ತೀರ್ಥಹಳ್ಳಿ ಅಂತ ಹೇಳಿದ ಕೂಡಲೇ ಮೊದಲಿಗೆ ನೆನಪಾಗೋದು ಕುಪ್ಪಳ್ಳಿ. ರಾಷ್ಟ್ರಕವಿ ಕುವೆಂಪು ಜನಿಸಿದ ಊರು ಈ ಕುಪ್ಪಳ್ಳಿ. ಇಲ್ಲಿ ಇವರ ಅದ್ಭುತ ಮನೆಯೇ ಒಂದು ಪ್ರವಾಸಿ ಸ್ಥಳ. ಮನೆಯ ಹತ್ತಿರವೇ ಒಂದು ಕಲ್ಲಿನ ಬೆಟ್ಟವಿದೆ. ಅದನ್ನು ಕವಿಶೈಲಿ ಎಂದು ಕರೆಯಲಾಗುತ್ತೆ. ಮನಮೋಹಕ ದೃಶ್ಯಗಳನ್ನು ನೀವು ಕಾಣಬಹುದು. ತೀರ್ಥಹಳ್ಳಿ ಪಟ್ಟಣದಿಂದ ಕೇವಲ 16 ಕಿ.ಮೀ ದೂರ ಸಾಗಿದ್ರೆ ಸಿಗುತ್ತೆ ಕುಪ್ಪಳ್ಳಿ.