ಚಾಲಕ ಮತ್ತು ವಾಹನ ಚಲಾಯಿಸುವ ಕೆಲಸ ಸುಲಭದ ಕೆಲಸವೇನಲ್ಲ. ಅದರಲ್ಲೂ ಬಸ್, ಟ್ರಕ್ ಚಲಾಯಿಸುವ ಕೆಲಸ ಅತಿ ಕಷ್ಟಕರವಾದದ್ದು. ಟ್ರಕ್ ಚಲಾಯಿಸುವವರು ದಿನನಿತ್ಯ ಪ್ರಯಾಣದಲ್ಲೇ ಇರುತ್ತಾರೆ. ಊರು, ರಾಜ್ಯಗಳನ್ನು ದಾಡುತ್ತಾ ಪ್ರಯಾಣ ಮಾಡುವವರೂ ಇದ್ದಾರೆ. ಅಂದಹಾಗೆಯೇ ಇಲ್ಲೊಬ್ಬಳು ಮಹಿಳಾ ಟ್ರಕ್ ಡ್ರೈವರ್ ಜೀವನದ ಕಥೆ ತುಂಬಾ ಚೆನ್ನಾಗಿದೆ. ಅಂದಹಾಗೆಯೇ ಈಕೆಯ ಹೆಸರು ಆಶ್ಲಿಯಾ. ಡೈಲಿ ಸ್ಟಾರ್ ಪ್ರಕಾರ, ಆಶ್ಲಿಯಾ 6 ತಿಂಗಳ ಕಾಲ ಟ್ರಕ್ ಅನ್ನು ಓಡಿಸುತ್ತಾರೆ. ಆದರೆ ಆಶ್ಲಿಯಾ ಬರೀ ಆರು ತಿಂಗಳಿಗೆ £ 63k ಗಳಿಸುತ್ತಾರೆ. ಭಾರತೀಯ ಕರೆನ್ಸಿಯ ಪ್ರಕಾರ ಆರು ತಿಂಗಳಿಗೆ ಈಕೆ 60 ಲಕ್ಷ 25 ಸಾವಿರ ರೂಪಾಯಿಗಳಷ್ಟು ದುಡಿಯುತ್ತಾರೆ.
ಆಶ್ಲಿಯಾ ಫ್ಲೈ ಇನ್ ಫ್ಲೈ ಔಟ್ ವರ್ಕರ್ ಆಗಿ ಕೆಲಸ ಮಾಡುತ್ತಾಳೆ. ಇಲ್ಲಿ ನೌಕರರನ್ನು ಅಲ್ಪಾವಧಿಗೆ ದೂರದ ಪ್ರದೇಶಗಳಿಗೆ ಕಳುಹಿಸಲಾಗುತ್ತದೆ. ಆಶ್ಲಿಯಾ ಯಾವುದೇ ಅನುಭವವಿಲ್ಲದೆ ರಿಮೋಟ್ ಗಣಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತಾಳೆ. ಇರೊಂದಿಗೆ ಈಕೆ ಟಿಕ್ಟಾಕ್ ಮಾಡುತ್ತಾಳೆ. ಹೀಗಾಗಿ ಆಶ್ಲಿಯಾ ಇವೆಲ್ಲವನ್ನು ಸೇರಿಸಿ ಆರು ತಿಂಗಳಿಗೆ 60 ಲಕ್ಷಕ್ಕಿಂತ ಹೆಚ್ಚು ಗಳಿಸುತ್ತಿದ್ದಾಳೆ.