ಪಶ್ಚಿಮ ಬಂಗಾಳದ ಪರಿಸರದ ಮಡಿಲಲ್ಲಿ ಹಲವಾರು ಮರಗಳು ಬೆಳೆದು ನಿಂತಿವೆ. ಆದರೆ ಆ ಮರಗಳು ಇದೀಗ ಕಲಾವಿದರ ಕ್ಯಾನ್ವಾಸ್ ಆಗಿ ಮಾರ್ಪಟ್ಟಿದೆ. ಹಬ್ರಾದ ಬನಿಪುರ ಪ್ರದೇಶದ ಕಲಾವಿದ ಸಂಜಯ್ ಸರ್ಕಾರ್ ಅವರ ಕೈಚಳಕದಿಂದ ಮರಗಳು ವಿಭಿನ್ನ ರೂಪ ಪಡೆದಿವೆ. ಸುತ್ತಲೂ ಮರಗಳು ನಾಶವಾಗುತ್ತಿರುವಾಗ, ಇಲ್ಲೊಬ್ಬರು ಕಲಾವಿದರು ಮರಗಳನ್ನು ಉಳಿಸಿ ಎಂಬ ಸಂದೇಶದ ಜೊತೆಗೆ, ಮರಗಳ ಮೇಲಿನ ಪರಿಸರದ ವಿವಿಧ ಸೃಷ್ಟಿಗಳನ್ನು ಚಿತ್ರಿಸಿದ್ದಾರೆ.