ವಿಮಾನದಲ್ಲಿ ಮಗು ಜನನವಾದರೆ ಇನ್ನು ಮುಂದೆ ವಿಮಾನದಲ್ಲಿ ಓಡಾಡುವಾಗ ಫ್ರೀ ಟಿಕೆಂಟ್ ಅಂತೆ, ಹೌದಾ? ವ್ಯಕ್ತಿಯು ಯಾವುದೇ ದೇಶಕ್ಕೆ ಹೋಗಲು ವೀಸಾ ತೆಗೆದುಕೊಳ್ಳಬೇಕಾಗಿಲ್ಲ. ಅಷ್ಟೇ ಅಲ್ಲ, ಹುಟ್ಟಿದ ಸಮಯದಲ್ಲಿ ಮಗುವಿಗೆ ವಿಮಾನವು ಹಾರಿದ ದೇಶದ ಪೌರತ್ವವನ್ನು ನೀಡಲಾಗುತ್ತದೆ ಎಂದೆಲ್ಲಾ ಮಾತುಗಳು ಕೇಳಿ ಬರುತ್ತಿತ್ತು. ಆದರೆ ಈ ಮಾತುಗಳೆಲ್ಲಾ ಸುಳ್ಳು. ಗಾಳಿ ಸುದ್ಧಿ ಅಂತಲೇ ಹೇಳಬಹುದು.
ವಿಮಾನದಲ್ಲಿ ಮಗುವಿನ ಜನನದ ಸಮಯದಲ್ಲಿ, ಹುಟ್ಟಿದ ಸಮಯ ಮತ್ತು ಅದು ಯಾವ ದೇಶದ ಗಡಿಯಿಂದ ಹಾರುತ್ತದೆ ಎಂಬುದನ್ನು ಮೊದಲು ಗಮನಿಸಬೇಕು. ವಿಮಾನ ಬಂದಿಳಿದ ವಿಮಾನ ನಿಲ್ದಾಣ ಪ್ರಾಧಿಕಾರವು ಮಗುವಿನ ಜನನ ಪ್ರಮಾಣಪತ್ರವನ್ನು ಕೇಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮಗುವಿನ ಜನನ ಪ್ರಮಾಣಪತ್ರದಲ್ಲಿ ಮಗು ಹುಟ್ಟಿದ ಗಡಿಯ ಆಧರಿಸಿ ಪೌರತ್ವ ನೀಡಬಹದು. ಆದಾಗ್ಯೂ, ಮಗುವಿಗೆ ಪೋಷಕರ ದೇಶದ ಪೌರತ್ವವನ್ನು ಪಡೆಯುವ ಹಕ್ಕನ್ನು ಸಹ ಹೊಂದಿದೆ.