ಕಾಂಚೀಪುರಂ ಸಿಲ್ಕ್ ಸೀರೆ- ಸುಂದರವಾದ ವಿನ್ಯಾಸಗಳು ಮತ್ತು ಆಕರ್ಷಕ ಬಣ್ಣಗಳೊಂದಿಗೆ ಕಾಂಚೀಪುರಂ ಸಿಲ್ಕ್ ಸೀರೆ ಮಹಿಳೆಯರನ್ನು ಆಕರ್ಷಿಸುತ್ತವೆ. ಹಳದಿ ಬಣ್ಣದ ಈ ಸೀರೆ ಪಿಂಕ್ ಬಾರ್ಡರ್ ಹೊಂದಿದೆ. ಹಬ್ಬಕ್ಕೆ ಇದನ್ನು ಧರಿಸಿದ್ರೆ ಕಳೆ ಬರುತ್ತೆ. ಆರಂಭದಲ್ಲಿ, ಕಾಂಚೀಪುರಂ ಸೀರೆಗಳನ್ನು ಚಿನ್ನದ ಝರಿಯೊಂದಿಗೆ ಗಾಢ ಬಣ್ಣಗಳಲ್ಲಿ ಮಾತ್ರ ನೇಯಲಾಗುತ್ತಿತ್ತು. ಕಾಲಾನಂತರದಲ್ಲಿ, ವೈವಿಧ್ಯಮಯ ಸಿಲ್ವರ್ ಝರಿ ಸೀರೆಗಳು, ಥ್ರೆಡ್ವರ್ಕ್ ಸೀರೆಗಳು ಮತ್ತು ಇತರ ಮಾರ್ಪಾಡುಗಳು ಹೊರಹೊಮ್ಮಿವೆ.