ಸಾಮಾನ್ಯವಾಗಿ ಹರಿದ ಬಟ್ಟೆ, ಶೂಗಳಿದ್ದರೆ ಅದನ್ನು ಎಸೆದು ಬಿಡುತ್ತೇವೆ. ಆದರೀಗ ಹರಿದ ಶೂ, ಬಟ್ಟೆಯೆಂದರೆ ಫ್ಯಾಷನ್ ಆಗಿದೆ. ಬಹುತೇಕರು ಇಂತಹ ಫ್ಯಾಷನ್ ಅನ್ನು ಇಷ್ಟಪಟ್ಟಿದ್ದಾರೆ. ಇನ್ನು ಕೆಲವರು ಇಂತಹ ಸ್ಟೈಲಿಗೆ ಒಗ್ಗಿಕೊಳ್ಳುತ್ತಿದ್ದಾರೆ. ಅದರಂತೆಯೇ ಐಷಾರಾಮಿ ಫ್ಯಾಷನ್ ಬ್ರಾಂಡ್ ಆಗಿರುವ ಬಾಲೆನ್ಸಿಯಾಗ ಹರಿದ ಮತ್ತು ತುಂಬಾ ಹಳೆಯದಾಗಿ ಕಾಣುವ ಶೂ ಅನ್ನು ಮಾರುಕಗ್ಟೆಗೆ ಪರಿಚಯಿಸಿದೆ.
ಬಾಲೆನ್ಸಿಯಾಗ ಅಧಿಕೃತ ಸೈಟ್ನಲ್ಲಿನ ವಿವರಣೆಯ ಪ್ರಕಾರ, ಸ್ನೀಕರ್ಗಳನ್ನು ಸಂಪೂರ್ಣವಾಗಿ ಕೊಳೆತ ಹತ್ತಿ ಮತ್ತು ರಬ್ಬರ್ನಿಂದ ತಯಾರಿಸಲಾಗುತ್ತದೆ. Balenciaga ದ ಈ ಸ್ನೀಕರ್ಗಳು ತಮ್ಮ ವೆಬ್ಸೈಟ್ ಮೂಲಕ ವಿಶ್ವಾದ್ಯಂತ ಲಭ್ಯವಿರುತ್ತವೆ. ಇದು ಈಗಾಗಲೇ ಯುರೋಪಿಯನ್ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಮೇ 16 ರಂದು ಯುನೈಟೆಡ್ ಸ್ಟೇಟ್ಸ್ ಮತ್ತು ಮಧ್ಯಪ್ರಾಚ್ಯದಲ್ಲಿ ಮತ್ತು ಮೇ 23 ರಂದು ಜಪಾನ್ನಲ್ಲಿ ಅಂಗಡಿಗಳಲ್ಲಿ ಲಭ್ಯವಿರುತ್ತದೆ.