ಮದುವೆ ಫೋಟೋಗ್ರಫಿ, ಸಿನಿಮಾ ಫೋಟೋಗ್ರಫಿ, ಪ್ರಕೃತಿ ಫೋಟೋಗ್ರಫಿ ಬಗ್ಗೆ ನೀವು ಕೇಳಿರುತ್ತೀರಿ. ಆದರೆ, ಹೆಣ್ಣುಮಕ್ಕಳ ಗುಪ್ತಾಂಗದ ಫೋಟೋ ತೆಗೆಯುವ ಬಗ್ಗೆ ಎಲ್ಲಾದರೂ ಕೇಳಿದ್ದೀರಾ?
2/ 18
ಆಸ್ಟ್ರೇಲಿಯಾದ ಮಹಿಳೆಯೋರ್ವಳು ಇದೇ ರೀತಿಯ ಕೆಲಸವನ್ನು ಮಾಡುತ್ತಿದ್ದಾಳೆ. ಈಕೆ ಗುಪ್ತಾಂಗದ ಫೋಟೋಗಳನ್ನು ತೆಗೆದು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾಳೆ.
3/ 18
ಎಲ್ಲೀ ಎಗ್ವಿಕ್ ಈಕೆಯ ಹೆಸರು. ಆಸ್ಟ್ರೇಲಿಯಾ ಇವಳ ಊರು. ಈಕೆಯ ಹಳೆಯ ಬಾಯ್ ಫ್ರೆಂಡ್ ಈಕೆಯ ಗುಪ್ತಾಂಗದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ. ಅದು ತುಂಬಾನೇ ಕುರೂಪವಾಗಿದೆ ಎಂದು ಜರಿದಿದ್ದ.
4/ 18
ಇದರಿಂದ ಎಗ್ವಿಕ್ ತುಂಬಾನೇ ಬೇಸರಗೊಂಡಿದ್ದಳು. ಅಷ್ಟೇ ಅಲ್ಲ, ಇದಕ್ಕಾಗಿ ಗುಪ್ತಾಂಗದ ಸರ್ಜರಿಗೆ ಕೂಡ ಒಳಗಾಗಿದ್ದಳು. ನಂತರ ವೈದ್ಯೆಯೊಬ್ಬಳು ಆಕೆ ತಪ್ಪಾಗಿ ತಿಳಿದುಕೊಂಡಿರು ಬಗ್ಗೆ ಹೇಳಿದ್ದಳು.
5/ 18
ಇದರಿಂದ ಬೇಸರಗೊಂಡ ಎಗ್ವಿಕ್, ಗುಪ್ತಾಂಗದ ಫೋಟೋಗ್ರಾಫಿ ಮಾಡಲು ಆರಂಭಿಸಿದ್ದಳು. ಈ ಮೂಲಕ ಖಾಸಗಿ ಭಾಗ ಎಂಬುದು ವಿಕಾರವಾಗಿರುವುದಿಲ್ಲ, ಎಲ್ಲವೂ ಸುಂದರವಾಗಿರುತ್ತದೆ ಎಂಬುದನ್ನು ಸಾಬೀತು ಮಾಡಲು ಮುಂದಾಗಿದ್ದಳು.
6/ 18
ನನ್ನ ಬಾಯ್ ಫ್ರೆಂಡ್ ನನ್ನನ್ನು ಹೀಯಾಳಿಸಿದ್ದ. ಇದರಿಂದ ನಾನು ತುಂಬಾನೇ ಬೇಸರಗೊಂಡಿದ್ದೆ. ಆದರೆ, ವೈದ್ಯರು ನನ್ನಲ್ಲಿ ಜಾಗೃತಿ ಮೂಡಿಸಿದ್ದರು. ಇದರಿಂದ, ನಾನು ಈ ನಿರ್ಧಾರಕ್ಕೆ ಬಂದಿದ್ದೆ ಎನ್ನುತ್ತಾಳೆ ಎಗ್ವಿಕ್.