ಶಿಮ್ಲಾ: ಇಲ್ಲಿ ದೇವಸ್ಥಾನ, ಗ್ರೀನ್ ವ್ಯಾಲಿ, ಕುಫ್ರಿ, ಕ್ರೈಸ್ಟ್ ಚರ್ಚ್, ತಾರಾ ದೇವಿ ದೇವಸ್ಥಾನ ಸೇರಿದಂತೆ ಇನ್ನು ಅನೇಕ ಪ್ರೇಕ್ಷಣೀಯ ಸ್ಥಳಗಳು ಇಲ್ಲಿವೆ. ಶಿಮ್ಲಾ ವರ್ಷದ ಯಾವುದೇ ಸಮಯದಲ್ಲಿಯಾದರು ಭೇಟಿ ನೀಡಬಹುದು. ಆದರೆ ಬೇಸಿಗೆ ಕಾಲದಲ್ಲಿ ಜನರು ಹೆಚ್ಚಾಗಿ ಇಲ್ಲಿಗೆ ಬರ್ತಾರೆ. ಯಾಕಂದ್ರೆ ಇದು ಹಿಮಾಚಲ ಪ್ರದೇಶದ ರಾಜಧಾನಿಯಾಗಿದ್ದು, ಭಾರತದ ಜನಪ್ರಿಯ ಗಿರಿಧಾಮವಾಗಿದೆ. ಇದು ಸುಮಾರು 2200 ಮೀಟರ್ ಎತ್ತರದಲ್ಲಿದ್ದು, ಬ್ರಿಟಿಷ್ ಕಾಲದಲ್ಲಿ ಅವರ ಬೇಸಿಗೆ ರಾಜಧಾನಿಯಾಗಿತ್ತು. ಇಲ್ಲಿದ ಶಾಪಿಂಗ್ ಸ್ಟ್ರೀಟ್ಗಳು ಸಖತ್ ಚೀಪ್ ಆ್ಯಂಡ್ ಬೆಸ್ಟ್.
ಮುನ್ನಾರ್: ಕೇರಳ ರಾಜ್ಯದಲ್ಲಿ ಇರುವ ಈ ಸ್ಥಳವು ಸಖತ್ ಕೂಲ್. ಇಲ್ಲಿನ ವಾತಾವರಣಕ್ಕೆ ಮಾರು ಹೋದವರೇ ಹೆಚ್ಚು. ಸಖತ್ ಕೂಲ್, ಹಸಿರು, ಫ್ರೆಶ್ ಏರ್ ನೀವು ಅನುಭವಿಸಬಹುದು. ಚಹಾದ ತೋಟಗಳಿಗೆ, ಎಕೋ ಪಾಯಿಂಟ್, ಟ್ರೀ ಹೌಸ್‌ಗಳಿಗೆ, ಜೀಪ್ ಸಫಾರಿ, ಜಲಪಾತಗಳಿಗೆ ತುಂಬಾನೇ ಫೇಮಸ್. ಮುನ್ನಾರ್ ಇಡುಕ್ಕಿ ಜಿಲ್ಲೆಯಲ್ಲಿರುವ ಕೇರಳದ ಗಿರಿಧಾಮವಾಗಿದ್ದು, ಮಧಚಂದ್ರಕ್ಕೆ ಬೆಸ್ಟ್ ಹನಿಮೂನ್ ಸ್ಪಾಟ್ ಆಗಿದೆ. ಇದು 1600 ಮೀಟರ್‌ಗಳಷ್ಟು ಎತ್ತರದಲ್ಲಿದೆ.