳೆ ಸಿಪ್ಟೆಗೆ ಮೆಟ್ಟಿ ಜಾರಿ ಬಿದ್ದರು. ಪರಿಣಾಮ ಕಾಲಿಗೆ ಮತ್ತೆ ಏಟಾಯಿತು.
10/ 11
ಆಸ್ಪತ್ರೆಗೆ ಸೇರಿದ ಬಾಬಿಗೆ ಗ್ಯಾಂಗ್ರೀನ್ ಕಾಣಿಸಿಕೊಂಡಿತು. ಅದಾದ ಎರಡು ತಿಂಗಳ ಬಳಿ ಸಾವನ್ನಪ್ಪುತ್ತಾರೆ.